HomeLatest Newsಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ, ಮಾಡೇ ಮಾಡುತ್ತೇವೆ: ಬೆಂಗಳೂರಿನ ಪ್ರತಿ ಮನೆಯವರೂ ಬಂದ್ ನಲ್ಲಿ ಭಾಗಿಯಾಗಬೇಕು:...

ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ, ಮಾಡೇ ಮಾಡುತ್ತೇವೆ: ಬೆಂಗಳೂರಿನ ಪ್ರತಿ ಮನೆಯವರೂ ಬಂದ್ ನಲ್ಲಿ ಭಾಗಿಯಾಗಬೇಕು: ವಾಟಾಳ್ ನಾಗರಾಜ್

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ಆಗಸ್ಟ್ 13ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್​​ಗೆ ಕರೆ ನೀಡಿದ್ದು, ಆದರೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಕರ್ನಾಟಕ ಬಂದ್ ಕೈಬಿಡಲಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಯಾವುದೇ ಕಾರಣಕ್ಕೂ ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಆಗಸ್ಟ್ ೧೩ರಂದು ಬಂದ್ ಮಾಡೇ ಮಾಡುತ್ತೇವೆ. ಅಖಂಡ ಕರ್ನಾಟಕ ಬಂದ್ ನಡೆಯಲಿದೆ. ಈ ಬಗ್ಗೆ ಗೊಂದಲವಿಲ್ಲ ಎಂದು ಹೇಳಿದರು.

ಇಡೀ ಕರ್ನಾಟಕದ ಉದ್ದಗಲಕ್ಕೂ ಬಂದ್​ಗೆ ಬೆಂಬಲವಿದೆ. 2000ಕ್ಕೂ ಮೇಲ್ಪಟ್ಟು ಸಂಘಟನೆಗಳು ಬೆಂಬಲ ನೀಡಿವೆ. ವಿಧ್ಯಾರ್ಥಿಗಳು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ನಮ್ಮ ಬೇಡಿಕೆಗೆ ಬಂದ್ ಮಾಡಿದರೆ ಅದರ ಶಕ್ತಿಯೇ ಬೇರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂದ್​ ಬೇಡ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಂದ್ ಮಾಡೋದು ಬೇಡ ಅಂತ ನನ್ನ ಬಳಿ ಯಾರೂ ಹೇಳಿಲ್ಲ. ಬಂದ್ ಮಾಡಬೇಕು ಅಂತಾನೇ ಎಲ್ಲರೂ ಹೇಳಿರೋದು. ಕನ್ನಡ ಒಕ್ಕೂಟದಲ್ಲಿ ಯಾವುದೇ ರೀತಿಯ ಬಿರುಕು ಮೂಡಿಲ್ಲ. ಬಿರುಕು ಮೂಡಿದರೆ ಸಿಮೆಂಟ್ ಹಾಕಿ ಸರಿ ಮಾಡುತ್ತೇವೆ. ಮಳೆ ಬಂದು ಯಾವ ಡ್ಯಾಂ ತುಂಬಿದೆ? ಕೆಆರ್​​ಎಸ್​ ಡ್ಯಾಂ ಇನ್ನೂ ತುಂಬಿಲ್ಲ ಎಂದು ಹೇಳಿದರು.

ಕುಡಿಯುವ ನೀರು ಎಲ್ಲರಿಗೂ ಬೇಕು. ಅಂದಮೇಲೆ ಬೆಂಗಳೂರಿನ ಪ್ರತಿ ಮನೆಯವರೂ ಬಂದ್ ನಲ್ಲಿ ಭಾಗಿಯಾಗಬೇಕು. ನೀರಿಗಾಗಿ ಒತ್ತಾಯಿಸಬೇಕು ಎಂದರು. ಮೇಕೆದಾಟು ಯೋಜನೆಗಾಗಿ ಸಿಎಂ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಮಾಡಿದರು. ಏಕೆ ಮೇಕೆದಾಟು ಯೋಜನೆಯನ್ನ ಇನ್ನೂ ಮಾಡಿಲ್ಲ? ಎಂದು ಪ್ರಶ್ನಿಸಿದರು. ಮೇಕೆದಾಟು ಯೋಜನೆ ಅನುಷ್ಠಾನಗೊಳ್ಳದಿದ್ದರೆ ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ವಾಸಿಸುವ ತಮಿಳರು, ತೆಲುಗು, ಮಲಯಾಳಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಅಭಾವ ಎದುರಾಗಲಿದೆ. ಹಾಗಾಗಿ ಬಂದ್ ನಲ್ಲಿ ಎಲ್ಲರೂ ಭಾಗಿಯಾಗಬೇಕು. ಬಂದ್ ಯಶಸ್ವಿಯಾಗಬೇಕು ಎಂದು ಹೇಳಿದರು.

ಆಗಸ್ಟ್ 13ರ ಇಡೀ ಕರ್ನಾಟಕ ಬಂದ್‌ಗೆ ಸರ್ವ ಭಾಷಿಕರು ಬೆಂಬಲ ನೀಡಬೇಕು ಹಾಗೂ ಪ್ರತಿಯೊಬ್ಬರೂ ಬೀದಿಗಿಳಿದು ಮನೆ-ಮನೆಯಿಂದ ಈಡುಗಾಯಿ ಒಡೆದು ಬಂದ್ ಯಶಸ್ವಿಗೊಳಿಸುವಂತೆ ಮಾಡಬೇಕು ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular