HomeLatest Newsತತ್ಕಾಲ್ ಟಿಕೆಟ್ ಬುಕ್ ಮಾಡಬೇಕಾ? ರೈಲ್ವೆಯ ಹೊಸ ನಿಯಮ ಜಾರಿ; ಇನ್ನು ಮುಂದೆ ಮೊದಲೇ ಟೋಕನ್...

ತತ್ಕಾಲ್ ಟಿಕೆಟ್ ಬುಕ್ ಮಾಡಬೇಕಾ? ರೈಲ್ವೆಯ ಹೊಸ ನಿಯಮ ಜಾರಿ; ಇನ್ನು ಮುಂದೆ ಮೊದಲೇ ಟೋಕನ್ ಪಡೆಯಲೇಬೇಕು!

ನವದೆಹಲಿ: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮಹತ್ವದ ಮಾಹಿತಿ ನೀಡಿದೆ. ತತ್ಕಾಲ್ ಟಿಕೆಟ್ ಬುಕ್ ಮಾಡುವ ನಿಯಮಗಳಲ್ಲಿ ರೈಲ್ವೆ ಇಲಾಖೆ ಪ್ರಮುಖ ಬದಲಾವಣೆಗಳನ್ನು ಜಾರಿಗೊಳಿಸಿದೆ. ಆಗಸ್ಟ್ 1ರಿಂದ ರೈಲ್ವೆ ಮೀಸಲು (Reservation) ಕೌಂಟರ್‌ಗಳಲ್ಲಿ ತತ್ಕಾಲ್ ಟಿಕೆಟ್ ಪಡೆಯಲು ಟೋಕನ್ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ, ಆನ್‌ಲೈನ್ ತತ್ಕಾಲ್ ಬುಕ್ಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ.

ರೈಲ್ವೆ ಮೀಸಲು ಕೌಂಟರ್‌ಗಳಲ್ಲಿ ಉದ್ದ ಸಾಲು ಹಾಗೂ ಜನಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಅಗತ್ಯ ಇರುವುದಿಲ್ಲ.

ಮೊದಲು ಟೋಕನ್ ಪಡೆಯಲೇಬೇಕು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಮುಂದೆ ತತ್ಕಾಲ್ ಟಿಕೆಟ್ ಪಡೆಯಲು ಮೊದಲು ರೈಲ್ವೆ ಕೌಂಟರ್‌ನಲ್ಲಿ ಟೋಕನ್ ಪಡೆಯಬೇಕು. ಬಳಿಕ ಟೋಕನ್ ಸಂಖ್ಯೆಯ ಆಧಾರದ ಮೇಲೆ ಪ್ರಯಾಣಿಕರನ್ನು ಕೌಂಟರ್‌ಗೆ ಕರೆಸಿ ಟಿಕೆಟ್ ಬುಕ್ ಮಾಡಲಾಗುತ್ತದೆ.

ಎಸಿ ತತ್ಕಾಲ್ ಟಿಕೆಟ್‌ಗಳಿಗೆ:

ಬುಕ್ಕಿಂಗ್ ಆರಂಭ: ಬೆಳಿಗ್ಗೆ 10 ಗಂಟೆ
ಟೋಕನ್ ವಿತರಣೆ: ಬೆಳಿಗ್ಗೆ 8.30 ರಿಂದ 9.00 ಗಂಟೆಯವರೆಗೆ

ನಾನ್-ಎಸಿ/ಸ್ಲೀಪರ್ ತತ್ಕಾಲ್ ಟಿಕೆಟ್‌ಗಳಿಗೆ:

ಬುಕ್ಕಿಂಗ್ ಆರಂಭ: ಬೆಳಿಗ್ಗೆ 11 ಗಂಟೆ
ಟೋಕನ್ ವಿತರಣೆ: ಬೆಳಿಗ್ಗೆ 9.30 ರಿಂದ 10.00 ಗಂಟೆಯವರೆಗೆ

ಆದ್ದರಿಂದ ಎಸಿ ಅಥವಾ ಸ್ಲೀಪರ್ ತತ್ಕಾಲ್ ಟಿಕೆಟ್ ಬೇಕಿರುವ ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಮುಂಚೆಯೇ ನಿಲ್ದಾಣಕ್ಕೆ ಬಂದು ಟೋಕನ್ ಪಡೆಯಬೇಕು.

ಪ್ರತಿ ಕೌಂಟರ್‌ಗೆ ಟೋಕನ್ ಮಿತಿ

ರೈಲ್ವೆ ಇಲಾಖೆ ಪ್ರತಿ ಬುಕ್ಕಿಂಗ್ ಕೌಂಟರ್‌ನಲ್ಲಿ ನೀಡಬಹುದಾದ ಟೋಕನ್‌ಗಳ ಸಂಖ್ಯೆಯನ್ನೂ ನಿಗದಿಪಡಿಸಿದೆ.ಎಸಿ ತತ್ಕಾಲ್ ಟಿಕೆಟ್‌ಗಳಿಗೆ: ಗರಿಷ್ಠ 10 ಟೋಕನ್‌ಗಳು
ನಾನ್-ಎಸಿ/ಸ್ಲೀಪರ್ ತತ್ಕಾಲ್ ಟಿಕೆಟ್‌ಗಳಿಗೆ: ಗರಿಷ್ಠ 15 ಟೋಕನ್‌ಗಳು. ಈ ವ್ಯವಸ್ಥೆಯಿಂದ ತಮಗೆ ತತ್ಕಾಲ್ ಟಿಕೆಟ್ ಸಿಗುವ ಸಾಧ್ಯತೆ ಇದೆಯೇ ಎಂಬುದನ್ನು ಪ್ರಯಾಣಿಕರು ಮೊದಲೇ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಬುಕ್ಕಿಂಗ್ ಆರಂಭವಾಗುವ ಸಮಯದಲ್ಲಿ ಕೌಂಟರ್‌ಗಳ ಬಳಿ ಉಂಟಾಗುವ ಜನದಟ್ಟಣೆ ಮತ್ತು ಗೊಂದಲವೂ ಕಡಿಮೆಯಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular