ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಸಿನಿಮಾದ ಸುತ್ತಲಿನ ಹೈಪ್ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಸಿನಿರಂಗದಲ್ಲಿ ಸೃಷ್ಟಿಯಾಗಿರುವ ದೊಡ್ಡ ಮಟ್ಟದ ನಿರೀಕ್ಷೆಯ ಬೆನ್ನಲ್ಲೇ, ಈಗ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಬಿಡುಗಡೆ ಮುಹೂರ್ತ ಅಧಿಕೃತವಾಗಿ ಹೊರಬಿದ್ದಿದೆ.
ಯಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, “ಕೌಂಟ್‌ಡೌನ್ ಶುರುವಾಗಿದೆ. #ToxicTrailer ಆಗಸ್ಟ್ 8, 2026 ರಂದು ಬಿಡುಗಡೆಯಾಗಲಿದೆ. ಆಗಸ್ಟ್ 26, 2026 ರಿಂದ ಟಾಕ್ಸಿಕ್ ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ” ಎಂದು ಬರೆದುಕೊಂಡಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ.
ಆಗಸ್ಟ್ 8ಕ್ಕೆ ಪ್ರೀ-ರಿಲೀಸ್ ಕಮ್ ಟ್ರೇಲರ್ ಲಾಂಚ್ ಧಮಾಕ
ಪ್ರತಿಭಾವಂತ ನಿರ್ದೇಶಕಿ ಗೀತು ಮೋಹನ್‌ದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಪಕ್ಕಾ ಸ್ಟೈಲಿಶ್ ಹಾಗೂ ಆಕ್ಷನ್ ಪ್ಯಾಕ್ಡ್ ಸಿನಿಮಾದ ಟ್ರೇಲರ್ ಆಗಸ್ಟ್ 8, 2026 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಬೆಂಗಳೂರಿನಲ್ಲಿ ಸಂಜೆ ಅದ್ದೂರಿಯಾಗಿ ನಡೆಯಲಿರುವ ಬೃಹತ್ ‘ಪ್ರೀ-ರಿಲೀಸ್ ಕಮ್ ಟ್ರೇಲರ್ ಲಾಂಚ್’ ಇವೆಂಟ್‌ನಲ್ಲಿ ಚಿತ್ರದ ಅಸಲಿ ಝಲಕ್ ಅನಾವರಣಗೊಳ್ಳಲಿದೆ.
https://www.instagram.com/p/DbfGwHFPnbV/?utm_source=ig_web_copy_link&igsh=NTc4MTIwNjQ2YQ==
ಆಗಸ್ಟ್ 26ಕ್ಕೆ 6 ಭಾಷೆಗಳಲ್ಲಿ ಗ್ರಾಂಡ್ ರಿಲೀಸ್
ಗ್ರೋನ್-ಅಪ್ಸ್‌ಗಳಿಗಾಗಿ ತಯಾರಾಗಿರುವ ಈ ಯೂತ್‌ಫುಲ್ ಹಾಗೂ ಡಾರ್ಕ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಸ್ಟ್ 26, 2026 ರಂದು ವಿಶ್ವದಾದ್ಯಂತ ಭರ್ಜರಿಯಾಗಿ ಬೆಳ್ಳಿಪರದೆಗೆ ಅಪ್ಪಳಿಸಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ.
ತಾರಾಗಣ ಮತ್ತು ನಿರ್ಮಾಣ ಸಂಸ್ಥೆ:
ಮಲ್ಟಿ-ಸ್ಟಾರರ್ ತಾರಾಗಣ: ಈ ಗ್ಲೋಬಲ್ ಪ್ರಾಜೆಕ್ಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಕುರೇಷಿ ಹಾಗೂ రుಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ದೈತ್ಯ ನಿರ್ಮಾಣ ಸಂಸ್ಥೆಗಳು: ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಯಶ್ ಅವರ ಮನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ (Monster Mind Creations) ಜಂಟಿಯಾಗಿ ಈ ಬಹುಕೋಟಿ ವೆಚ್ಚದ ಸಿನಿಮಾವನ್ನು ನಿರ್ಮಿಸಿವೆ.
ಕಜಿಎಫ್ ಸರಣಿಯ ಸಾರ್ವಕಾಲಿಕ ಯಶಸ್ಸಿನ ಬಳಿಕ ಯಶ್ ನಟಿಸುತ್ತಿರುವ ಈ ಗ್ಲೋಬಲ್ ಪ್ರಾಜೆಕ್ಟ್ ಬಾಕ್ಸ್ ಆಫೀಸ್‌ನಲ್ಲಿ ದಂಗಲ್, ಬಾಹುಬಲಿ, ಕೆಜಿಎಫ್ ಮತ್ತು ಪುಷ್ಪ ಚಿತ್ರಗಳ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕನ್ನಡ ಸಿನಿಮಾವೊಂದನ್ನು ಈ ಮಟ್ಟಕ್ಕೆ ಜಾಗತಿಕ ವೇದಿಕೆಯಲ್ಲಿ ಕೊಂಡೊಯ್ಯುತ್ತಿರುವ ಯಶ್ ಅವರ ಶ್ರಮಕ್ಕೆ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಈಗಿನಿಂದಲೇ ಕೌಂಟ್‌ಡೌನ್ ಆರಂಭಿಸಿದ್ದಾರೆ.

