ನಿನ್ನೆ ( ಜುಲೈ 30 ) ಭಾರತ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ರಾಮಾಯಣ ಮೊದಲ ಭಾಗದ ಟ್ರೈಲರ್ ಬಿಡುಗಡೆಯಾಯಿತು. ಮೊದಲ ಭಾಗವೇ 2000 ಕೋಟಿ ರೂ ಬಜೆಟ್‌ನಲ್ಲಿ ತಯಾರಾದ ಕಾರಣ ದೃಶ್ಯವೈಭವ ಅದ್ಭುತವಾಗಿರಲಿದೆ, ವಿಎಫ್‌ಎಕ್ಸ್ ಅದ್ದೂರಿಯಾಗಿರಲಿದೆ ಎಂದೆಲ್ಲ ಊಹಿಸಲಾಗಿತ್ತು.
ಆದರೆ ಅಸಲಿಯತ್ತಿಗೆ ರಾಮಾಯಣ ಟ್ರೈಲರ್ ನಿರೀಕ್ಷೆಯ ಹಾಗೆ ಸಂಪೂರ್ಣ ಒಳ್ಳೆಯ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಳ್ಳಲಿಲ್ಲ. ಟ್ರೈಲರ್‌ನ ಕೆಲವೆಡೆ ಕಂಡುಬಂದ ಕಳಪೆ ವಿಎಫ್‌ಎಕ್ಸ್, ನ್ಯೂನತೆಗಳು ಸಿನಿ ರಸಿಕರ ಟೀಕೆಗೆ ಗುರಿಯಾದವು.
ಚಿತ್ರಕ್ಕೆ ಖರ್ಚು ಮಾಡಿರುವ ಹಣಕ್ಕೂ, ಟ್ರೈಲರ್ ಮೂಡಿ ಬಂದಿರುವ ರೀತಿಗೂ ಯಾವುದೇ ಸಂಬಂಧವಿಲ್ಲ, ಎಐಗೆ ಪ್ರಾಂಪ್ಟ್ ಕೊಟ್ಟರೆ ಇದಕ್ಕಿಂತ ಚೆನ್ನಾಗಿ ಫಲಿತಾಂಶ ದೊರಿಕಲಿದೆ ಎಂದು ಕಾಲೆಳೆದರು.
ಕೇವಲ ಟ್ರೈಲರ್ ಗುಣಮಟ್ಟದ ವಿಚಾರ ಮಾತ್ರವಲ್ಲದೇ ಕಲಾವಿದರ ಆಯ್ಕೆಯ ಬಗ್ಗೆ ಸಹ ಟ್ರೋಲ್‌ಗಳು ನಡೆದಿದ್ದು, ಅದರಲ್ಲೂ ವಿಶೇಷವಾಗಿ ಸಾಯಿ ಪಲ್ಲವಿ ಆಯ್ಕೆಯ ಬಗ್ಗೆ ಅನೇಕರು ವ್ಯಂಗ್ಯವಾಡಿದ್ದಾರೆ.
ಸೀತೆಯ ಪಾತ್ರದ ಸಾಯಿ ಪಲ್ಲವಿಗಿಂತ ಶೂರ್ಪನಖಿ ಪಾತ್ರ ಮಾಡಿರುವ ರಾಕುಲ್ ಪ್ರೀತ್ ಸಿಂಗ್ ಅಂದವಾಗಿ ಕಾಣಿಸಿಕೊಂಡಿದ್ದು, ಇದು ಇತಿಹಾಸದಲ್ಲಿ ಮೊದಲು ಎಂದರು. ಇದರ ಜತೆಗೆ ಸದ್ಯ ಟ್ರೈಲರ್‌ನ ಒಂದು ದೃಶ್ಯದಲ್ಲಿ ಸಾಯಿ ಪಲ್ಲವಿ ಹಿಂಭಾಗ ನಿಂತಿರುವ ನಟಿಯನ್ನು ನೆಟ್ಟಿಗರು ಕೊಂಡಾಡತೊಡಗಿದ್ದು, ಸಾಯಿ ಪಲ್ಲವಿಗಿಂತ ಆ ಯುವ ನಟಿಯೇ ವೀಕ್ಷಕರ ಗಮನ ಸೆಳೆದಿದ್ದಾರೆ. ಈ ಮಟ್ಟಕ್ಕೆ ಪಾತ್ರಧಾರಿಗಳ ಆಯ್ಕೆ ಮಾಡಿದ ಪುಣ್ಯಾತ್ಮ ಯಾರು ಎಂದು ಕಾಲೆಳೆದಿದ್ದಾರೆ.
ಜತೆಗೆ ಸಾಯಿ ಪಲ್ಲವಿ ಹಿಂಭಾಗ ನಿಂತ ಆ ಯುವ ನಟಿ ಯಾರು ಎಂಬ ಹುಡುಕಾಟ ಜೋರಾಗಿದ್ದು, ಇನ್ಸ್ಟಾಗ್ರಾಮ್ ಐಡಿ ಏನು ಎಂಬ ಪ್ರಶ್ನೆಗಳು ಕೇಳಿಬಂದಿವೆ.
ಆಕೆಯ ಹೆಸರು ಸುರಭಿ ದಾಸ್ ಎಂದು ತಿಳಿದುಬಂದಿದೆ. ಈಕೆ ಚಿತ್ರದಲ್ಲಿ ಸೀತೆಯ ಸಹೋದರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಒಂಬತ್ತು ಲಕ್ಷ ಅನುಯಾಯಿಗಳನ್ನು ಹೊಂದಿರುವ ಸುರಭಿ ದಾಸ್ ಈ ವೈರಲ್ ಟ್ರೋಲ್‌ನಿಂದ ಇನ್ನೂ ಹೆಚ್ಚಿನ ಫಾಲೋವರ್ಸ್ ಪಡೆದುಕೊಳ್ಳುವ ಸಾಧ್ಯತೆಯಿದೆ.
https://x.com/recreate_619251/status/2082778953648087102?s=20

