HomeLatest Newsಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಕೇವಲ ₹11ಕ್ಕೆ 10GB ಡೇಟಾ.. ಆದರೆ ಇದೆ ಒಂದು...

ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಕೇವಲ ₹11ಕ್ಕೆ 10GB ಡೇಟಾ.. ಆದರೆ ಇದೆ ಒಂದು ಕಂಡೀಷನ್!

ನವದೆಹಲಿ: ಜಿಯೋ ಗ್ರಾಹಕರಿಗೆ ಹಲವು ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತಿದೆ. ಆದರೆ, ಅದರ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಕೇವಲ ₹11 ಮಾತ್ರ. ಈ ಪ್ಲಾನ್‌ನಲ್ಲಿ ಯಾವೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬುದನ್ನು ತಿಳಿಯೋಣ.

ಹೌದು. ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಕೇವಲ ₹11ಕ್ಕೆ10GB ಹೈ-ಸ್ಪೀಡ್ಡೇಟಾ ನೀಡುವ ವಿಶೇಷ ಡೇಟಾ ಪ್ಲಾನ್ ಅನ್ನು ಪರಿಚಯಿಸಿದೆ. ಕಡಿಮೆ ದರದಲ್ಲಿ ಹೆಚ್ಚಿನ ಡೇಟಾ ಬೇಕಿರುವವರಿಗೆ ಈ ಪ್ಲಾನ್ ಉಪಯುಕ್ತವಾಗಿದ್ದು, 1 ಗಂಟೆಯ ಮಾನ್ಯತೆ ಹೊಂದಿದೆ. ಆದರೆ ಈ ಪ್ಲಾನ್‌ನಲ್ಲಿ ಅನಿಯಮಿತಕರೆ, SMS ಹಾಗೂOTT ಸೌಲಭ್ಯಗಳು ಒಳಗೊಂಡಿಲ್ಲ ಎಂಬುದು ಗಮನಾರ್ಹ.

 ₹11 ರೀಚಾರ್ಜ್ ಪ್ಲಾನ್‌ನಲ್ಲಿ ಒಟ್ಟು 10GB ಡೇಟಾ ದೊರೆಯುತ್ತದೆ. ಈ ಡೇಟಾವನ್ನು ಬಳಸಿಕೊಂಡು ಯಾವುದೇ ಅಡಚಣೆ ಇಲ್ಲದೆ ಇಂಟರ್ನೆಟ್ ಸೇವೆಯನ್ನು ಬಳಸಬಹುದು. ಆದರೆ, ಈ ಪ್ಲಾನ್‌ನಲ್ಲಿ ಅನಿಯಮಿತ ಕರೆ (Unlimited Calling) ಸೌಲಭ್ಯ ಇರುವುದಿಲ್ಲ. ಇದಲ್ಲದೆ, SMS ಸೌಲಭ್ಯವೂ ಲಭ್ಯವಿಲ್ಲ. ಈ ಮಾಹಿತಿಯನ್ನು ಜಿಯೋ ತನ್ನ ಅಧಿಕೃತ ಪೋರ್ಟಲ್‌ನಲ್ಲಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪ್ಲಾನ್‌ನ ಮಾನ್ಯತೆ ಕೇವಲ 1 ಗಂಟೆ. ಅಂದರೆ, 1 ಗಂಟೆಯ ಅವಧಿಯಲ್ಲಿ 10GB ಡೇಟಾವನ್ನು ಬಳಸಿಕೊಳ್ಳಬಹುದು. ಕಡಿಮೆ ದರದಲ್ಲಿ ಹೆಚ್ಚಿನ ಪ್ರಮಾಣದ ಡೇಟಾ ಬೇಕಿರುವ ಬಳಕೆದಾರರಿಗಾಗಿ ಜಿಯೋ ಈ ವಿಶೇಷ ಪ್ಲಾನ್ ಅನ್ನು ಪರಿಚಯಿಸಿದೆ. ಈ ರೀಚಾರ್ಜ್ ಪ್ಯಾಕ್‌ನೊಂದಿಗೆ ಯಾವುದೇ OTT ಅಥವಾ ಇತರ ಆ್ಯಪ್‌ಗಳ ಚಂದಾದಾರಿಕೆ (Subscription) ದೊರೆಯುವುದಿಲ್ಲ. ಹೆಚ್ಚಿನ ಡೇಟಾ ಬಳಸುವ ಗ್ರಾಹಕರಿಗಾಗಿ ಜಿಯೋ ಇಂತಹ ಹಲವು ಡೇಟಾ-ಕೇಂದ್ರಿತ ಪ್ಲಾನ್‌ಗಳನ್ನು ಒದಗಿಸಿದೆ.

ಗಮನಿಸಿ: ₹11 ರ ಈ ಪ್ಲಾನ್‌ನಲ್ಲಿ ಒಟ್ಟು 10GB ಡೇಟಾ ಮಾತ್ರ ಲಭ್ಯವಿದ್ದು, ಮಾನ್ಯತೆ 1 ಗಂಟೆ. ಕರೆ, SMS ಅಥವಾ ಹೆಚ್ಚುವರಿ ಸೌಲಭ್ಯಗಳು ಈ ಪ್ಲಾನ್‌ನಲ್ಲಿ ಒಳಗೊಂಡಿಲ್ಲ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular