ಸತತ ಎರಡು ದಿನಗಳಿಂದ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆ, ಇಂದು ಮತ್ತೆ ಏರಿಕೆಯಾಗಿದೆ. 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರಗಳಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದ್ದು, ಆಷಾಢ ಮಾಸ ಮುಗಿದು ಸಾಲು ಸಾಲು ಹಬ್ಬಗಳ ಸೀಸನ್ ಪ್ರಾರಂಭವಾಗುವ ಹೊತ್ತಿಗೆ ಚಿನ್ನ ಖರೀದಿಸುವ ಯೋಜನೆಯಲ್ಲಿದ್ದ ಗ್ರಾಹಕರಿಗೆ ತುಸು ನಿರಾಸೆ ಮೂಡಿಸಿದೆ. ಮತ್ತೊಂದೆಡೆ, ಬೆಳ್ಳಿ ಬೆಲೆಯಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಬದಲಾವಣೆ ಇಲ್ಲದೆ ಸ್ಥಿರತೆ ಕಾಯ್ದುಕೊಂಡಿದೆ.
ಬೆಂಗಳೂರಲ್ಲಿ ಇಂದಿನ ಚಿನ್ನದ ದರ (ಜುಲೈ 30)
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಇಳಿಕೆ ಕಂಡಿದ್ದ ಬಂಗಾರದ ಬೆಲೆ ಇಂದು ಮತ್ತೆ ಏರಿಕೆಯತ್ತ ಮುಖಮಾಡಿದೆ:
22 ಕ್ಯಾರಟ್ (ಆಭರಣ ಚಿನ್ನ): ಪ್ರತಿ 10 ಗ್ರಾಂಗೆ ₹750 ಏರಿಕೆ ಕಂಡಿದ್ದು, ಪ್ರಸ್ತುತ ₹1,32,030 ರಂತೆ ವಹಿವಾಟು ನಡೆಸುತ್ತಿದೆ. (ಕಳೆದ ಎರಡು ದಿನಗಳಲ್ಲಿ 10 ಗ್ರಾಂಗೆ ಒಟ್ಟು ₹2,150 ರಷ್ಟು ಇಳಿಕೆಯಾಗಿತ್ತು).
24 ಕ್ಯಾರಟ್ (ಶುದ್ಧ ಚಿನ್ನ): ಪ್ರತಿ 10 ಗ್ರಾಂಗೆ ₹820 ಏರಿಕೆ ಕಂಡಿದ್ದು, ಪ್ರಸ್ತುತ ₹1,44,330 ರಂತೆ ಮಾರಾಟವಾಗುತ್ತಿದೆ.
ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದ್ದರೂ, ಬೆಳ್ಳಿಯ ಬೆಲೆ ಕಳೆದ ಕೆಲ ದಿನಗಳಿಂದ ಸ್ಥಿರವಾಗಿದೆ.
ಪ್ರತಿ 1 ಕೆಜಿ ಬೆಳ್ಳಿ ಬೆಲೆ: ₹2.35 ಲಕ್ಷ ದಂತೆ ಮುಂದುವರಿದಿದ್ದು, ಸತತ ಎರಡನೇ ದಿನವೂ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆ ಸ್ಥಿತಿಗತಿ
ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಗಳು ಸತತ ಇಳಿಕೆಯ ನಂತರ ಇಂದು ದಿಢೀರ್ ಚೇತರಿಕೆ ಕಂಡಿವೆ:
ಸ್ಪಾಟ್ ಗೋಲ್ಡ್ : ಪ್ರತಿ ಔನ್ಸ್ಗೆ 26 ಡಾಲರ್ಗಿಂತಲೂ ಹೆಚ್ಚು ಏರಿಕೆಯಾಗಿದ್ದು, 4,064 ಡಾಲರ್ ಮಟ್ಟ ತಲುಪಿದೆ.
ಸ್ಪಾಟ್ ಸಿಲ್ವರ್ : ಪ್ರತಿ ಔನ್ಸ್ಗೆ ಶೇ. 0.77 ರಷ್ಟು ಹೆಚ್ಚಳವಾಗಿ 57.73 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ – ₹14,433
ಮುಂಬೈ – ₹14,433
ದೆಹಲಿ – ₹14,433
ಕೋಲ್ಕತಾ – ₹14,433
ಹೈದರಾಬಾದ್ – ₹14,433

