HomeKarnatakaವಿವಾದಾತ್ಮಕ ಹೇಳಿಕೆ ಬಳಿಕ ಸಿ.ಟಿ.ರವಿ ಮತ್ತೊಂದು ಎಡವಟ್ಟು: ನೀಟ್ ಹೋರಾಟದ ವಿಡಿಯೋ ಎಂದು ಬಿಹಾರ ರಸ್ತೆ...

ವಿವಾದಾತ್ಮಕ ಹೇಳಿಕೆ ಬಳಿಕ ಸಿ.ಟಿ.ರವಿ ಮತ್ತೊಂದು ಎಡವಟ್ಟು: ನೀಟ್ ಹೋರಾಟದ ವಿಡಿಯೋ ಎಂದು ಬಿಹಾರ ರಸ್ತೆ ಅಪಘಾತದ ವಿಡಿಯೋ ತೋರಿಸಿದ ಎಂಎಲ್ ಸಿ

ಚಿಕ್ಕಮಗಳೂರು: ದ್ವೇಷ ಭಾಷಣ, ವಿವಾದಾತ್ಮಕ ಹೇಳಿಕೆ ಬಳಿಕ ಬಿಜೆಪಿ ಎಂಎಲ್ ಸಿ ಸಿ.ಟಿ ರವಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ನೀಟ್ ಹೋರಾಟದ ಸಂದರ್ಭದ ವಿಡಿಯೋ ಎಂದು ಹೇಳಿ ಬಿಹಾರದ ರಸ್ತೆ ಅಪಘಾತದ ವಿಡಿಯೋ ತೋರಿಸಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ನೀಟ್ ಗೂ ಮುಲ್ಲಾಗಳಿಗೂ ಏನು ಸಂಬಂಧ? ಎದೆ ಸೀಳಿದರೆ ಮೂರು ಅಕ್ಷರವಿಲ್ಲದ ಮುಲ್ಲಾಗಳು ನೀಟ್ ಪ್ರತಿಭಟನೆಯಲ್ಲಿ ಭಾಗಿಯಾಗುವುದಂತೆ, ಪ್ರಧಾನ್ ರಾಜೀನಾಮೆ ಕೇಳುವುದಂತೆ… ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಸಿ.ಟಿ.ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸರು ಇಂದು ಅವರ ಬಸವನಹಳ್ಳಿಯಲ್ಲಿರುವ ನಿವಾಸಕ್ಕೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ತೆರಳಿದ್ದರು. ಈ ವೇಳೆ ನೋಟಿಸ್ ಸ್ವೀಕರಿಸದ ಸಿ.ಟಿ.ರವಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರು ಸಿ.ಟಿ.ರವಿ ನಿವಾಸಕ್ಕೆ ನೋಟಿಸ್ ಅಂಟಿಸುತ್ತಿದ್ದಂತೆ ಸಿ.ಟಿ.ರವಿ ಬೆಂಬಲಿಗರು ನೋಟಿಸ್ ನ್ನು ಕಿತ್ತು ಬಿಸಾಕಿ ಪೊಲೀಸರ ವಿರುದ್ಧವೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಈ ಘಟನೆ ಬಳಿಕ ಸಿ.ಟಿ.ರವಿ ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿ ವೇಳೆ ನಾನು ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡಿಲ್ಲ. ನೀಟ್ ಓರಾಟದ ವೇಳೆ ವಾಹನಕ್ಕೆ ಬೆಂಕಿ ಹಚ್ಚಲು ಉದ್ರಿಕ್ತರು ಯತ್ನಿಸಿದ್ದರು. ಮುಲ್ಲಾ ಓರ್ವ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎಂದು ಹೇಳಿ ಬಿಹಾರದಲ್ಲಿ ವಾರದ ಹಿಂದೆ ನಡೆದಿದ್ದ ರಸ್ತೆ ಅಪಘಾತದ ವಿಡಿಯೋವೊಂದನ್ನು ತೋರಿಸಿ ನಾನು ಇದೇ ಮುಲ್ಲಾ ಬಗ್ಗೆ ಹೇಳಿದ್ದು. ಎದೆ ಸೀಳಿದರೆ ಮುಲ್ಲಾಗಳಿಗೆ ಮೂರಕ್ಷರ ಗೊತ್ತಿಲ್ಲ. ಇವರು ಬೆಂಕಿ ಹಚ್ಚಿವ ಕೆಲಸ ಮಾಡುತ್ತಿದ್ದಾರೆ. ನೀಟ್ ಹೋರಾಟದ ವೇಳೆ ಉದ್ರಿಕ್ತರಿಂದ ಬೆಂಕಿ ಹಚ್ಚುವ ಯತ್ನ ನಡೆದ್ದಿದೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀಟ್ ಹೋರಾಟದ ಘಟನೆ ಎಂದು ಬಿಹಾರದ ರಸ್ತೆ ಅಪಘಾತದ ವಿಡುಯೋ ತೋರಿಸಿ ಮಿಸ್ ಲೀಡ್ ಮಾಡುವ ಮೂಲಕ ಸಿ.ಟಿ,ರವಿ ನಗೆಪಾಟಲೀಗಾಡಾಗಿದ್ದಾರೆ. ಜನಪ್ರತಿನಿಧಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನೂ ಅರಿಯದೇ ತಮ್ಮದೇ ಹೇಳಿಕೆ ಸಮರ್ಥಿಸಿಕೊಳ್ಳುವ ಉದ್ದೇಶಕ್ಕೆ ಈ ರೀತಿ ವರ್ತಿಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular