HomeKarnatakaSHOCKING: ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ಹೋಗಿದ್ದ ಯುವಕ ನಾಪತ್ತೆ ಪ್ರಕರಣ: ಲ್ಯಾಪ್ ಟಾಪ್ ನಲ್ಲಿ...

SHOCKING: ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ಹೋಗಿದ್ದ ಯುವಕ ನಾಪತ್ತೆ ಪ್ರಕರಣ: ಲ್ಯಾಪ್ ಟಾಪ್ ನಲ್ಲಿ ಹಲವು ಸ್ಫೋಟಕ ಸಂಗತಿ ಬಯಲು

ಬೆಂಗಳೂರು: ಶಿವಗಂಗೆ ಬೆಟ್ಟಕ್ಕೆ ಟ್ರೆಕಿಂಗ್ ಹೋಗಿದ್ದ ಯುವಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನಿಗಾಗಿ ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ನಲ್ಲಿ ಶೋಧ ಕಾರ್ಯಾಚರಣೆ ನಾಲ್ಕನೇ ದಿನವು ಮುಂದುವರೆದಿದೆ. ಈವರೆಗೂ ಯುವಕ ಪತ್ತೆಯಾಗಿಲ್ಲ. ಆದರೆ ಆತನ ಲ್ಯಾಪ್ ಟಾಪ್ ನಲ್ಲಿ ಹಲವು ಸ್ಫೋಟಕ ಸಂಗತಿ ಬಯಲಾಗಿದೆ.

ಬೆಂಗಳೂರಿನ ವೈಟ್ ಫೀಲ್ಡ್ ನಿಂದ ಬಡಿಗೆ ಬೈಕ್ ಪಡೆದು ಶಿವಗಂಗೆ ಬೆಟ್ಟಕ್ಕೆ ಹೋಗಿದ್ದ ಐಟಿ ಉದ್ಯೋಗಿ ಯುವಕ 31 ವರ್ಷದ ಅದ್ವೈತ್ ಉಪಾಧ್ಯಾಯ, ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿದ್ದಾನೆ. ಅದ್ವತ್ ನಾಪತ್ತೆಯಾಗಿ ನಾಲ್ಕು ದಿನಗಳಾಗಿದ್ದು, ಶಾಂತಲಾ ಡ್ರಾಪ್ ನಲ್ಲಿ ಇಂದು ಕುಡ ಶೋಧ ಕಾರ್ಯ ಮುಂದುವರೆದಿದೆ.

ನೆಲಮಂಗಲ, ಡಾಬಸ್ ಪೇಟೆ ಪೊಲೀಸರು ಹಾಗೂ 60 ಸಿಬ್ಬಂದಿಗಳ ತಂಡದಿಂದ ಅದೈತ್ ಗಾಗಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಅದ್ವೈತ್ ಶಿವಗಂಗೆ ಬೆಟ್ಟ ಹತ್ತುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ ಅಧ್ವತ್ ಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿತ್ತು. ಆತ ಶಿವಗಂಗೆ ಬೆಟ್ಟ ತಾನು ಹತ್ತುತ್ತಿದ್ದಂತೆ ಫೋಟೋವನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಕಳುಹಿಸಿದ್ದಾನೆ. ಇದೇ ವೇಳೆ ಬೆಟ್ಟ ಹತ್ತುತ್ತಿದ್ದಾಗ ಬೇರೊಬ್ಬರ ಮೊಬೈಲ್ ನಲ್ಲಿ ಅದೈತ್ ನ ಫೋಟೊ ಬ್ಲರ್ ಆಗಿ ಸೆರೆಯಾಗಿರುವುದು ಕೂಡ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈನಡುವೆ ಅದ್ವೈತ್ ಉಪಾಧ್ಯಾಯನ ವೈಟ್ ಫೀಲ್ಡ್ ಬಳಿಯ ಕಾಡುಗೋಡಿ ನಿವಾಸದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಅದ್ವೈತ್ ನ ಲ್ಯಾಪ್ ಟಾಪ್ ಪತ್ತೆಯಾಗಿದೆ. ಅದರಲ್ಲಿ ಹಲವು ಸ್ಫೋಟಕ ಸಂಗತಿ ಬಯಲಾಗಿದೆ. ಅದ್ವೈತ್ ಇಂಟರ್ ನೆಟ್ ನಲ್ಲಿ ಎಐ ಮೂಲಕ ಆತ್ಮಹತ್ಯೆಯ ಬಗ್ಗೆ ಸರ್ಚ್ ಮಾಡಿದ್ದಾನೆ. ಶಿವಗಂಗೆಯ ಶಾಂತಲಾ ಡ್ರಾಪ್ ಬಗ್ಗೆಯೂ ಇಂಟರ್ ನೆಟ್ ನಲ್ಲಿ ಪರಿಶೀಲಿಸಿದ್ದಾನೆ.

ಅಲ್ಲದೇ ಶಾಂತಲಾ ಡ್ರಾಪ್ ನಿಂದ ಆತ್ಮಹತ್ಯೆ ಮಾಡಿಕೊಳ್ಳಬಹುದಾ? ಎಲ್ಲಿಂದ ಬಿದ್ದರೆ ಎಷ್ಟೊತ್ತಿಗೆ ಬಿದ್ದರೆ ಸಾಯಬಹುದು? ಎಂದು ಎಐನಲ್ಲಿ ಸರ್ಚ್ ಮಾಡಿದ್ದಾನೆ. ಇದಕ್ಕೆ ಎಐ 7:30ಕ್ಕೆ ಬಿದ್ದು ಸಾಯಬಹುದು ಎಂದಿದೆ. ಬಳಿಕ ಆಗಸ್ಟ್ 4ರಂದು ಶಿವಗಂಗೆಯ ಶಾಂತಲಾ ಡ್ರಾಪ್ ಗೆ ಅದ್ವೈತ್ ಬಂದಿದ್ದಾನೆ ಎಂದು ತಿಳಿದುಬಂದಿದೆ.

ಇದೇ ವೇಳೆ ಅದೈತ್ ಕಳೆದ ತಿಂಗಳು ಕೂಡ ಶಿವಗಂಗೆ ಬೆಟ್ಟಕ್ಕೆ ಬಂದು ಶಾಂತಲಾ ಡ್ರಾಪ್ ನ್ನು ಪರಿಶೀಲನೆ ನಡೆಸಿಕೊಂಡು ಹೋಗಿದ್ದ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಹೀಗಾಗಿ ಯುವಕ ಅದೈತ್ ಶಾಂತಲಾ ಡ್ರಾಪ್ ನಿಂದ ಆತ್ಮಹತ್ಯೆಗೆ ಶರಣಗೈರುವ ಶಂಕೆ ವ್ಯಕ್ತವಾಗಿದೆ. ಆದರೆ ನಿಶ್ಚಿತಾರ್ಥವಾಗಿದ್ದ ಯುವಕ, ಐಟಿ ಉದ್ಯೋಗಿ ಇದ್ದಕ್ಕಿದ್ದಂತೆ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡಿದ್ಯಾಕೆ? ಎಂಬುದು ತಿಳಿದುಬಂದಿಲ್ಲ. ಆದೈತ್ ಪತ್ತೆ ಬಳಿಕ ಹಾಗೂ ಪೊಲೀಸರ ತನಿಖೆ ನಂತರವೇ ಸತ್ಯ ಬಯಲಾಗಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular