ಬೆಂಗಳೂರು: ಕಾವೇರಿ ನೀರು ಪೂರೈಕೆ ಪರಿಶೀಲಿಸಲು ಇನ್ಮುಂದೆ ವ್ (AI) ತಂತ್ರಜ್ಞಾನ ಬರಲಿದೆ. ಬೆಂಗಳೂರು ನಗರದಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ಹಲವೆಡೆೀರಿಕೆ, ನೀರು ಕಲುಷಿತಗೊಳ್ಳುವಿಕೆಯಿಂದಾಗಿ ಪದೇ ಪದೇ ಸಮಸ್ಯೆ ಎದುರಾಗುತ್ತಿದೆ. ಈ ಅವಾಂತರಗಳನ್ನು ತಪ್ಪಿಸುವ ಸಲುವಾಗಿ ಹಾಗೂ ನೀರು ಪೂರೈಕೆ ವ್ಯವಸ್ಥೆ ಸಮರ್ಪಕಗೊಳಿಸಿವ ನಿಟ್ಟಿನಲ್ಲಿ ಬೆಂಗಳೂರು ಜಲ ಮಂಡಳಿ AI ರೋಬೋಟಿಕ್ ಬಳಕೆಗೆ ಮುಂದಾಗಿದೆ.
ಇತ್ತೀಚೆಗೆ ಬೆಂಗಳೂರಿನ ಕತ್ರಿಗುಪ್ಪೆ ಮತ್ತು ಯಲಹಂಕದ ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರಿನಲ್ಲಿ ಕೊಳಚೆ ನೀರು ಸೇರಿಕೊಂಡು ಜನರು ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಇಂತಹ ಸಮಸ್ಯೆಗಳಿಗೆ ಕಡುವಾಣ ಹಾಕಲು ಬೆಂಗಳೂರು ಜಲ ಮಂಡಳಿ (BWSSB) ಮುಂದಾಗಿದೆ. ಹೊಸ ತಂತ್ರಜ್ಞಾನ ಪ್ರಯೋಗದ ಮೂಲಕ ನೀರು ಪೂರೈಕೆ ವ್ಯವಸ್ಥೆ ಪರಿಣಾಮಕಾರಿಗೊಳಿಸಲಿದೆ. ನೀರಿನ ಪೈಪ್ಲೈನ್ಗಳ ಸೋರಿಕೆ, ಹಾನಿ ಹಾಗೂ ನೀರು ಕಲುಷಿತಗೊಳ್ಳುವ ಸಾಧ್ಯತೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ಸ್ ತಂತ್ರಜ್ಞಾನವನ್ನು ಬಳಸುವ ಪ್ರಾಯೋಗಿಕ ಯೋಜನೆ ಆರಂಭವಾಗಲಿದೆ.
18 ತಿಂಗಳ ಈ ಪ್ರಾಯೋಗಿಕ ಯೋಜನೆಯನ್ನು ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಅಂಡರ್ಗ್ರೌಂಡ್ ನೀರು ಪೂರೈಕೆ ಪೈಪ್ಲೈನ್ಗಳನ್ನು ಪರಿಶೀಲಿಸಲು ಸುಧಾರಿತ ರೋಬೋಟಿಕ್ ಉಪಕರಣಗಳನ್ನು ಬಳಸಲಾಗುತ್ತದೆ.
ಪೈಪ್ಲೈನ್ನಲ್ಲಿ ಸೋರಿಕೆ, ಹಾನಿ ಅಥವಾ ನೀರು ಕಲುಷಿತಗೊಂಡಿರುವುದನ್ನು ರೋಬೋಟಿಕ್ ತಂತ್ರಜ್ಞಾನ ಪತ್ತೆಹಚ್ಚಲಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಂತ್ರಜ್ಞಾನದ ಮೂಲಕ ಎಚ್ಚರಿಕೆ ರವಾನಿಸಲಿದೆ. ಇದರಿಂದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ನೀರು ಪೋಲಾಗುವುದು ಹಾಗೂ ಆದಾಯದ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಹೊಸ ತಂತ್ರಜ್ಞಾನದಿಂದ ನೀರು ಸೋರಿಕೆ, ಪೈಪ್ಲೈನ್ ದೋಷ, ನೀರಿನ ಕಲುಷಿತಗೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷೆ ಮಂಜುಳಾ ಎನ್.ಮಾಹಿತಿ ನೀಡಿದ್ದಾರೆ.
ಟೈಟಾನ್ ಕಂಪನಿ ಲಿಮಿಟೆಡ್ನ ‘Design Impact Award’ ಅನುದಾನ ಕಾರ್ಯಕ್ರಮದಡಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಇದಕ್ಕಾಗಿ ಜಲಮಂಡಳಿ ಮೇಲೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ತಿಳಿದುಬಂದಿದೆ.

