ದಿ ಹಂಡ್ರೆಡ್ 2026 ಲೀಗ್‌ನಲ್ಲಿ ಇಂಗ್ಲೆಂಡ್‌ನ ತಾರಾ ಆಲ್ರೌಂಡರ್ ವಿಲ್ ಜ್ಯಾಕ್ಸ್ ಹಿಡಿದ ನಂಬಲಾಗದ ಕ್ಯಾಚ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಲಾರ್ಡ್ಸ್ ಮೈದಾನದಲ್ಲಿ ಲಂಡನ್ ಸ್ಪಿರಿಟ್ ವಿರುದ್ಧ ನಡೆದ ಪಂದ್ಯದಲ್ಲಿ ಎಂಐ ಲಂಡನ್ ತಂಡ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಈ ವೇಳೆ ವಿಲ್ ಜ್ಯಾಕ್ಸ್ ಬೌಂಡರಿ ಲೈನ್ ಬಳಿ ತೋರಿದ ಅದ್ಭುತ ಫೀಲ್ಡಿಂಗ್ ಪಂದ್ಯಕ್ಕೆ ಪ್ರಮುಖ ತಿರುವು ನೀಡಿತು.
ಲಂಡನ್ ಸ್ಪಿರಿಟ್ ಇನ್ನಿಂಗ್ಸ್‌ನ 49 ನೇ ಎಸೆತದಲ್ಲಿ ಈ ರೋಚಕ ಘಟನೆ ನಡೆಯಿತು. ಭರ್ಜರಿ ಅರ್ಧಶತಕ ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದ ಲುಆನ್-ಡ್ರೆ ಪ್ರಿಟೋರಿಯಸ್, ನಾಥನ್ ಸಾಲ್ಟರ್ ಎಸೆದ ಚೆಂಡನ್ನು ಲಾಂಗ್-ಆಫ್ ಕಡೆಗೆ ಸಿಕ್ಸರ್‌ಗೆ ಅಟ್ಟಲು ಯತ್ನಿಸಿದರು. ಬೌಂಡರಿ ಲೈನ್‌ನಲ್ಲಿದ್ದ ವಿಲ್ ಜ್ಯಾಕ್ಸ್ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿತಕ್ಕೆ ಪಡೆದರು. ಆದರೆ ಜಿಗಿದ ರಭಸಕ್ಕೆ ಬೌಂಡರಿ ಗೆರೆ ದಾಟುವ ಹಂತದಲ್ಲಿದ್ದಾಗ ತಕ್ಷಣವೇ ಸಮಯಪ್ರಜ್ಞೆ ಮೆರೆದು ಚೆಂಡನ್ನು ಮೈದಾನದ ಒಳಗಡೆ ಗಾಳಿಯಲ್ಲಿ ತಳ್ಳಿದರು.
ಬಳಿಕ ಬೌಂಡರಿ ಲೈನ್ ಒಳಗಡೆ ಪುನಃ ಓಡಿ ಬಂದ ಜ್ಯಾಕ್ಸ್, ಮುಂದೆ ಜಿಗಿದು ಒಂದೇ ಕೈಯಲ್ಲಿ ಹಿಡಿದ ಕ್ಯಾಚ್ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. 28 ಎಸೆತಗಳಲ್ಲಿ 52 ರನ್ ಗಳಿಸಿ ಅಪಾಯಕಾರಿಯಾಗಿದ್ದ ಪ್ರಿಟೋರಿಯಸ್ ಈ ಅದ್ಭುತ ಫೀಲ್ಡಿಂಗ್‌ಗೆ ಔಟಾಗಿ ಪೆವಿಲಿಯನ್ ಸೇರಬೇಕಾಯಿತು. ಜ್ಯಾಕ್ಸ್ ಅವರ ಈ ಆಟದಿಂದಾಗಿ ಲಂಡನ್ ಸ್ಪಿರಿಟ್ ತಂಡವನ್ನು 160 ರನ್‌ಗಳಿಗೆ ಕಟ್ಟಿಹಾಕಲು ಎಂಐ ಲಂಡನ್‌ಗೆ ಸಾಧ್ಯವಾಯಿತು. ಬಳಿಕ ಚೇಸಿಂಗ್ ನಡೆಸಿದ ಎಂಐ ಲಂಡನ್ ತಂಡ ನಿಕೋಲಸ್ ಪೂರನ್, ಸ್ಯಾಮ್ ಕರನ್ ಹಾಗೂ ಸಿಕಂದರ್ ರಜಾ ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಜಯಭೇರಿ ಬಾರಿಸಿತು.
🚨 STOP scrolling and watch this UNBELIEVABLE catch 🤯
Will Jacks, that is incredible 🤌
Watch #TheHundred on Sky Sports Cricket or Youtube 🎬#RoadToTheEliminator pic.twitter.com/nshTNJCy6g
— The Hundred (@thehundred) August 6, 2026

