ಬೆಲ್‌ಫಾಸ್ಟ್: ನಾಯಕ ರಶೀದ್ ಖಾನ್ ಅವರ ಅದ್ಭುತ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಐರ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಅಫ್ಘಾನ್ ಪಡೆ, 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ತಂಡಕ್ಕೆ ಇದು ಸತತ ನಾಲ್ಕನೇ ವಿಶ್ವಕಪ್ ಪ್ರವೇಶ ಎಂಬುದು ಗಮನಾರ್ಹ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡವನ್ನು ಅಫ್ಘಾನಿಸ್ತಾನದ ಬೌಲರ್‌ಗಳು 206 ರನ್‌ಗಳಿಗೆ ಕಟ್ಟಿಹಾಕಿದರು. ರಶೀದ್ ಖಾನ್ ಮತ್ತು ಘಜನ್‌ಫರ್ ತಮ್ಮ ಸ್ಪಿನ್ ಜಾದೂ ಮೂಲಕ ಐರ್ಲೆಂಡ್‌ನ ಅಗ್ರಸಾಲಿನ ಬ್ಯಾಟರ್‌ಗಳನ್ನು ಕಂಗಾಲು ಮಾಡಿದರು. ರಶೀದ್ ಖಾನ್ ಲೋರ್ಕನ್ ಟಕರ್, ಕರ್ಟಿಸ್ ಕ್ಯಾಂಫರ್ ಸೇರಿದಂತೆ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಐರ್ಲೆಂಡ್‌ಗೆ ಯುವ ಆಟಗಾರ ಗೇವಿನ್ ಹೋಯ್ ಮತ್ತು ಜೈ ಮುಂದ್ರಾ ಆಸರೆಯಾದರು.
ಒಂದು ಹಂತದಲ್ಲಿ 128 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ತಲೆಯೆತ್ತಲಾಗದ ಸ್ಥಿತಿಯಲ್ಲಿದ್ದ ಐರ್ಲೆಂಡ್‌ಗೆ ಈ ಜೋಡಿ 9ನೇ ವಿಕೆಟ್‌ಗೆ ಬರೋಬ್ಬರಿ 76 ರನ್‌ಗಳ ದಾಖಲೆಯ ಪಾಲುದಾರಿಕೆ ನೀಡಿತು. ಧೈರ್ಯವಾಗಿ ಬ್ಯಾಟ್ ಬೀಸಿದ ಮುಂದ್ರಾ 31 ರನ್ ಗಳಿಸಿ ಔಟಾದರೆ, ಗೇವಿನ್ ಹೋಯ್ 36 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಐರ್ಲೆಂಡ್ 47ನೇ ಓವರ್‌ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ದೀರ್ಘಾವಧಿಯ ನಂತರ ತಂಡಕ್ಕೆ ಮರಳಿದ್ದ ಯಮಿನ್ ಅಹ್ಮದ್‌ಝಾಯ್ ಎರಡು ವಿಕೆಟ್ ಪಡೆದು ಗಮನ ಸೆಳೆದರು.
207 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನಕ್ಕೆ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಆರಂಭ ನೀಡಿದರು. ತಮ್ಮ 8ನೇ ಏಕದಿನ ಅರ್ಧಶತಕ ಪೂರೈಸಿದ ಗುರ್ಬಾಜ್ 71 ರನ್ ಗಳಿಸಿ ತಂಡಕ್ಕೆ ಬಲ ತುಂಬಿದರು. ಆದರೆ ನಂತರ ಪಂದ್ಯಕ್ಕೆ ತಿರುವು ನೀಡಿದ್ದು ಐರ್ಲೆಂಡ್‌ನ ಯುವ ಲೆಗ್‌ಸ್ಪಿನ್ನರ್ ಗೇವಿನ್ ಹೋಯ್. 34 ರನ್ ನೀಡಿ 4 ವಿಕೆಟ್ ಕಸಿದ ಹೋಯ್, ಅಫ್ಘಾನ್ ಮಧ್ಯಮ ಕ್ರಮಾಂಕವನ್ನು ಧ್ವಂಸಗೊಳಿಸಿದರು. ಸೆಡಿಖುಲ್ಲಾ ಅಟಲ್, ಹಶ್ಮತುಲ್ಲಾ ಶಾಹಿದಿ, ದರ್ವಿಶ್ ರಸೂಲಿ ಮತ್ತು ಅಜ್ಮತುಲ್ಲಾ ಒಮರ್‌ಜಾಯ್ ಸತತವಾಗಿ ವಿಕೆಟ್ ಒಪ್ಪಿಸಿದ್ದರಿಂದ ಅಫ್ಘಾನಿಸ್ತಾನ ದಿಢೀರ್ ಒತ್ತಡಕ್ಕೆ ಸಿಲುಕಿತು.
ಈ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ನಾಯಕ ರಶೀದ್ ಖಾನ್ ತಂಡವನ್ನು ಗೆಲುವಿನ ದಂಡೆಗೆ ತಲುಪಿಸಿದರು. ಅತ್ಯಂತ ಸಮಾಧಾನದಿಂದ ಬ್ಯಾಟ್ ಬೀಸಿದ ಅವರು, ಕೊನೆಯ ಹಂತದಲ್ಲಿ ಅಗತ್ಯವಿದ್ದಾಗ ಬೌಂಡರಿಗಳನ್ನು ಬಾರಿಸಿ 37 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರಿಗೆ ಸಾಥ್ ನೀಡಿದ ಅಹ್ಮದ್‌ಝಾಯ್ 26 ಎಸೆತಗಳಲ್ಲಿ 4 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡರು. 45ನೇ ಓವರ್‌ನಲ್ಲಿ ಹ್ಯಾರಿ ಟೆಕ್ಟರ್ ಎಸೆತದಲ್ಲಿ ರನ್ ಗಳಿಸುವ ಮೂಲಕ ರಶೀದ್ ಪಂದ್ಯವನ್ನು ಮುಕ್ತಾಯಗೊಳಿಸಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಂಚೂಣಿಯಲ್ಲಿ ನಿಂತು ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ರಶೀದ್ ಖಾನ್, ತಮ್ಮ ತಂಡದ ವಿಶ್ವಕಪ್ ಕನಸನ್ನು ನನಸು ಮಾಡಿದ್ದಾರೆ.
22 Overs Completed! 📝
AM Ghazanfar (2/6), @rashidkhan_19 (1/8), @fazalfarooqi10 (1/21) and @yamiinkhan99 (1/30) have chipped in with wickets each as the home side reach 90/5 after 22 overs in the first innings. 👏#AfghanAtalan | #IREvAFG | #GloriousNationVictoriousTeam pic.twitter.com/SvSk38fVxm
— Afghanistan Cricket Board (@ACBofficials) August 10, 2026
𝐓.𝐈.𝐌.𝐁.𝐄.𝐑! 🎯@rashidkhan_19 did what he does best as he went through the defenses of Harry Tector for 14 to give Afghanistan the 6th wicket in the game.
🇮🇪- 106/6 (26.2 Overs)#AfghanAtalan | #IREvAFG | #GloriousNationVictoriousTeam pic.twitter.com/fGx4qbCPl0
— Afghanistan Cricket Board (@ACBofficials) August 10, 2026
Wickets Continue to Tumble in Belfast! 👏
Rashid Khan (3/29) and AM Ghazanfar (3/19) complete three wickets each in the game as Afghanistan get 8 wickets in the game. 👍
🇮🇪- 128/8 (29.4 Ov)#AfghanAtalan | #IREvAFG | #GloriousNationVictoriousTeam pic.twitter.com/qVsg8E7n9k
— Afghanistan Cricket Board (@ACBofficials) August 10, 2026
𝐌𝐀𝐓𝐂𝐇-𝐖𝐈𝐍𝐍𝐈𝐍𝐆 𝐑𝐀𝐒𝐇𝐈𝐃 𝐊𝐇𝐀𝐍! 🪄
3/44 with the ball! 🎯
37* with the bat! 💥@rashidkhan_19 delivered another brilliant all-round performance to guide Afghanistan to victory and claim his second successive Player of the Match award! 👏💙#AfghanAtalan |… pic.twitter.com/r4JZlbJJNk— Afghanistan Cricket Board (@ACBofficials) August 10, 2026

