ಮೈಸೂರು: ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರು ಪ್ರಧಾನ ಅಂಚೆ ಕಚೇರಿಯ ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸುವ ಉದ್ದೇಶದಿಂದ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೂ ಕಾರ್ಯನಿರ್ವಹಿಸಲಿದೆ.
ಗ್ರಾಹಕರು ಬೇಕಾದ ಸಮಯದಲ್ಲಿ ಅಂಚೆ ಸೇವೆ ಪಡೆಯಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೆಲಸದ ವೇಳೆಯನ್ನು ಪರಿಷ್ಕರಿಸಲಾಗಿದೆ. ಉಳಿತಾಯ ಖಾತೆ, ಪೋಸ್ಟಲ್ ಲೈಫ್ ಇನ್ಶುರೆನ್ಸ್, ಸ್ಪೀಡ್ ಪೋಸ್ಟ್, ಪಾರ್ಸಲ್ ಸರ್ವಿಸ್ ಸೇರಿ ಎಲ್ಲಾ ರೀತಿಯ ವ್ಯವಹಾರಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು.
ಗ್ರಾಹಕರು ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಅಂಚೆ ಸೇವೆ ಪಡೆಯಬಹುದು. ಇದಕ್ಕಾಗಿ ಪ್ರಧಾನ ಅಂಚೆ ಕಚೇರಿಯ ಕೆಲಸದ ವೇಳೆ ಪರಿಷ್ಕರಿಸಲಾಗಿದ್ದು, ಗ್ರಾಹಕರು ಸೌಲಭ್ಯ ಪಡೆದುಕೊಳ್ಳುವಂತೆ ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ. ಹರೀಶ್ ತಿಳಿಸಿದ್ದಾರೆ.

