HomeLatest Newsರಿಯಾಲಿಟಿ ಶೋ ಗೆದ್ದು ಮಾನವೀಯತೆ ಮೆರೆದ ಶ್ರೇಯಾ ಕಾಲ್ರಾ: ಸಹ ಸ್ಪರ್ಧಿ ಶಿಲ್ಪಾ ಶಿಂಧೆಗೆ ಕೊಟ್ಟ...

ರಿಯಾಲಿಟಿ ಶೋ ಗೆದ್ದು ಮಾನವೀಯತೆ ಮೆರೆದ ಶ್ರೇಯಾ ಕಾಲ್ರಾ: ಸಹ ಸ್ಪರ್ಧಿ ಶಿಲ್ಪಾ ಶಿಂಧೆಗೆ ಕೊಟ್ಟ ಮಾತು ಈಡೇರಿಸಿದ ನಟಿ!

ರಿಯಾಲಿಟಿ ಶೋ ‘ಲಾಕ್ ಅಪ್’ ಸೀಸನ್ 2 ಟ್ರೋಫಿ ಗೆದ್ದು ಬೀಗಿರುವ ಶ್ರೇಯಾ ಕಾಲ್ರಾ, ತಮ್ಮ ಬಹುಮಾನದ ಮೊತ್ತವನ್ನು ಬಳಸುವ ಕುರಿತು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಶೋ ಗೆದ್ದು ಗಳಿಸಿರುವ 1 ಕೋಟಿ ರೂಪಾಯಿ ಪೈಕಿ ಒಂದಷ್ಟು ಭಾಗವನ್ನು ಸಹ ಸ್ಪರ್ಧಿ ಶಿಲ್ಪಾ ಶಿಂಧೆ ಅವರ ಶೆಲ್ಟರ್ ಹೋಮ್ ನಿರ್ಮಾಣದ ಕನಸಿಗೆ ನೆರವಾಗಲು ಬಳಸುವುದಾಗಿ ಶ್ರೇಯಾ ಪ್ರಕಟಿಸಿದ್ದಾರೆ.

ವಿಜೇತರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೇಯಾ ಅವರಿಗೆ, ಬಂದ ಹಣದಿಂದ ಯಾವ ಕನಸುಗಳನ್ನು ಈಡೇರಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ನನಗೆ ದುಬಾರಿ ಕಾರುಗಳು ಅಥವಾ ಐಷಾರಾಮಿ ವಸ್ತುಗಳ ಮೇಲೆ ಯಾವುದೇ ವ್ಯಾಮೋಹವಿಲ್ಲ. ಬೇರೆಯವರಿಗೆ ಉಡುಗೊರೆಗಳನ್ನು ನೀಡುವುದು ಎಂದರೆ ನನಗೆ ಇಷ್ಟ. ಹೀಗಾಗಿ ಶಿಲ್ಪಾ ಜಿ ಅವರ ಶೆಲ್ಟರ್ ಹೋಮ್ ಯೋಜನೆಗೆ ನನ್ನಿಂದ ಸಾಧ್ಯವಾದಷ್ಟು ಆರ್ಥಿಕ ನೆರವು ನೀಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಉಳಿದ ಹಣದ ಬಳಕೆಯ ಬಗ್ಗೆಯೂ ಮುಕ್ತವಾಗಿ ಹಂಚಿಕೊಂಡ ಶ್ರೇಯಾ, ತಾನು ಸಿಂಧಿ ಕುಟುಂಬಕ್ಕೆ ಸೇರಿದವಳಾಗಿದ್ದು ವ್ಯಾಪಾರದ ಬುದ್ಧಿ ಚುರುಕಾಗಿದೆ. ಹೀಗಾಗಿ ಬರುವ ಹಣವನ್ನು ಮುಂದಿನ ಲಾಭಕ್ಕಾಗಿ ರಿಯಲ್ ಎಸ್ಟೇಟ್ ಅಥವಾ ಆಸ್ತಿಯ ಮೇಲೆ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ. ಆಗಸ್ಟ್ 5 ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಶಿವಾಂಗಿ ಜೋಶಿ ಅವರನ್ನು ಸೋಲಿಸಿ ಶ್ರೇಯಾ ಕಾಲ್ರಾ ಲಾಕ್ ಅಪ್ 2 ಕಿರೀಟ ಮುಡಿಗೇರಿಸಿಕೊಂಡರೆ, ಶಿಲ್ಪಾ ಶಿಂಧೆ ನಾಲ್ಕನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಮನೆ ಒಳಗೆ ಶಿಲ್ಪಾ ಮತ್ತು ಶ್ರೇಯಾ ನಡುವೆ ಉತ್ತಮ ಬಾಂಧವ್ಯವಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Mumbai, Maharashtra: Lock Upp Season 2 Winner, Shreya Kalra says, “I was worried that I might get overshadowed, that they might try to suppress me, or that I might not get nominated. I even said on the show that I just wanted to survive for these two weeks… When I entered the… pic.twitter.com/8Q1yVC21K3

— IANS (@ians_india) August 6, 2026

Shreya wants to donate a portion of her winning amount to Shilpa ji’s shelter hom. This friendship just keeps getting more beautiful #ShreyaKalra you’re a true winner gurl. #ShilpaShinde pic.twitter.com/S0epSB1ld5

— Vee 🦋 (@gilmorexgurl) August 6, 2026

SHREYA KALRA HAS WON LOCK UPP 🚨🔥#LockUppFinale pic.twitter.com/bGtYhV3UCh

— Netflix India (@NetflixIndia) August 6, 2026

when shreya kalra made history repeat itself 🥹🫶🏻 pic.twitter.com/uMMfedtCV0

— Netflix India (@NetflixIndia) August 6, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular