HomeLatest NewsBREAKING : ಕಾಮನ್ ವೆಲ್ತ್ ಗೇಮ್ಸ್ 2026 : ಬಾಕ್ಸಿಂಗ್'ನಲ್ಲಿ ಭಾರತದ ಪ್ರೀತಿ ಪವಾರ್ ಹಾಗೂ...

BREAKING : ಕಾಮನ್ ವೆಲ್ತ್ ಗೇಮ್ಸ್ 2026 : ಬಾಕ್ಸಿಂಗ್’ನಲ್ಲಿ ಭಾರತದ ಪ್ರೀತಿ ಪವಾರ್ ಹಾಗೂ ಜೈಸ್ಮಿನ್ ಲ್ಯಾಂಬೋರಿಯಾಗೆ ಚಿನ್ನದ ಪದಕ

  ಸ್ಕಾಟ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತದ ಬಾಕ್ಸರ್ ಜೈಸ್ಮಿನ್ ಲ್ಯಾಂಬೋರಿಯಾ ಹಾಗೂ ಭಾರತದ ಪ್ರೀತಿ ಪವಾರ್ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಮತ್ತೊಂದು ಹೆಮ್ಮೆ ತಂದಿದ್ದಾರೆ.24 ವರ್ಷದ ಹರಿಯಾಣದ ಭಿವಾನಿ ಮೂಲದ ಜೈಸ್ಮಿನ್, ಶನಿವಾರ (ಆಗಸ್ಟ್ 1) ನಡೆದ ಫೈನಲ್‌ನಲ್ಲಿ ಉತ್ತರ ಐರ್ಲೆಂಡ್‌ನ ಮೈಕೇಲಾ ವಾಲ್ಶ್ ಅವರನ್ನು 5-0 ಅಂತರದ ಏಕಪಕ್ಷೀಯ ತೀರ್ಪಿನಲ್ಲಿ ಸೋಲಿಸಿ ಭಾರತದ ಎರಡನೇ ಬಾಕ್ಸಿಂಗ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಸ್ಕಾಟ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್–2026ರಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ಜೈಸ್ಮಿನ್ ಲ್ಯಾಂಬೋರಿಯಾ ಹಾಗೂ ಪ್ರೀತಿ ಪವಾರ್ ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ಫೈನಲ್‌ನಲ್ಲಿ ಇಬ್ಬರೂ ಅದ್ಭುತ ಪ್ರದರ್ಶನ ನೀಡಿ ಎದುರಾಳಿಗಳನ್ನು ಮಣಿಸುವ ಮೂಲಕ ಭಾರತಕ್ಕೆ ಅಮೂಲ್ಯ ಚಿನ್ನದ ಪದಕಗಳನ್ನು ತಂದುಕೊಟ್ಟು ಹೆಮ್ಮೆಯ ಕ್ಷಣವನ್ನು ಸೃಷ್ಟಿಸಿದ್ದಾರೆ.ಈ ಮೂಲಕ ಭಾರತ ಒಟ್ಟು 7 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜೈಸ್ಮಿನ್, 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಬಾರಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕಂಚನ್ನು ಚಿನ್ನವಾಗಿ ಪರಿವರ್ತಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೈಸ್ಮಿನ್‌ಗೂ ಮುನ್ನ ಭಾರತದ ಮತ್ತೋರ್ವ ಬಾಕ್ಸರ್ ಪ್ರೀತಿ ಪವಾರ್ ಮಹಿಳೆಯರ 54 ಕೆಜಿ ವಿಭಾಗದ ಫೈನಲ್‌ನಲ್ಲಿ ಕೆನಡಾದ ಸ್ಕಾರ್ಲೆಟ್ ಸಾವನ್ನಾ ಡೆಲ್ಗಾಡೊ ಅವರನ್ನು ಮಣಿಸಿ ಭಾರತದ ಬಾಕ್ಸಿಂಗ್ ವಿಭಾಗದ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದರು.

ಜೈಸ್ಮಿನ್ ಲ್ಯಾಂಬೋರಿಯಾ ಅವರ ಈ ಚಿನ್ನದ ಗೆಲುವಿನೊಂದಿಗೆ ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತದ ಬಾಕ್ಸರ್‌ಗಳು ಮತ್ತೊಮ್ಮೆ ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular