HomeLatest Newsಕಾಮನ್‌ವೆಲ್ತ್ ಸಂಭ್ರಮದ ನಡುವೆ ಭಾರತದ ನಕ್ಷೆ ವಿವಾದ: ಗ್ಲ್ಯಾಸ್ಗೋ ರೆಸ್ಟೋರೆಂಟ್‌ ವಿರುದ್ಧ ಸಿಡಿದೆದ್ದ ಲವ್ಲಿನಾ!

ಕಾಮನ್‌ವೆಲ್ತ್ ಸಂಭ್ರಮದ ನಡುವೆ ಭಾರತದ ನಕ್ಷೆ ವಿವಾದ: ಗ್ಲ್ಯಾಸ್ಗೋ ರೆಸ್ಟೋರೆಂಟ್‌ ವಿರುದ್ಧ ಸಿಡಿದೆದ್ದ ಲವ್ಲಿನಾ!

ಗ್ಲ್ಯಾಸ್ಗೋದಲ್ಲಿ ಮುಕ್ತಾಯಗೊಂಡ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಬಾಕ್ಸರ್‌ಗಳು ದಾಖಲೆಯ ಸಾಧನೆ ಮಾಡಿ ಬೀಗಿದ್ದಾರೆ. ಆದರೆ ಈ ಸಂಭ್ರಮದ ಬೆನ್ನಲ್ಲೇ ಸ್ಪಾಟ್‌ನಲ್ಲಿ ಹೊಸದೊಂದು ವಿವಾದ ತಲೆದೂರಿದೆ. ಪದಕ ವಿಜೇತ ಕ್ರೀಡಾಪಟುಗಳಿಗೆ ಆಯೋಜಿಸಲಾಗಿದ್ದ ಆತಿಥ್ಯಕೂಟದಲ್ಲಿ ಭಾರತದ ಭೂಪಟವನ್ನು ತಪ್ಪು ತಪ್ಪಾಗಿ ಮುದ್ರಿಸಿರುವುದು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ.

ಕಾಮನ್‌ವೆಲ್ತ್ ಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಬಾಕ್ಸಿಂಗ್ ತಾರೆ ಲವ್ಲಿನಾ ಬೋರ್ಗೊಹೈನ್ ಸೇರಿದಂತೆ ಹಲವು ಅಥ್ಲೀಟ್‌ಗಳು ಗ್ಲ್ಯಾಸ್ಗೋ ನಗರದ ಪ್ರಸಿದ್ಧ ‘ಮಿಸ್ಟರ್ ಸಿಂಗ್ಸ್ ಇಂಡಿಯಾ’ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ನೀಡಲಾಗಿದ್ದ ಟಿಶ್ಯೂ ಪೇಪರ್ ಹಾಗೂ ನ್ಯಾಪ್‌ಕಿನ್‌ಗಳ ಮೇಲೆ ಮುದ್ರಿಸಲಾಗಿದ್ದ ಭಾರತದ ನಕ್ಷೆಯನ್ನು ಕಂಡು ಲವ್ಲಿನಾ ದಿಗ್ಭ್ರಮೆಗೊಂಡಿದ್ದಾರೆ. ಆ ನಕ್ಷೆಯಲ್ಲಿ ಭಾರತದ ಪೂರ್ಣ ಈಶಾನ್ಯ ಭಾಗವನ್ನೇ (ನಾರ್ತ್ ಈಸ್ಟ್) ಬಿಟ್ಟುಬಿಡಲಾಗಿತ್ತು.

ತಮ್ಮ ತಾಯ್ನಾಡಿನ ಭಾಗವೇ ನಕ್ಷೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಅಸ್ಸಾಂ ಮೂಲದ ಲವ್ಲಿನಾ ತಕ್ಷಣವೇ ಅಲ್ಲಿಯೇ ತಮ್ಮ ವಿರೋಧ ದಾಖಲಿಸಿದ್ದಾರೆ. “ನಮ್ಮ ದೇಶದ ಪ್ರತಿಯೊಂದು ಭಾಗವೂ ನಮಗೆ ಅತ್ಯಂತ ಮುಖ್ಯ. ಈ ರೀತಿಯಾಗಿ ಈಶಾನ್ಯ ಭಾರತವನ್ನು ನಕ್ಷೆಯಿಂದ ಕೈಬಿಟ್ಟಿರುವುದು ನಿಜಕ್ಕೂ ಬೇಸರದ ಸಂಗತಿ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ” ಎಂದು ಅವರು ಮಾಧ್ಯಮಗಳ ಎದುರು ಅಸಮಾಧಾನ ಹೊರಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಚಾರ ತಿಳಿಯುತ್ತಿದ್ದಂತೆಯೇ ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ಅಧ್ಯಕ್ಷ ಅಜಯ್ ಸಿಂಗ್ ಕ್ರೀಡಾಪಟುವಿನ ಬೆಂಬಲಕ್ಕೆ ನಿಂತಿದ್ದಾರೆ. ಕೇವಲ ಈಶಾನ್ಯ ಭಾಗ ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಭಾಗವನ್ನೂ ನಕ್ಷೆಯಲ್ಲಿ ಸರಿಯಾಗಿ ತೋರಿಸಲಾಗಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ವಿದೇಶಿ ಮಣ್ಣಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಹಾರವನ್ನು ಪ್ರಸಾರ ಮಾಡುವ ಸಂಸ್ಥೆಗಳು ಇಂತಹ ಸೂಕ್ಷ್ಮ ವಿಷಯಗಳಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ತಕ್ಷಣವೇ ಆ ತಪ್ಪಾದ ನ್ಯಾಪ್‌ಕಿನ್‌ಗಳನ್ನು ಹಿಂಪಡೆದು ಸರಿಯಾದ ನಕ್ಷೆಯನ್ನು ಬಳಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಸಾರ್ವಕಾಲಿಕ ಶ್ರೇಷ್ಠ ಸಾಧನೆ ತಂದುಕೊಟ್ಟ ಸಂಭ್ರಮದಲ್ಲಿದ್ದ ಕ್ರೀಡಾಪಟುಗಳಿಗೆ ಈ ಘಟನೆ ಕಹಿ ಅನುಭವ ನೀಡಿದೆ. ಈ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಕ್ರೀಡಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರೆಸ್ಟೋರೆಂಟ್ ಮ್ಯಾನೇಜ್‌ಮೆಂಟ್‌ನಿಂದ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.

An Indian restaurant in Glasgow has landed in controversy after Indian athletes were hosted for dinner following their successful campaign at the Commonwealth Games.

The restaurant, Mister Singh’s India – The Home of Curry, features a map of India on its napkins. However, boxer… pic.twitter.com/LNkiZs9kA5

— IANS (@ians_india) August 2, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular