ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಭವಿಷ್ಯ ಮುಂದೇನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದ್ದು, ನ್ಯಾಯಾಲಯದಲ್ಲಿ ನಡೆಯುವ ಟ್ರಯಲ್ನಲ್ಲಿ ಡಿ ಬಾಸ್ ಹೊರ ಬರುತ್ತಾರಾ ಇಲ್ಲವೇ ಎಂಬುದು ತಿಳಿದುಬರಲಿದೆ.
ಹೀಗೆ ತನ್ನ ಮುಂದಿನ ಭವಿಷ್ಯದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಸಹ ದರ್ಶನ್ ತನಗೆ ಭದ್ರ ನೆಲೆ ಕಟ್ಟಿಕೊಟ್ಟ ಚಿತ್ರರಂಗದ ಚಿಂತೆಯನ್ನು ಮಾತ್ರ ಬಿಟ್ಟಿಲ್ಲ ಎಂಬುದು ಅವರ ಆಪ್ತ ಸ್ನೇಹಿತೆ ರಕ್ಷಿತಾ ಪ್ರೇಮ್ ಮಾತಿನಲ್ಲಿ ತಿಳಿದುಬಂದಿದೆ.
ಹೌದು, ಇತ್ತೀಚೆಗಷ್ಟೆ ಜೈಲಿನಲ್ಲಿರುವ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ತೆರಳಿದ್ದರು. ಇವರ ಜತೆ ರಕ್ಷಿತಾ ಪ್ರೇಮ್ ಸಹ ಹೋಗಿದ್ದರು. ಈ ವೇಳೆ ದರ್ಶನ್ ತನ್ನ ಬಳಿ ಏನು ಮಾತನಾಡಿದರು ಎಂಬುದನ್ನು ರಕ್ಷಿತಾ ಪ್ರೇಮ್ ತಮ್ಮ ಆಪ್ತರೊಡನೆ ಹೇಳಿಕೊಂಡಿದ್ದು, ಈ ಕುರಿತು ಸುವರ್ಣ ನ್ಯೂಸ್ ಸಿನಿಮಾ ಹಂಗಾಮದಲ್ಲಿ ತಿಳಿಸಿದೆ.
ಈ ವರದಿ ಪ್ರಕಾರ ರಕ್ಷಿತಾ ಪ್ರೇಮ್ ಬಳಿ ದರ್ಶನ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ಬಿಡುಗಡೆಯಾಯ್ತಾ ಎಂದು ಪ್ರಶ್ನಿಸಿದರಂತೆ, ಅಲ್ಲದೇ ಡಾಲಿ ಧನಂಜಯ್ ನಿರ್ಮಿಸಿ, ನಟಿಸಿದ ಮದರ್ ಪ್ರಾಮಿಸ್ ಚಿತ್ರ ಫಲಿತಾಂಶ ಏನಾಯ್ತು ಎಂದೂ ಸಹ ಕೇಳಿದರಂತೆ. ಜತೆಗೆ ಕನ್ನಡ ಚಿತ್ರರಂಗ ಚೆನ್ನಾಗಿರಬೇಕು, ಚಿತ್ರಗಳು ಯಶಸ್ಸು ಸಾಧಿಸಬೇಕು ಎಂದು ದರ್ಶನ್ ಆಶಿಸಿದರು ಎಂದು ರಕ್ಷಿತಾ ಪ್ರೇಮ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ

