ನವದೆಹಲಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಇ-ಕಾಮರ್ಸ್ ದಿಗ್ಗಜ ಫ್ಲಿಪ್ಕಾರ್ಟ್ ತನ್ನ ಬಹುನಿರೀಕ್ಷಿತ Freedom Sale 2026 ಅನ್ನು ಘೋಷಿಸಿದೆ. ಅಮೆಜಾನ್ ಬಳಿಕ ಇದೀಗ ಫ್ಲಿಪ್ಕಾರ್ಟ್ ಕೂಡ ಆಗಸ್ಟ್ ತಿಂಗಳಲ್ಲಿ ಭರ್ಜರಿ ಸೇಲ್ ಆಯೋಜಿಸುತ್ತಿದ್ದು, ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಟಿವಿ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳು ಲಭ್ಯವಾಗಲಿವೆ.
ಕಂಪನಿ ಇನ್ನೂ ಎಲ್ಲಾ ಉತ್ಪನ್ನಗಳ ರಿಯಾಯಿತಿ ದರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಪ್ರಮುಖ ಬ್ರ್ಯಾಂಡ್ಗಳ ಹಲವು ಡಿವೈಸ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ ಎಂದು ತಿಳಿಸಿದೆ. ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ ಆಗಸ್ಟ್ 8ರಿಂದ ಆರಂಭವಾಗಲಿದೆ. ಆದರೆ Flipkart Plus ಹಾಗೂ Flipkart Black ಸದಸ್ಯರಿಗೆ ಆಗಸ್ಟ್ 7ರಿಂದಲೇ, ಅಂದರೆ 24 ಗಂಟೆಗಳ ಮುಂಚಿತವಾಗಿ ಶಾಪಿಂಗ್ ಮಾಡಲು ಅವಕಾಶ ದೊರೆಯಲಿದೆ.ಸೇಲ್ ಎಷ್ಟು ದಿನ ನಡೆಯಲಿದೆ ಎಂಬುದನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ.
SBI ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿ ರಿಯಾಯಿತಿ
ಸೇಲ್ ಅವಧಿಯಲ್ಲಿ SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಶೇ.10ರವರೆಗೆ ತಕ್ಷಣದ ರಿಯಾಯಿತಿ ದೊರೆಯಲಿದೆ.ಇದಲ್ಲದೆ ಆಯ್ದ EMI ವ್ಯವಹಾರಗಳಿಗೂ ಇದೇ ಆಫರ್ ಅನ್ವಯವಾಗಲಿದೆ. ಕೆಲವು ಉತ್ಪನ್ನಗಳ ಮೇಲೆ Exchange Offer, No-Cost EMI ಸೇರಿದಂತೆ ವಿಶೇಷ ಕೊಡುಗೆಗಳೂ ಲಭ್ಯವಾಗಲಿವೆ.
ಯಾವ ಉತ್ಪನ್ನಗಳ ಮೇಲೆ ಆಫರ್?
ಫ್ಲಿಪ್ಕಾರ್ಟ್ ಈಗಾಗಲೇ ಹಲವು ಜನಪ್ರಿಯ ಉತ್ಪನ್ನಗಳ ಮೇಲೆ ರಿಯಾಯಿತಿ ಸಿಗಲಿದೆ ಎಂದು ಘೋಷಿಸಿದೆ. ಅವುಗಳಲ್ಲಿ:
• iPhone 17
• Samsung Galaxy S25
• Motorola Edge 70 Fusion
• Samsung Galaxy Tab A11 Plus
ಸೇರಿವೆ.
ಇದರ ಜೊತೆಗೆ:
• Samsung Galaxy Book 4 ಲ್ಯಾಪ್ಟಾಪ್
• Samsung 55 ಇಂಚಿನ 4K Smart TV
• ಆಯ್ದ boAt ಇಯರ್ಫೋನ್ಗಳು
ಇನ್ನಷ್ಟು ವಿಶೇಷ ಆಫರ್
ಈ ಬಾರಿ ಫ್ರೀಡಮ್ ಸೇಲ್ನಲ್ಲಿ ಎಲೆಕ್ಟ್ರಾನಿಕ್ಸ್ ಮಾತ್ರವಲ್ಲದೆ, ಗೃಹೋಪಯೋಗಿ ವಸ್ತುಗಳು, ಹೋಮ್ ಡೆಕೋರ್ ಉತ್ಪನ್ನಗಳು ಹಾಗೂ ಇತರೆ ವಿಭಾಗಗಳ ಮೇಲೂ ವಿಶೇಷ ರಿಯಾಯಿತಿಗಳು ದೊರೆಯುವ ಸಾಧ್ಯತೆ ಇದೆ.ಆಗಸ್ಟ್ನಲ್ಲಿ ಶಾಪಿಂಗ್ ಮಾಡಲು ಯೋಜಿಸುತ್ತಿರುವವರಿಗೆ ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ ಉತ್ತಮ ಅವಕಾಶವಾಗಲಿದೆ. ವಿಶೇಷವಾಗಿ ಬ್ಯಾಂಕ್ ಆಫರ್ಗಳು, ಎಕ್ಸ್ಚೇಂಜ್ ಸೌಲಭ್ಯ ಮತ್ತು ನೋ-ಕಾಸ್ಟ್ EMIಗಳ ಮೂಲಕ ಗ್ರಾಹಕರು ಹೆಚ್ಚಿನ ಉಳಿತಾಯ ಮಾಡಬಹುದು.

