HomeKarnatakaಹೆದರುವ ಮಾತೇ ಇಲ್ಲ; ವ್ಹೀಲ್ ಚೇರ್ ನಲ್ಲಿಯೇ ರೈತರ ಪರ ಹೋರಾಟ ಮಾಡುತ್ತೇನೆ: ಮಾಜಿ ಪ್ರಧಾನಿ...

ಹೆದರುವ ಮಾತೇ ಇಲ್ಲ; ವ್ಹೀಲ್ ಚೇರ್ ನಲ್ಲಿಯೇ ರೈತರ ಪರ ಹೋರಾಟ ಮಾಡುತ್ತೇನೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಆರಂಭಿಸಿರುವ ಪಾದಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭಾಗವಹಿಸಿದ್ದಾರೆ.

ಈ ವೇಳೆ ಮಾತನಾಡಿದ ಹೆಚ್.ಡಿ.ದೇವೇಗೌಡ, ಜೆಡಿಎಸ್ ಪಾದಯಾತ್ರೆಯನ್ನು ‘ಪ್ರಾಯಶ್ಚಿತ್ತ ಯಾತ್ರೆ’ ಎಂದು ಕರೆಯುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಯಾರಿಗೆ ಪ್ರಾಯಶ್ಚಿತ್ತ ಆಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದರು. ಮೂರು ವರ್ಷ ಅಧಿಕಾರ ನಡೆಸಿದ್ದಾರೆ. ಇನ್ನು ಎರಡು ವರ್ಷ ಬಾಕಿ ಇದೆ. ಈ ಮೂರು ವರ್ಷದ ಅವದಿಯಲ್ಲಿನ ಕಾಂಗ್ರೆಸ್ ಸರ್ಕಾರದ ನಡವಳಿಕೆ ನೋಡಿದರೆ ಪ್ರಾಯಶ್ಚಿತ ಕಾಂಗ್ರೆಸ್ ಗೆ ಆಗುತ್ತಾ, ಜೆಡಿಎಸ್ ಗೆ ಆಗುತ್ತಾ ಎಂಬುದನ್ನು ಮುಂದೆ ನೋಡೋಣ ಎಂದು ತಿರುಗೇಟು ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಸರ್ಕಾರದ ಈ ನಡವಳಿಕೆಯಿಂದ ಮುಂಬರುವ ದಿನಗಳಲ್ಲಿ ಯಾರಿಗೆ ಹಾನಿಯಾಗಲಿದೆ ಎಂಬುದನ್ನು ಕಾಲವೇ ಉತ್ತರಿಸಲಿದೆ. ನಾನು ರೈತನ ಮಗನಾಗಿ ಹುಟ್ಟಿದ್ದು, ನಮ್ಮ ಜೀವನ ಪೂರ್ತಿ ರೈತರ ಪರವಾಗಿಯೇ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ನಾನು ಮಾಡಿದ ಹೋರಾಟದ ಬಗ್ಗೆ ನಿದರ್ಶನ ಕೊಡಬಲ್ಲೆ. ರೈತರ ವಿಚಾರ ಬಂದಾಗ ಹಿಂದೆ ಮುಂದೆ ನೋಡಲ್ಲ, ರೈತರ ಪರ ನಿಲ್ಲುತ್ತೇನೆ.

ರೈತರಿಗೆ ಅನ್ಯಾಯವಾಗಲು ಬಿಡಲ್ಲ. ನನ್ನ ದೇಹಕ್ಕೆ ವಯಸ್ಸಾಗಿದೆ ಆದರೆ ಬುದ್ಧಿಗಲ್ಲ. ವ್ಹೀಲ್​ಚೇರ್‌ನಲ್ಲಾದರೂ ಸರಿ, ರೈತರ ನ್ಯಾಯಕ್ಕಾಗಿ ಹೋರಾಟವನ್ನು ಮಾಡಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular