ತಂಜಾವೂರು: ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಷಾ ಬಗ್ಗೆ ಮಾಡಿದ ದ್ವಂದ್ವಾರ್ಥದ ನುಡಿಯಿಂದಾಗಿ ತೀವ್ರ ವಿವಾದ ಸೃಷ್ಟಿಯಾಗಿದೆ.
ನಿನ್ನೆ ( ಜುಲೈ 3 ) ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಉದಯನಿಧಿ ವಿಜಯ್ ಅವರನ್ನು ಟೀಕಿಸುತ್ತಾ “ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೂಡುವುದೇ ಅವರ ಚಿಂತೆ” ಎಂದು ಹೇಳಿದರು.ಈ ವೇಳೆ ಗುಂಪಿನಿಂದ “ತ್ರಿಶಾ… ತ್ರಿಶಾ…” ಎಂದು ಕೂಗಾಟ ಪ್ರಾರಂಭವಾಯಿತು. ಆಗ ಉದಯನಿಧಿ ನಗುತ್ತಾ “ನಮಗೆ ನೀರು ಬರುತ್ತೋ ಇಲ್ವೋ ಅಲ್ಲಿಗೆ ಹೋಗಬೇಕು” ಎಂದು ಹೇಳಿಕೆ ನೀಡಿದರು.
ಈ ಹೇಳಿಕೆಗೆ ಗುಂಪು ನಕ್ಕ ಕೂಡಲೇ ಮಾತು ಮುಂದುವರಿಸಿದ ಉದಯನಿಧಿ ಸ್ಟಾಲಿನ್ ‘ಅಯ್ಯೋ ಕಾವೇರಿ ಬಗ್ಗೆ ಹೇಳಿದೆ ಕಣ್ರಪ್ಪ’ ಎಂದು ಮತ್ತೆ ನಗುತ್ತಾ ಪ್ರತಿಕ್ರಿಯಿಸಿದರು. ಸದ್ಯ ಈ ಹೇಳಿಕೆ ತೀವ್ರ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದ್ದು, ವೇದಿಕೆ ಮೇಲೆ ಓರ್ವ ಮಹಿಳೆ ಬಗ್ಗೆ ಈ ರೀತಿ ದ್ವಂದ್ವಾರ್ಥದಲ್ಲಿ ಮಾತನಾಡುವುದು ಎಷ್ಟು ಸರಿ ಎಂದು ಜನ ಸಾಮಾನ್ಯರು ಕಿಡಿಕಾರಿದ್ದಾರೆ.
https://x.com/ActorVijayTeam/status/2084186164811252149?s=20

