HomeLatest NewsWATCH VIDEO| ಕುಡಿದ ಮತ್ತಿನಲ್ಲಿ ಬಸ್ಸನ್ನೇ ಕದ್ದು ಪರಾರಿಯಾದ ವ್ಯಕ್ತಿ: ಮುಂದೆ ಆಗಿದ್ದೇನು?

WATCH VIDEO| ಕುಡಿದ ಮತ್ತಿನಲ್ಲಿ ಬಸ್ಸನ್ನೇ ಕದ್ದು ಪರಾರಿಯಾದ ವ್ಯಕ್ತಿ: ಮುಂದೆ ಆಗಿದ್ದೇನು?

ಹೈದರಾಬಾದ್: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತೆಲಂಗಾಣ ರಾಜ್ಯ ಸಾರಿಗೆ ಬಸ್ಸನ್ನೇ ಕದ್ದು ಚಲಾಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಆರೋಪಿಯನ್ನು ಹಿಡಿಯಲು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಸ್ ಚೇಸ್ ಮಾಡಿದ್ದಾರೆ.

ಜಂಗ್ತಿಯಾಲ್ ಜಿಲ್ಲೆಯ ಕೊರುಟ್ಲಾದಲ್ಲಿ ಈ ಘಟನೆ ನಡೆದಿದೆ. ಸಂಭಯ್ಯ ಎಂಬಾತ ಕಂಠಪೂರ್ತಿ ಕುಡಿದು ಕೊರುಟ್ಲಾ ಬಸ್ ಡಿಪೋದ ಫ್ಲಾಟ್ ಫಾರ್ಮ್ ನಂ.8 ರಿಂದ ಬಸ್ ಕದ್ದೊಯ್ದಿದ್ದಾನೆ. ಬಸ್ ಚಾಲಕ ಹಾಗೂ ಕಂಡಕ್ಟರ್ ಹತ್ತಿರದ ಶಾಲೆಯಿಂದ ವಿದ್ಯಾರ್ಥಿಗಳನ್ನು ಕರೆತರಲು ಹೋಗಿದ್ದ ವೇಳೆ ಆರೋಪಿ ಏಕಾಏಕಿ ಬಸ್ ಹತ್ತಿದವನೇ ಬಸ್ ನ್ನು ಹಿಮ್ಮುಖವಾಗಿ ತಿರುಗುಸಿಕೊಂಡು ವೇಗವಾಗಿ ಬಸ್ ಚಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಗಮನಿಸಿದ ಬಸ್ ಚಾಲಕ ತಕ್ಷಣವೇ ಪೊಲೀಸರು ಮತ್ತು ಡಿಪೋ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಏಳು ಪೊಲೀಸ್ ವಾಹನಗಳಲ್ಲಿ ಬಸ್ ನ್ನು 18 ಕಿ.ಮೀ. ದೂರ ಬೆನ್ನಟ್ಟಿದವು. ಈ ವೇಳೆ ಆರೋಪಿ 3-4 ಮೋಟಾರ್‌ಸೈಕಲ್‌ಗಳು, ಒಂದು ಪೊಲೀಸ್ ವಾಹನ ಮತ್ತು ಮೆಟ್‌ಪಲ್ಲಿಯಲ್ಲಿ ಒಂದು ಬಸ್ ಹತ್ತುತ್ತಿದ್ದ ಕೆಲವು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದ್ದಾನೆ.

ಅಲ್ಲದೇ ಕೆಲ ಪಾದಚಾರಿಗಳಿಗೂ ಬಸ್ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಪಕ್ಕದ ಮರಕ್ಕೆ ಬಸ್ ಗುದ್ದಿದೆ. ಈ ವೇಳೆ ಆರೋಪಿ ಬಸ್ ನಿಂದ ಹೊರಗೆ ಹಾರಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ಬಂಧಿಸಿದ್ದಾರೆ. ಅಪಘಾತದಲ್ಲಿ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular