HomeLatest Newsಯಶಸ್ವಿ ಜೈಸ್ವಾಲ್ ಜೊತೆ ಡೇಟಿಂಗ್?: ಗಾಸಿಪ್‌ಗಳಿಗೆ ಸಖತ್‌ ಟಾಂಗ್‌ ನೀಡಿದ ನಟಿ ಮೃಣಾಲ್ ಠಾಕೂರ್!

ಯಶಸ್ವಿ ಜೈಸ್ವಾಲ್ ಜೊತೆ ಡೇಟಿಂಗ್?: ಗಾಸಿಪ್‌ಗಳಿಗೆ ಸಖತ್‌ ಟಾಂಗ್‌ ನೀಡಿದ ನಟಿ ಮೃಣಾಲ್ ಠಾಕೂರ್!

ಚಿತ್ರರಂಗದ ತಾರೆಯರು ಹಾಗೂ ಕ್ರಿಕೆಟಿಗರ ನಡುವಿನ ಲಿಂಕ್ ಅಪ್ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಲೇ ಇರುತ್ತವೆ. ಇತ್ತೀಚೆಗೆ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಮತ್ತು ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಸದ್ದು ಮಾಡಿದ್ದವು. ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರುವ ಒಂದೇ ಕೆಫೆಯಿಂದ ಇಬ್ಬರೂ ಹೊರಬರುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ರೀತಿಯ ಚರ್ಚೆಗಳು ಆರಂಭವಾಗಿದ್ದವು.

ಆದರೆ ಈ ಗಾಸಿಪ್‌ಗಳಿಗೆ ನಟಿ ಮೃಣಾಲ್ ಠಾಕೂರ್ ಅವರೇ ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಸುಳ್ಳು ಸುದ್ದಿಗಳಿಗೆ ಪೂರ್ಣವಿರಾಮ ಹಾಕಿದ್ದಾರೆ. ತಮಗಿಂತ 9 ವರ್ಷ ಕಿರಿಯರಾದ ಜೈಸ್ವಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿ ಹಂಚಿಕೊಳ್ಳಲಾಗಿದ್ದ ಪೋಸ್ಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿರುವ ನಟಿ, “ಬ್ರೋ ರಿಲ್ಯಾಕ್ಸ್… ನಾವಿಬ್ಬರೂ ಎಲ್ಲಿ ಒಂದಾಗಿ ಕಾಣಿಸಿಕೊಂಡಿದ್ದೇವೆ? ವಿದ್ಯಾವಂತರಾದ ನೀವೇ ಹೀಗೆ ಗಾಸಿಪ್‌ಗಳನ್ನು ನಂಬಿದರೆ ಹೇಗೆ?” ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ದೇಶದಲ್ಲಿ ಚರ್ಚಿಸಲು ಇಷ್ಟೊಂದು ವಿಷಯಗಳಿರುವಾಗ ಇಂತಹ ವದಂತಿಗಳ ಹಿಂದೆ ಬೀಳಬೇಡಿ ಎಂದು ಸಲಹೆ ನೀಡಿದ್ದಾರೆ. “ದೇಶದಲ್ಲಿ ಏನೆಲ್ಲಾ ನಡೆಯುತ್ತಿಲ್ಲ? ಜೆನ್ ಝಿ ಅವರಿಂದ ಏನಾದರೂ ಕಲಿಯಿರಿ, ನೈಜ ವಿಷಯಗಳ ಬಗ್ಗೆ ವಿಡಿಯೋ ಮಾಡಿ, ಆಗ ನಿಮಗೆ ಹೆಚ್ಚಿನ ವೀಕ್ಷಣೆಗಳು ಸಿಗುತ್ತವೆ” ಎಂದು ತಿರುಗೇಟು ನೀಡಿದ್ದಾರೆ. ಮೃಣಾಲ್ ಅವರ ಈ ದಿಟ್ಟ ಉತ್ತರಕ್ಕೆ ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಒಂದೇ ಜಾಗಕ್ಕೆ ಹೋದ ತಕ್ಷಣ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://www.instagram.com/reel/DbSvSQgoR6l

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular