ದೇಶದಾದ್ಯಂತದ ಎಲ್ಲಾ ರೈಲ್ವೆ ನೇಮಕಾತಿ ಮಂಡಳಿಗಳಲ್ಲಿ (RRB) ಟೆಕ್ನೀಷಿಯನ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಈಗಾಗಲೇ ಭಾರಿ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ.
ಈ ನೇಮಕಾತಿ ಅಧಿಸೂಚನೆಯಡಿ ಒಟ್ಟು 6,557 ಟೆಕ್ನೀಷಿಯನ್ ಹುದ್ದೆಗಳು ಭರ್ತಿಯಾಗಲಿವೆ. ಇದರಲ್ಲಿ ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್) – 323 ಹುದ್ದೆಗಳು, ಟೆಕ್ನೀಷಿಯನ್ ಗ್ರೇಡ್-3 – 6,234 ಹುದ್ದೆಗಳು ಸೇರಿವೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2026ರ ಜುಲೈ 31ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಂದರೆ, ಅರ್ಜಿ ಸಲ್ಲಿಸಲು ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ಇದುವರೆಗೆ ಅರ್ಜಿ ಸಲ್ಲಿಸದವರು ಗಡುವಿನೊಳಗೆ ಅರ್ಜಿ ಸಲ್ಲಿಸುವುದು ಸೂಕ್ತ.
ಈ ಹುದ್ದೆಗಳು ಟ್ರ್ಯಾಕ್ ಮೆಷಿನ್, ಬ್ರಿಡ್ಜ್, ಡೀಸೆಲ್ ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಟಿಆರ್‌ಎಸ್, ಇಎಂಯು, ಫಿಟ್ಟರ್, ವೆಲ್ಡರ್, ಕಾರ್ಪೆಂಟರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭರ್ತಿಯಾಗಲಿವೆ. ಸಿಕಂದರಾಬಾದ್ ಸೇರಿದಂತೆ ಅಹಮದಾಬಾದ್, ಅಜ್ಮೇರ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಬಿಲಾಸ್ಪುರ, ಚಂಡೀಗಢ, ಚೆನ್ನೈ, ಗುವಾಹಟಿ, ಜಮ್ಮು-ಶ್ರೀನಗರ, ಕೊಲ್ಕತ್ತಾ, ಮಾಲ್ದಾ, ಮುಂಬೈ, ಮುಜಫರ್‌ಪುರ, ಪಾಟ್ನಾ, ಪ್ರಯಾಗ್‌ರಾಜ್, ರಾಂಚಿ, ಸಿಲಿಗುರಿ, ತಿರುವನಂತಪುರಂ ಹಾಗೂ ಗೋರಖ್‌ಪುರ ಸೇರಿ ದೇಶದ ವಿವಿಧ RRB ವಲಯಗಳಲ್ಲಿ ನೇಮಕಾತಿ ನಡೆಯಲಿದೆ.
ಶೈಕ್ಷಣಿಕ ಅರ್ಹತೆ
- ಟೆಕ್ನೀಷಿಯನ್ ಗ್ರೇಡ್-3: ಎಸ್‌ಎಸ್‌ಎಲ್‌ಸಿ/10ನೇ ತರಗತಿ ಉತ್ತೀರ್ಣರಾಗಿದ್ದು, ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಅಥವಾ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿರಬೇಕು.
- ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್): ಬಿ.ಎಸ್‌ಸಿ ಅಥವಾ ಸಂಬಂಧಿತ ಎಂಜಿನಿಯರಿಂಗ್ ಡಿಪ್ಲೊಮಾ/ಪದವಿ ಹೊಂದಿರಬೇಕು.
ವಯೋಮಿತಿ
- ಗ್ರೇಡ್-1: 18 ರಿಂದ 33 ವರ್ಷ.
- ಗ್ರೇಡ್-3: 18 ರಿಂದ 30 ವರ್ಷ.
- ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಸಡಿಲಿಕೆ ಲಭ್ಯ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ
ಅಭ್ಯರ್ಥಿಗಳು 2026ರ ಜುಲೈ 31ರ ರಾತ್ರಿ 11.59 ಗಂಟೆಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ
- ಸಾಮಾನ್ಯ / OBC / EWS ಅಭ್ಯರ್ಥಿಗಳು: ₹500
- SC / ST / ಮಹಿಳೆಯರು / ಮಾಜಿ ಸೈನಿಕರು / PwBD / ಟ್ರಾನ್ಸ್‌ಜೆಂಡರ್ / EBC ಅಭ್ಯರ್ಥಿಗಳು: ₹250
CBT ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಬ್ಯಾಂಕ್ ಶುಲ್ಕವನ್ನು ಕಡಿತಗೊಳಿಸಿ ₹400ರವರೆಗೆ ಮರುಪಾವತಿ (Refund) ನೀಡಲಾಗುತ್ತದೆ. ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕವೂ ಜುಲೈ 31, 2026 ಆಗಿದೆ.
ಅರ್ಜಿ ತಿದ್ದುಪಡಿ
ಅರ್ಜಿ ಸಲ್ಲಿಸಿದ ಬಳಿಕ 2026ರ ಆಗಸ್ಟ್ 1ರಿಂದ ಆಗಸ್ಟ್ 10ರವರೆಗೆ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಈ ಹಂತಗಳ ಆಧಾರದಲ್ಲಿ ನಡೆಯಲಿದೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
CBT ಪರೀಕ್ಷೆಯು 90 ನಿಮಿಷಗಳ ಅವಧಿಯಲ್ಲಿ 100 ಪ್ರಶ್ನೆಗಳೊಂದಿಗೆ ನಡೆಯಲಿದೆ. ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕ ನೆಗೆಟಿವ್ ಮಾರ್ಕಿಂಗ್ ಅನ್ವಯವಾಗುತ್ತದೆ.
ವೇತನ
- ಟೆಕ್ನೀಷಿಯನ್ ಗ್ರೇಡ್-1: ತಿಂಗಳಿಗೆ ₹29,200
- ಟೆಕ್ನೀಷಿಯನ್ ಗ್ರೇಡ್-3: ತಿಂಗಳಿಗೆ ₹19,900
ಇದರ ಜೊತೆಗೆ ನಿಯಮಾನುಸಾರ ಇತರೆ ಭತ್ಯೆಗಳು (Allowances) ಕೂಡ ದೊರೆಯಲಿವೆ.

