HomeLatest Newsನೀಟ್ ಪ್ರತಿಭಟನಾಕಾರರ ವಿರುದ್ಧ ಕಂಗನಾ ರಣಾವತ್ ಗರಂ: 'ಜೆನ್ ಜಿ' ಯುವಕರ ವೀಡಿಯೊಗಳಿಗೆ ನಟಿ ತೀವ್ರ...

ನೀಟ್ ಪ್ರತಿಭಟನಾಕಾರರ ವಿರುದ್ಧ ಕಂಗನಾ ರಣಾವತ್ ಗರಂ: ‘ಜೆನ್ ಜಿ’ ಯುವಕರ ವೀಡಿಯೊಗಳಿಗೆ ನಟಿ ತೀವ್ರ ಆಕ್ರೋಶ!

ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಘಟನೆಯ ಯುವಜನರ ವಿರುದ್ಧ ಮಂಡಿ ಕ್ಷೇತ್ರದ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ವಿಡಿಯೋಗಳನ್ನು ಉಲ್ಲೇಖಿಸಿರುವ ಅವರು, ಈ ರೀಲ್ಸ್‌ಗಳು ಅಸಹ್ಯಕರವಾಗಿದ್ದು ಮನಸ್ಸಿಗೆ ಕಿರಿಕಿರಿ ಉಂಟುಮಾಡುವಂತಿವೆ ಎಂದು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಬರಹ ಹಂಚಿಕೊಂಡಿರುವ ಕಂಗನಾ, ಪ್ರತಿಭಟನಾಕಾರರ ನಡವಳಿಕೆ, ಬಳಸುತ್ತಿರುವ ಭಾಷೆ ಹಾಗೂ ಅವರ ಹಾವಭಾವಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಅಸಹ್ಯಕರವಾದ ಸನ್ನಿವೇಶಗಳನ್ನು ತಾವು ಜೀವನದಲ್ಲೇ ನೋಡಿರಲಿಲ್ಲ ಎಂದಿರುವ ಅವರು, ಸಂಸ್ಕೃತಿ ಮತ್ತು ನಾಗರಿಕತೆಗೆ ಹೆಸರಾದ ಭಾರತದಲ್ಲಿ ಯುವಜನತೆ ಈ ರೀತಿ ನಡೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಹೇಳಿದ್ದಾರೆ.

ತಮ್ಮನ್ನು ತಾವು ‘ಕಾಕ್ರೋಚ್’ ಎಂದು ಕರೆದುಕೊಳ್ಳುವ ಹಾಗೂ ಅದೇ ರೀತಿಯಾಗಿ ವರ್ತಿಸುವ ಈ ಯುವಜನತೆ ಸಮಾಜಕ್ಕೆ ಕಸ ಮತ್ತು ಗಲೀಜನ್ನು ಉಣಿಸುತ್ತಿದ್ದಾರೆ ಎಂದು ನಟಿ ವಾಗ್ದಾಳಿ ನಡೆಸಿದ್ದಾರೆ. ಈ ವೀಡಿಯೊಗಳು ತಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದು, ಕೆಲ ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಯುವಜನರ ವರ್ತನೆಯ ಕುರಿತು ಕಂಗನಾ ಮಾಡಿರುವ ಈ ಪೋಸ್ಟ್ ಇದೀಗ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular