HomeLatest Newsಮೋದಿ ಕಾಲು ತೊಳೆದು ನೀರು ಕುಡಿಯುವ ಆಸೆ: ಸುದೇಶ್ ಬೇರಿ

ಮೋದಿ ಕಾಲು ತೊಳೆದು ನೀರು ಕುಡಿಯುವ ಆಸೆ: ಸುದೇಶ್ ಬೇರಿ

ಬಾರ್ಡರ್ ಸಿನಿಮಾ ಖ್ಯಾತಿಯ ಬಾಲಿವುಡ್‌ನ ಹಿರಿಯ ನಟ ಸುದೇಶ್ ಬೇರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನೀಡಿರುವ ಭಾವುಕ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ ಅವರನ್ನು ಭಗವಾನ್ ವಿಷ್ಣುವಿನ ಅವತಾರ ಎಂದು ಬಣ್ಣಿಸಿರುವ ಅವರು, ಅವಕಾಶ ಸಿಕ್ಕರೆ ಅವರ ಪಾದಗಳನ್ನು ತೊಳೆದು ಆ ನೀರನ್ನು ಕುಡಿಯುವುದಾಗಿ ತಿಳಿಸಿದ್ದಾರೆ.

ಅಕಂಪನಿ ಅಕ್ಕಿ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ನಟ ಸುದೇಶ್ ಬೇರಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿರುವ ವಿವಿಧ ಸಂಘಟನೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

https://x.com/DrNimoYadav/status/2082700080159846861

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿಭಟನೆ ಬಿಟ್ಟು ಸಮಾಜಮುಖಿ ಕೆಲಸ ಮಾಡಿ

ಪಾಡ್‌ಕಾಸ್ಟ್‌ನಲ್ಲಿ ಜಂತರ್ ಮಂತರ್ ಪ್ರತಿಭಟನಾಕಾರರ ವಿರುದ್ಧ ವಾಗ್ದಾಳಿ ನಡೆಸಿದ ಸುದೇಶ್ ಬೇರಿ, “ನನಗೆ ಇಂತಹ ಯಾವುದೇ ಪಕ್ಷ ಅಥವಾ ಸಂಘಟನೆಗಳ ಅರಿವಿಲ್ಲ. ಇಂತಹ ಜನರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ಹಿನ್ನಡೆಗೆ ತಳ್ಳುತ್ತಿದ್ದಾರೆ. ಪ್ರತಿಭಟನೆ ನಡೆಸುವುದು ಸಾಧನೆಯಲ್ಲ. ಸಮಾಜ ಸೇವೆ ಮಾಡುವ ನಿಜವಾದ ಉದ್ದೇಶವಿದ್ದರೆ ಮಕ್ಕಳಿಗಾಗಿ ಉದ್ಯಾನವನಗಳನ್ನು ನಿರ್ಮಿಸಿ, ಹಿರಿಯ ನಾಗರಿಕರಿಗೆ ವೃದ್ಧಾಶ್ರಮಗಳನ್ನು ತೆರೆಯಿರಿ ಮತ್ತು ಬಡವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ. ಅದನ್ನು ಬಿಟ್ಟು ಸುಮ್ಮನೆ ಜಂತರ್ ಮಂತರ್‌ನಲ್ಲಿ ಕುಳಿತು ಪ್ರತಿಭಟನೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಜಿ ವಿಷ್ಣುವಿನ ಅವತಾರ; ಕಾಲು ತೊಳೆದು ನೀರು ಕುಡಿಯುವ ಆಸೆ

ಪ್ರಧಾನಿ ಮೋದಿ ಅವರ ಆಡಳಿತವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸುದೇಶ್, “ನರೇಂದ್ರ ಮೋದಿ ಅವರು ಏನು ತಪ್ಪು ಮಾಡಿದ್ದಾರೆ? ಅವರು ಚಹಾ ಮಾರಾಟ ಮಾಡುತ್ತಲೇ ಇಡೀ ಪ್ರಪಂಚವನ್ನು ಸುತ್ತಿದ್ದಾರೆ. ನನಗೆ ಮೋದಿ ಜಿ ಅವರ ಪಾದಗಳನ್ನು ತೊಳೆದು ಆ ನೀರನ್ನು ಕುಡಿಯುವ ಆಸೆಯಿದೆ. ಯಾರಾದರೂ ಅವರೊಂದಿಗೆ ನನ್ನ ಭೇಟಿಗೆ ವ್ಯವಸ್ಥೆ ಮಾಡಿದರೆ ಆಭಾರಿಯಾಗಿರುತ್ತೇನೆ. ನಾನು ಅವರನ್ನು ವೈಯಕ್ತಿಕವಾಗಿ ಎಂದೂ ಭೇಟಿಯಾಗಿಲ್ಲ. ನಾವು ದೇವರನ್ನು ಕಣ್ಣಾರೆ ನೋಡದಿದ್ದರೂ ಹೇಗೆ ಪೂಜಿಸುತ್ತೇವೆಯೋ, ಅದೇ ರೀತಿ ನಾನು ಮೋದಿ ಜಿ ಅವರನ್ನು ಗೌರವಿಸುತ್ತೇನೆ” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ದೇಶದಲ್ಲಿ ಈಗಾಗಲೇ ರಾಮರಾಜ್ಯ ಬಂದಿದೆ

ತಮ್ಮ ಈ ಮಾತುಗಳು ಯಾವುದೇ ರಾಜಕೀಯಕ್ಕೆ ಸೀಮಿತವಲ್ಲ ಎಂದ ನಟ, “ಒಬ್ಬ ಮಾನವೀಯ ಮೌಲ್ಯವುಳ್ಳ ವ್ಯಕ್ತಿಯಾಗಿ ನಾನು ಅವರನ್ನು ಪ್ರೀತಿಸುತ್ತೇನೆ. ಭಾರತದಲ್ಲಿ ಈಗಾಗಲೇ ರಾಮರಾಜ್ಯ ಬಂದಿದೆ. ಇದನ್ನು ಅನುಭವಿಸಬೇಕೇ ಹೊರತು ವಿವರಿಸಲು ಸಾಧ್ಯವಿಲ್ಲ” ಎಂದಿದ್ದಾರೆ. ಇದರ ಜೊತೆಗೆ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತ ವೈಖರಿ ಮತ್ತು ಹಗಲಿರುಳಿನ ಶ್ರಮವನ್ನು ಸುದೇಶ್ ಬೇರಿ ಕೊಂಡಾಡಿದ್ದಾರೆ.ಪ್ರಸ್ತುತ ನಟ ಸುದೇಶ್ ಬೇರಿ ಅವರ ಈ ಹೇಳಿಕೆಗಳು ಡಿಜಿಟಲ್ ವೇದಿಕೆಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular