HomeLive Newsಆಡಿಯೋ ಬಗ್ಗೆ ಛಲವಾದಿ ನಾರಾಯಣಸ್ವಾಮಿ ದೂರು ನೀಡಲಿ; FSLಗೆ ಕಳಿಸಿ ರಿಪೋರ್ಟ್ ತರಿಸುತ್ತೇನೆ ಎಂದ ಗೃಹ...

ಆಡಿಯೋ ಬಗ್ಗೆ ಛಲವಾದಿ ನಾರಾಯಣಸ್ವಾಮಿ ದೂರು ನೀಡಲಿ; FSLಗೆ ಕಳಿಸಿ ರಿಪೋರ್ಟ್ ತರಿಸುತ್ತೇನೆ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸಚಿವ ಸ್ಥಾನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಾಜಿ ಸಚಿವ ತಿಮ್ಮಾಪುರ-ನಂಜಯ್ಯಮಠ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿರುವ ಪರಿಷತ್ ಛಲವಾದ್ ನಾರಾಯಣಸ್ವಾಮಿ ಮೊದಲು ದೂರು ನೀಡಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿ, ತಿಮ್ಮಾಪುರ ಮತ್ತು ನಂಜಯ್ಯಮಠ ಸ್ಪಷ್ಟವಾಗಿ ಹೇಳಿದ್ದಾರೆ. ಆಡಿಯೋ ಛಲವಾದಿ ನಾರಾಯಣಸ್ವಾಮಿ ಅವರ ಬಳಿ ಇದೆ. ನಾನೇ ಈಗ ಗೃಹ ಸಚಿವ. ನನಗೆ ದೂರು ಕೊಡಿ. ಫಾರೆನ್ಸಿಕ್ ಲ್ಯಾಬ್‌ಗೆ ಕಳಿಸಿ ರಿಪೋರ್ಟ್ ತರಿಸುತ್ತೇನೆ. ನಿಮಗೆ ಎಲ್ಲಿಂದ ಬಂತು ಅಂತ ನೀವು ಹೇಳಿ, ಅವರು ಮಾತಾಡಿದ್ದಾರಾ ಇಲ್ಲವಾ ನಾನು ಹೇಳ್ತೀನಿ‌ ಎಂದರು.

ಒಂದು ದೂರು ಕೊಡಿ. ಸುಮ್ಮನೆ ಆಡಿಯೋ ಸಿಕ್ಕಿದೆ ಅಂತ ನಾವು ರಿಯಾಕ್ಟ್ ಮಾಡೋದು ಸರಿಯಲ್ಲ. ನಾರಾಯಣಸ್ವಾಮಿ ನನ್ನ ಬೆಸ್ಟ್ ಫ್ರೆಂಡ್, ದೂರು ಕೊಡಲಿ. ಅವರು ಹೇಳಿದ್ದನ್ನು ನಾವು ಗಂಭೀರವಾಗಿ ತಗೋಬೇಕು. ದೂರು ಕೊಡಲಿ ನಾನು ಸತ್ಯಾಂಶವನ್ನು ಸದನದಲ್ಲಿ ಮಂಡನೆ ಮಾಡ್ತೀನಿ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular