HomeKarnatakaಕುರಿಗಳ ಮೇಯಿಸಿಕೊಂಡು ಮನೆಗೆ ಬರುವಾಗಲೇ ಆಘಾತಕಾರಿ ಘಟನೆ: ರಸ್ತೆಯಲ್ಲೇ 50ಕ್ಕೂ ಹೆಚ್ಚು ಕುರಿಗಳ ಸರಣಿ ಸಾವು

ಕುರಿಗಳ ಮೇಯಿಸಿಕೊಂಡು ಮನೆಗೆ ಬರುವಾಗಲೇ ಆಘಾತಕಾರಿ ಘಟನೆ: ರಸ್ತೆಯಲ್ಲೇ 50ಕ್ಕೂ ಹೆಚ್ಚು ಕುರಿಗಳ ಸರಣಿ ಸಾವು

ಗದಗ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕದಂಪುರ ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಕುರಿಗಳ ಸರಣಿ ಸಾವು ಕಂಡು ಕುರಿಗಾಹಿ ಕಂಗಾಲಾಗಿದ್ದಾರೆ.

ದಂಪುರ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದೆ. ಕುರಿಗಳನ್ನು ಮೇಯಿಸಿಕೊಂಡು ಊರಿಗೆ ಬರುವಾಗ ರಸ್ತೆಯಲ್ಲಿಯೇ ಏಕಾಏಕಿ ಕುರಿಗಳು ಸಾವನ್ನಪ್ಪುತ್ತಿವೆ. ಕುರಿಗಾಹಿ ಶರಣಪ್ಪ ಗೋಡೆಕರ್ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪುತ್ತಿವೆ.

ವಿಷಕಾರಿ ತಪ್ಪಲು ಸೇವಿಸಿ ಕುರಿಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಪಶು ವೈದ್ಯರಿಗೆ ಶರಣಪ್ಪ ಕರೆ ಮಾಡಿದರೂ ಸ್ಪಂದನೆ ವ್ಯಕ್ತವಾಗಿಲ್ಲ. ಪಶು ವೈದ್ಯರ ಬೇಜವಾಬ್ದಾರಿಗೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. 500 ಕುರಿಗಳ ಪೈಕಿ ಈಗಾಗಲೇ 50 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಮತ್ತಷ್ಟು ಕುರಿಗಳು ಅಸ್ವಸ್ಥಗೊಂಡಿದ್ದರೂ ವೈದ್ಯರು ಬರುತ್ತಿಲ್ಲ. ಪಶುವೈದ್ಯರು ಬಂದು ಕುರಿಗಳ ಪ್ರಾಣ ಉಳಿಸುವಂತೆ ಒತ್ತಾಯಿಸಲಾಗಿದೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರಕೃಪೆ: ಎಐ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular