ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ತಿಳಿಸಿದ್ದಾರೆ.
ಖಾಲಿ ನಿವೇಶನಗಳಲ್ಲಿ ತ್ಯಾಜ್ಯವಿದ್ದಲ್ಲಿ ಆಗಸ್ಟ್ 15 ರೊಳಗೆ ತೆರವುಗೊಳಿಸಬೇಕು. ಆಗಸ್ಟ್ 15ರ ನಂತರ ಖಾಲಿ ನಿವೇಶನಗಳಲ್ಲಿ ತ್ಯಾಜ್ಯವಿದ್ದರೆ ಆಯಾ ಪಾಲಿಕೆಗಳಿಂದ ಸ್ವಚ್ಛಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ದಂಡ ರೂಪದಲ್ಲಿ ವಸೂಲಿ ಮಾಡಲಾಗುವುದು.
ನಿವೇಶನ ಸ್ವಚ್ಛಗೊಳಿಸಲು ತಗಲುವ ವೆಚ್ಚ, ತ್ಯಾಜ್ಯ, ಡೆಬ್ರಿಸ್ ಸಾಗಣೆ ವೆಚ್ಚ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಕನಿಷ್ಠ 25,900 ರೂ.ನಿಂದ 1.75 ಲಕ್ಷ ರೂ.ವರೆಗೆ ಇದರ ವೆಚ್ಚ ಇರುತ್ತದೆ. ನಿವೇಶನಗಳ ಅಳತೆಯ ಆಧಾರದ ಮೇಲೆ ವೆಚ್ಚವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಹೇಳಲಾಗಿದೆ.
ಚಿತ್ರಕೃಪೆ: ಎಐ

