ಬಾಲಿವುಡ್ ತಾರೆ ಕರೀನಾ ಕಪೂರ್ ಖಾನ್ ತಮ್ಮ ಮಿರರ್ ಸೆಲ್ಫಿ ಹಾಗೂ ಆಕರ್ಷಕ ಪೋಸ್‌ಗಳ ಮೂಲಕ ಸದಾ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಪ್ರಸ್ತುತ ಇಟಲಿಯ ವೆನಿಸ್ ನಗರದಲ್ಲಿ ಪ್ರವಾಸದಲ್ಲಿರುವ ನಟಿ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಮಿರರ್ ಸೆಲ್ಫಿಗಳನ್ನು ಹಂಚಿಕೊಳ್ಳುವ ಮೂಲಕ 2007ರ ಸೂಪರ್ ಹಿಟ್ ‘ಜಬ್ ವಿ ಮೆಟ್’ ಚಿತ್ರದ ತಮ್ಮ ಪ್ರಸಿದ್ಧ ‘ಗೀತ್’ ಪಾತ್ರವನ್ನು ಅಭಿಮಾನಿಗಳಿಗೆ ನೆನಪಿಸಿದ್ದಾರೆ.
ವೆನಿಸ್‌ನ ಈ ಪ್ರವಾಸಕ್ಕಾಗಿ ಕರೀನಾ ಸಿಲ್ಕ್ ಸ್ಯಾಟಿನ್ ಶರ್ಟ್ ಧರಿಸಿ ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಫೋಟೋಗಳ ಜೊತೆಗೆ, “ನನ್ನ ಮಿರರ್ ಸೆಲ್ಫಿಗಳು ಯಾವಾಗಲೂ ಪರ್ಫೆಕ್ಟ್ ಆಗಿರುತ್ತವೆ. ಮೈ ಅಪ್ನಿ ಫೇವರಿಟ್ ಹೂಂ… ಮರೆಯಬೇಡಿ! ವೆನಿಸ್ 2026” ಎಂದು ಕ್ಯಾಪ್ಷನ್ ನೀಡಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶನದ ಜಬ್ ವಿ ಮೆಟ್ ಚಿತ್ರದ ಈ ಸಂಭಾಷಣೆಯು ಇಂದಿಗೂ ಸ್ವಯಂ ಪ್ರೀತಿಯ ಪ್ರತಿರೂಪವಾಗಿ ಸಿನಿರಸಿಕರ ನೆಚ್ಚಿನ ಸಾಲಾಗಿದೆ.
ಇನ್ನು ನಟನೆಯ ವಿಚಾರಕ್ಕೆ ಬಂದರೆ, ಕರೀನಾ ಕೊನೆಯದಾಗಿ ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಮ್ ಅಗೇನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಮೇಘನಾ ಗುಲ್ಜಾರ್ ನಿರ್ದೇಶನದ ‘ದಾಯರಾ’ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಕ್ರೈಮ್ ಡ್ರಾಮಾ ಚಿತ್ರದಲ್ಲಿ ಮಲೆಯಾಳಂ ಸೂಪರ್‌ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಕರೀನಾ ಕಪೂರ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಇದೇ ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

