ಯಲಹಂಕದ ಜಿಸಿ ಸಿಆರ್ಪಿಎಫ್ (GC CRPF), ಮಾಸ್ಟರ್ ಕ್ಯಾಂಟೀನ್, ನಲ್ಲಿ ಲೆಕ್ಕಪತ್ರ ಸಿಬ್ಬಂದಿಯನ್ನು (ಗುತ್ತಿಗೆ ಆಧಾರಿತ) ಮೇರೆಗೆ ನೇಮಕ ಮಾಡಿಕೊಳ್ಳಲ್ಲು ಆಗಸ್ಟ್ 05 2026 ರಂದು ನಡೆಯಲಿರುವ ನೇರ ಸಂದರ್ಶನಕ್ಕೆ (Walk-in Interview) ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ( B.COM) ಲೆಕ್ಕಪತ್ರ ನಿರ್ವಹಣೆ, ಶಾಸನಬದ್ಧ ನಿಯಮಗಳ ಪಾಲನೆ ಮತ್ತು ಅಕೌಂಟಿಂಗ್ ಸಾಫ್ಟ್ವೇರ್ ಅಥವಾ ತತ್ಸಮಾನ ಬಳಕೆಯಲ್ಲಿ ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9448514105 / 8472951241 ಮೂಲಕ ಸಂಪರ್ಕಿಸಬಹುದು ಎಂದು ಯಲಹಂಕದ ಜಿಸಿ ಸಿಆರ್ಪಿಎಫ್ (GC CRPF), ಮಾಸ್ಟರ್ ಕ್ಯಾಂಟೀನ್ ನ ವ್ಯಾವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಸ್ವಂತ ಉದ್ಯಮ ಆರಂಭಿಸಲು : ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರ
ಬೆಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗಾಗಿ ಉಚಿತ ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು 2026ರ ಆಗಸ್ಟ್ 3 ರೊಳಗೆ ಸಿಡಾಕ್, ರಾಜಾಜಿನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಕೈಗಾರಿಕಾ ಪ್ರದೇಶ, ಬೆಂಗಳೂರು-560010 ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಅಥವಾ ದೂರವಾಣಿ ಮೂಲಕವೂ ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9008175702, 9448413948 ಅಥವಾ 9986332736 ಸಂಪರ್ಕಿಸಬಹುದು ಎಂದು ಸಿಡಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

