2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಕೂಟದ ಜಂಟಿ ಆತಿಥೇಯ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಮತ್ತು ನಮಿಬಿಯಾ ತಂಡಗಳು ಐತಿಹಾಸಿಕ ಟಿ20 ತ್ರಿಕೋನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಾವಳಿಯು ಆಗಸ್ಟ್ 28 ರಿಂದ ನಮಿಬಿಯಾದ ವಿಂಡ್ಹೋಕ್‌ನಲ್ಲಿ ಪ್ರಾರಂಭವಾಗಲಿದ್ದು, 2027ರ ಆಫ್ರಿಕಾ ಕಪ್ ಹಾಗೂ ಮುಂಬರುವ ವಿಶ್ವಕಪ್‌ಗೆ ಬಲವಾದ ತಡಿಪಾಯ ಹಾಕಲಿದೆ.
ಆಫ್ರಿಕಾ ಖಂಡದಲ್ಲಿ 24 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಆಯೋಜನೆಗೊಳ್ಳುತ್ತಿದ್ದು, ಮೂರು ಕ್ರಿಕೆಟ್ ಮಂಡಳಿಗಳು ಒಂದಾಗಿ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿವೆ. ಇದಲ್ಲದೆ, 2027ರಿಂದ ಪ್ರಾರಂಭವಾಗಲಿರುವ ಆಫ್ರಿಕಾ ಕಪ್ ಆಫ್ರಿಕನ್ ಕ್ರಿಕೆಟ್‌ನ ಪ್ರಮುಖ ಕೂಟವಾಗಲಿದ್ದು, ಈ ತ್ರಿಕೋನ ಸರಣಿಯು ಅದರ ಯಶಸ್ಸಿಗೆ ಹಾದಿ ಮಾಡಿಕೊಡಲಿದೆ.
ತ್ರಿಕೋನ ಸರಣಿಯ ಪೂರ್ಣ ವೇಳಾಪಟ್ಟಿ:
-
ಆಗಸ್ಟ್ 28: ದಕ್ಷಿಣ ಆಫ್ರಿಕಾ ವಿರುದ್ಧ ನಮಿಬಿಯಾ
-
ಆಗಸ್ಟ್ 29: ದಕ್ಷಿಣ ಆಫ್ರಿಕಾ ವಿರುದ್ಧ ಝಿಂಬಾಬ್ವೆ
-
ಆಗಸ್ಟ್ 31: ಝಿಂಬಾಬ್ವೆ ವಿರುದ್ಧ ನಮಿಬಿಯಾ
-
ಸೆಪ್ಟೆಂಬರ್ 1: ಝಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾ
-
ಸೆಪ್ಟೆಂಬರ್ 3: ನಮಿಬಿಯಾ ವಿರುದ್ಧ ಝಿಂಬಾಬ್ವೆ
-
ಸೆಪ್ಟೆಂಬರ್ 4: ನಮಿಬಿಯಾ ವಿರುದ್ಧ ದಕ್ಷಿಣ ಆಫ್ರಿಕಾ
-
ಸೆಪ್ಟೆಂಬರ್ 6: ಫೈನಲ್ ಪಂದ್ಯ (ಟಾಪ್ 2 ತಂಡಗಳ ನಡುವೆ)
ಮೂರು ದೇಶಗಳ ನಡುವಿನ ಕ್ರಿಕೆಟ್ ಬಾಂಧವ್ಯವನ್ನು ಗಟ್ಟಿಗೊಳಿಸಲು ಮತ್ತು ವಿಶ್ವಕಪ್‌ಗೆ ಮುನ್ನ ಆಟಗಾರರಿಗೆ ಉತ್ತಮ ಅನುಭವ ನೀಡಲು ಈ ಸರಣಿ ನೆರವಾಗಲಿದೆ.
The #CWC27 hosts are ready to lock horns in a momentous tri-series to set the stage for next year’s tournament 🏆 https://t.co/KFFjJQ6AgP
— ICC (@ICC) August 7, 2026

