ಬೆಂಗಳೂರು: ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಬರೆದು, ಅರ್ಹರಾಗಿರುವ ಹಾಗೂ ಯುಜಿಸಿಇಟಿಗೆ ಇದುವರೆಗೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಜುಲೈ 30ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಜುಲೈ 24 ಕೊನೆ ದಿನ ಇತ್ತು. ಆದರೆ ಸಾರ್ವಜನಿಕರ ಕೋರಿಕೆ ಮೇರೆಗೆ ಮತ್ತೆ ದಿನಾಂಕ ವಿಸ್ತೀರ್ಣ ಮಾಡಲಾಗಿದೆ.
ನೀಟ್ ಫಲಿತಾಂಶದ ಮಾಹಿತಿ ಇನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಗೆ ಬಂದಿಲ್ಲ. ಅದು ಬಂದ ನಂತರ ನೀಟ್ ರೋಲ್ ನಂಬರ್ ಜೋಡಣೆಗೆ ಅವಕಾಶ ನೀಡಲಾಗುವುದು. ಅಲ್ಲಿಯವರೆಗೂ ಅಭ್ಯರ್ಥಿಗಳು/ಪೋಷಕರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ.
ನೀಟ್ ರೋಲ್ ನಂಬರ್ ದಾಖಲಿಸಿದ ನಂತರ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಮೇಲಿಂದ ಮೇಲೆ KEA ವೆಬ್ ಸೈಟ್ ನೋಡಲು ಕೋರಲಾಗಿದೆ.

