HomeLatest Newsಹೋಟೆಲ್ ಶೈಲಿಯ ರುಚಿಕರ ಕುಷ್ಕಾ ಮನೆಯಲ್ಲೇ ಮಾಡಿ: ಇಲ್ಲಿದೆ ಸರಳ ವಿಧಾನ

ಹೋಟೆಲ್ ಶೈಲಿಯ ರುಚಿಕರ ಕುಷ್ಕಾ ಮನೆಯಲ್ಲೇ ಮಾಡಿ: ಇಲ್ಲಿದೆ ಸರಳ ವಿಧಾನ

ಹೋಟೆಲ್ ಶೈಲಿಯ ರುಚಿ ಹಾಗೂ ಪರಿಮಳವನ್ನು ಮನೆಯಲ್ಲಿಯೇ ಸವಿಯಲು ಬಯಸುವವರಿಗೆ ಕುಷ್ಕಾ ಅತ್ಯುತ್ತಮ ಆಯ್ಕೆಯಾಗಿದೆ. ಯಾವುದೇ ತರಕಾರಿ ಅಥವಾ ಮಾಂಸವನ್ನು ಬಳಸದೇ ಕೇವಲ ಮಸಾಲೆ ಪದಾರ್ಥಗಳೊಂದಿಗೆ ಮಾಡುವ ಈ ಖಾದ್ಯವು ಬ್ಯಾಚುಲರ್‌ಗಳಿಗೆ ಮತ್ತು ಕಡಿಮೆ ಸಮಯದಲ್ಲಿ ರುಚಿಕರ ಅಡುಗೆ ಮಾಡಲು ಬಯಸುವವರಿಗೆ ಹೇಳಿಮಾಡಿಸಿದಂತಿದೆ. ಕಡಿಮೆ ಖರ್ಚಿನಲ್ಲಿ ಅತ್ಯಂತ ಸುಲಭವಾಗಿ ಮನೆಯಲ್ಲಿ ಕುಷ್ಕಾ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಬಾಸುಮತಿ ಅಕ್ಕಿ ಅಥವಾ ಜೀರಗ ಸಾಂಬಾ ಅಕ್ಕಿ ಎರಡು ಕಪ್. ಈರುಳ್ಳಿ ಎರಡು, ಟೊಮೆಟೊ ಎರಡು, ಹಸಿಮೆಣಸಿನಕಾಯಿ ಮೂರು, ಶುಂಟಿ ಬೆಳ್ಳುಳ್ಳಿ ಪೇಸ್ಟ್ ಎರಡು ಚಮಚ, ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಅರ್ಧ ಕಪ್. ಮೊಸರು ನಾಲ್ಕು ಚಮಚ, ನಿಂಬೆ ಹಣ್ಣಿನ ರಸ ಒಂದು ಚಮಚ, ತುಪ್ಪ ಎರಡು ಚಮಚ, ಅಡುಗೆ ಎಣ್ಣೆ ಮೂರು ಚಮಚ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಸಾಲೆ ಪದಾರ್ಥಗಳಾಗಿ ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಮರಾಠಿ ಮೊಗ್ಗು, ಕಸ್ತೂರಿ ಮೇಥಿ. ಖಾರದ ಪುಡಿ ಒಂದು ಚಮಚ, ಧನಿಯಾ ಪುಡಿ ಒಂದು ಚಮಚ, ಗರಂ ಮಸಾಲೆ ಅರ್ಧ ಚಮಚ, ಬಿರಿಯಾನಿ ಮಸಾಲೆ ಒಂದು ಚಮಚ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ಹಂತಗಳು

ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಇಪ್ಪತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.

ಈಗ ಕುಕ್ಕರ್ ಅಥವಾ ಅಗಲವಾದ ಪಾತ್ರೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಮತ್ತು ತುಪ್ಪ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ ಸೇರಿದಂತೆ ಎಲ್ಲಾ ಒಣ ಮಸಾಲೆ ಪದಾರ್ಥಗಳನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ.

ನಂತರ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿಯಬೇಕು. ಈರುಳ್ಳಿ ಸರಿಯಾಗಿ ಹುರಿದಷ್ಟೂ ಕುಷ್ಕಾ ಬಣ್ಣ ಮತ್ತು ರುಚಿ ಉತ್ತಮವಾಗಿರುತ್ತದೆ.

ಬಿಕ ಬಳಿಕ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಒಮ್ಮೆ ಮಸಾಲೆ ಜೊತೆ ಬೆರೆಸಿ.

ಈಗ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ. ಟೊಮೆಟೊ ಬೆಂದ ನಂತರ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಬಿರಿಯಾನಿ ಮಸಾಲೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಮಸಾಲೆ ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಎಣ್ಣೆ ತೇಲುವವರೆಗೆ ಹುರಿಯಿರಿ.

ಈ ಹಂತದಲ್ಲಿ ಮೊಸರು ಸೇರಿಸಿ ಮಸಾಲೆಯೊಂದಿಗೆ ಸರಿಯಾಗಿ ಮಿಕ್ಸ್ ಮಾಡಿ. ನಂತರ ನೆನೆಸಿಟ್ಟ ಅಕ್ಕಿಯನ್ನು ನೀರು ಬಸೇರಿ ಕುಕ್ಕರ್‌ಗೆ ಹಾಕಿ ಮಸಾಲೆಯೊಂದಿಗೆ ಹಗುರವಾಗಿ ಕಲಸಿ. ಅಕ್ಕಿ ಮುರಿಯದಂತೆ ಜಾಗರೂಕತೆಯಿಂದ ಇರಲಿ.

ಎರಡು ಕಪ್ ಅಕ್ಕಿಗೆ ಮೂರೂವರೆ ಕಪ್ ನೀರು ಸೇರಿಸಿ, ನಿಂಬೆ ರಸ ಹಾಕಿ ಕುದಿ ಬರಲು ಬಿಡಿ. ನೀರು ಮತ್ತು ಅಕ್ಕಿ ಸಮಾನವಾಗಿ ಕುದಿಯಲು ಪ್ರಾರಂಭಿಸಿದಾಗ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಸಿಲ್ ಕೂಗಿಸಿ.

ಆವಿ ಪೂರ್ತಿಯಾಗಿ ಹೋದ ನಂತರ ಮುಚ್ಚಳ ತೆಗೆದು ಹಗುರವಾಗಿ ಮಸಾಲೆಯನ್ನು ಅಕ್ಕಿಯೊಂದಿಗೆ ಕಲಸಿದರೆ ಘಮಘಮಿಸುವ ರುಚಿಕರ ಕುಷ್ಕಾ ಸಿದ್ಧವಾಗುತ್ತದೆ. ಇದನ್ನು ರೈತಾ ಅಥವಾ ಸಾಗ್ನಾದೊಂದಿಗೆ ಸವಿಯಲು ನೀಡಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular