HomeLatest Newsತೈಲ ಬೆಲೆ ಇಳಿಕೆ, ಚಿನ್ನದ ಬೆಲೆ ಭಾರಿ ಏರಿಕೆ: ₹1,750 ಜಿಗಿತ

ತೈಲ ಬೆಲೆ ಇಳಿಕೆ, ಚಿನ್ನದ ಬೆಲೆ ಭಾರಿ ಏರಿಕೆ: ₹1,750 ಜಿಗಿತ

ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ಸತತ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಲ್ಲಿ ಭರವಸೆ ಮೂಡಿಸಿದ್ದ ಚಿನ್ನ ಹಾಗೂ ಬೆಳ್ಳಿ ದರ, ಬುಧವಾರ ದಿಢೀರ್ ಏರಿಕೆ ಕಾಣುವ ಮೂಲಕ ಗ್ರಾಹಕರಿಗೆ ಭಾರೀ ಆಘಾತ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದ್ದಂತೆ, ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಹೂಡಿಕೆದಾರರು ಒಲವು ತೋರಿದ್ದರಿಂದ ಜಾಗತಿಕ ಮಟ್ಟದಲ್ಲೂ ದರ ಏರಿಕೆಯಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಒಂದೇ ದಿನದಲ್ಲಿ ಬರೋಬ್ಬರಿ 1,750 ರೂಪಾಯಿ ಏರಿಕೆಯಾಗಿದ್ದು, ಮತ್ತೆ ರೂ. 1,50,000ರ ಸನಿಹಕ್ಕೆ ಬಂದು ತಲುಪಿದೆ.

ಆಗಸ್ಟ್ 5, 2026ರ ಚಿನ್ನ ಮತ್ತು ಬೆಳ್ಳಿಯ ದರ ಪಟ್ಟಿ

24 ಕ್ಯಾರೆಟ್ (ಶುದ್ಧ ಚಿನ್ನ):

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಗ್ರಾಂ ದರ: ₹14,575 (ಇಂದಿನ ಏರಿಕೆ: ₹175)

10 ಗ್ರಾಂ ದರ: ₹1,45,750

22 ಕ್ಯಾರೆಟ್ (ಆಭರಣ ಚಿನ್ನ):

1 ಗ್ರಾಂ ದರ: ₹13,360 (ಇಂದಿನ ಏರಿಕೆ: ₹160)

10 ಗ್ರಾಂ ದರ: ₹1,33,600

18 ಕ್ಯಾರೆಟ್ ಚಿನ್ನ:

1 ಗ್ರಾಂ ದರ: ₹10,931 (ಇಂದಿನ ಏರಿಕೆ: ₹131)

10 ಗ್ರಾಂ ದರ: ₹1,09,310

ಶುದ್ಧ ಹಾಗೂ ಆಭರಣ ಚಿನ್ನದ ಮಾರುಕಟ್ಟೆ ಸ್ಥಿತಿ:

24 ಕ್ಯಾರೆಟ್ ಅಪರಂಜಿ ಚಿನ್ನ: ಬುಧವಾರದ ವ್ಯಾಪಾರದಲ್ಲಿ 1 ಗ್ರಾಂಗೆ 175 ರೂ. ಹೆಚ್ಚಳವಾಗಿದ್ದು, ಪ್ರತಿ ಗ್ರಾಂ ಬೆಲೆ 14,575 ರೂಪಾಯಿಗೆ ತಲುಪಿದೆ. ಇದರೊಂದಿಗೆ 10 ಗ್ರಾಂ ಅಪರಂಜಿ ಚಿನ್ನದ ದರ 1,45,750 ರೂಪಾಯಿಗೆ ಜಿಗಿದಿದೆ.

22 ಕ್ಯಾರೆಟ್ ಆಭರಣ ಚಿನ್ನ: ಸಾಮಾನ್ಯ ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲೂ ಗ್ರಾಂಗೆ 160 ರೂ. ಏರಿಕೆಯಾಗಿದೆ. ಇದರಿಂದಾಗಿ 1 ಗ್ರಾಂ ಚಿನ್ನದ ಬೆಲೆ 13,360 ರೂ. ತಲುಪಿದ್ದು, 10 ಗ್ರಾಂ ದರ 1,600 ರೂ. ಹೆಚ್ಚಾಗಿ 1,33,600 ರೂಪಾಯಿಗೆ ಬಂದು ನಿಂತಿದೆ.

ಬೆಂಗಳೂರು ಮಾರುಕಟ್ಟೆ ಹಾಗೂ ಬೆಳ್ಳಿ ದರ:

ರಾಜಧಾನಿ ಬೆಂಗಳೂರಿನಲ್ಲಿಯೂ 24 ಕ್ಯಾರೆಟ್ ಶುದ್ಧ ಚಿನ್ನದ ಗ್ರಾಂ ದರ 14,575 ರೂಪಾಯಿ ದಾಖಲಾಗಿದೆ.ಇತ್ತ ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ದರದಲ್ಲೂ ಭಾರೀ ಜಿಗಿತ ಕಂಡುಬಂದಿದೆ. ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಬೆಳ್ಳಿಯ ಬೆಲೆ 240 ರೂಪಾಯಿಗೆ ತಲುಪಿದ್ದು, ಪ್ರತಿ ಕೆಜಿ ಬೆಳ್ಳಿಯ ದರ ಬರೋಬ್ಬರಿ 2,40,000 ರೂಪಾಯಿ ತಲುಪಿ ದಾಖಲೆ ಬರೆದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular