HomeLatest Newsಟ್ರಾಲಿ ಬ್ಯಾಗ್ ನಲ್ಲಿ ಮಹಿಳೆಯ ಶವ ಪತ್ತೆ

ಟ್ರಾಲಿ ಬ್ಯಾಗ್ ನಲ್ಲಿ ಮಹಿಳೆಯ ಶವ ಪತ್ತೆ

ನವಾಡ: ಮಹಿಳೆಯೊಬ್ಬರ ಮೃತದೇಹ ಟ್ರಾಲಿ ಬಾಗ್ ನಲ್ಲಿ ಪತ್ತೆಯಾಗಿರುವ ಘಟನೆ ಗುಜರಾತ್​ನ ದಮನ್‌ನಲ್ಲಿ ನಡೆದಿದೆ.

ಬಿಹಾರದ ನವಾಡ ಜಿಲ್ಲೆ ಮೂಲದ ವಿವಾಹಿತ ಮಹಿಳೆ ಮೃತದೇಹ ಪತ್ತೆಯಾಗಿದ್ದು, ಟ್ರಾಲಿ ಬ್ಯಾಗ್ ನಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ರೋಹ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಯುರ್ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೋಹ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಹುಲ್ ಅಭಿಷೇಕ್, ಮಹಿಳೆಯೊಬ್ಬರ ಹತ್ಯೆಯಾಗಿದೆ ಎಂದು ಗುಜರಾತ್ ಪೊಲೀಸರಿಂದ ಕರೆ ಬಂದಿತ್ತು. ಮೃತ ಮಹಿಳೆ ವಿವಾಹಿತೆಯಾಗಿದ್ದು, ನವಾಡ ಮೂಲದವಳೆಂದು ಗೊತ್ತಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಸದ್ಯಕ್ಕೆ ಪೊಲೀಸರು ಆಕೆಯ ಕುಟುಂಬ ಸದಸ್ಯರಿಗೆ ಈ ವಿಷಯವನ್ನು ತಿಳಿಸಿದ್ದಾರೆ.

ಮೃತ ಮಹಿಳೆ ತನ್ನ ಗ್ರಾಮದ ಯುವಕನೊಬ್ಬನೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದಳು. ಎರಡು ವರ್ಷಗಳ ಹಿಂದೆ ಆಕೆ ರಿಷಬ್ ಕುಮಾರ್ ಎಂಬಾತನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ವಿವಾಹದ ನಂತರ ಅವರಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಇದೀಗ ಮಹಿಳೆ ಶವ ಟ್ರಾಲಿಯಲ್ಲಿ ಪತ್ತೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular