ಇಂಡಿಯಾ ಕೌಚರ್ ವೀಕ್ 2026 ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ತಮ್ಮ ಹಾಟ್ ಹಾಗೂ ಗ್ಲಾಮರಸ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಖ್ಯಾತ ಡಿಸೈನರ್ ಕುನಾಲ್ ರಾವಲ್ ಅವರ ಫ್ಯಾಷನ್ ಪ್ರದರ್ಶನದಲ್ಲಿ ಭಾಗವಹಿಸಿದ್ದ ಸಾರಾ, ಕಪ್ಪು ಬಣ್ಣದ ಮಿನಿ ಡ್ರೆಸ್ ಧರಿಸಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಚಿತ್ರಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಡಿಸೈನರ್ ಕುನಾಲ್ ರಾವಲ್ ಅವರ ಸೃಜನಶೀಲತೆ ಮತ್ತು ಶೈಲಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಸಾರಾ ಅಲಿ ಖಾನ್ ಧರಿಸಿದ್ದ ಹೈ ನೆಕ್ ಮತ್ತು ಫುಲ್ ಸ್ಲೀವ್ ಹೊಂದಿದ್ದ ಕಪ್ಪು ಬಣ್ಣದ ಮಿನಿ ಡ್ರೆಸ್ ಅವರಿಗೆ ಅತ್ಯಂತ ಆಕರ್ಷಕ ಲುಕ್ ನೀಡಿದೆ. ಸರಳವಾಗಿದ್ದರೂ ಸಹ ಈ ಉಡುಪು ರಾತ್ರಿಯ ಪಾರ್ಟಿ ವಾತಾವರಣಕ್ಕೆ ಹೇಳಿ ಮಾಡಿಸಿದಂತಿತ್ತು. ಈ ಡ್ರೆಸ್ ಜೊತೆಗೆ ಅವರು ಧರಿಸಿದ್ದ ಬ್ಲಾಕ್ ಶೀರ್ ಸ್ಟಾಕಿಂಗ್ಸ್ ಮತ್ತು ಪಾಯಿಂಟೆಡ್ ಟೋ ಹೀಲ್ಸ್ ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದವು.
ಈ ಉಡುಪಿಗೆ ಸಾರಾ ಆಯ್ಕೆ ಮಾಡಿಕೊಂಡಿದ್ದ ಆಭರಣಗಳು ಪ್ರಮುಖ ಆಕರ್ಷಣೆಯಾಗಿದ್ದವು. ಮುಖದ ಒಂದು ಬದಿಗೆ ಮೆರುಗು ನೀಡುವಂತೆ ವಿನ್ಯಾಸಗೊಳಿಸಲಾಗಿದ್ದ ಬೆಳ್ಳಿಯ ಇಯರ್ ಕಫ್, ಕೈಗೆ ಧರಿಸಿದ್ದ ಸರಳ ಬಳೆಗಳು ಮತ್ತು ರಿಂಗ್ಸ್ ಅವರ ಬೋಲ್ಡ್ ಲುಕ್‌ಗೆ ಸೂಕ್ತವಾದ ಮೆರುಗು ತಂದಿದ್ದವು. ಡಾರ್ಕ್ ಸ್ಮೋಕಿ ಕಣ್ಣುಗಳು ಮತ್ತು ಸಿಂಪಲ್ ನ್ಯೂಡ್ ಲಿಪ್‌ಸ್ಟಿಕ್ ಜೊತೆಗೆ ಬ್ರಷ್ ಮಾಡಿದ ತಲೆಗೂದಲಿನ ಹೇರ್ ಸ್ಟೈಲ್ ಸಾರಾ ಅವರ ಗ್ಲಾಮರ್ ಅನ್ನು ಮತ್ತಷ್ಟು ಹೆಚ್ಚಿಸಿತ್ತು.

