HomeKarnatakaಕಾಂಗ್ರೆಸ್ ನವರನ್ನು ಸೋಲಿಸಲು ನನಗೆ 2 ಸೆಕೆಂಡ್ ಸಾಕು: ಸ್ವಪಕ್ಷದ ಮುಖಂಡರ ವಿರುದ್ಧವೇ ಗುಡುಗಿದ ಇಕ್ಬಾಲ್...

ಕಾಂಗ್ರೆಸ್ ನವರನ್ನು ಸೋಲಿಸಲು ನನಗೆ 2 ಸೆಕೆಂಡ್ ಸಾಕು: ಸ್ವಪಕ್ಷದ ಮುಖಂಡರ ವಿರುದ್ಧವೇ ಗುಡುಗಿದ ಇಕ್ಬಾಲ್ ಅನ್ಸಾರಿ

ಕೊಪ್ಪಳ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕೊಪ್ಪಳ ಜಿಲ್ಲೆಯ ಸ್ವಪಕ್ಷದ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಎರಡು ಸೋಲುಗಳಿಗೆ ಕೊಪ್ಪಳ, ಕನಕಗಿರಿ ಮತ್ತು ಯಲಬುರ್ಗಾ ಭಾಗದ ಸ್ಥಳೀಯ ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಇಕ್ಬಾಲ್ ಅನ್ಸಾರಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನಂಬಿ ತಾವು ಕಾಂಗ್ರೆಸ್ ಸೇರಿರುವುದಾಗಿ ಸ್ಪಷ್ಟಪಡಿಸಿದ ಅವರಿ, ಎರಡು ಬಾರಿ ಟಿಕೆಟ್ ನೀಡಿದರೂ, ಸ್ಥಳೀಯ ನಾಯಕರು ತಮ್ಮನ್ನು ಸೋಲಿಸಲು ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಗೆ ಅವರನ್ನು ಸೋಲಿಸುವುದು ಕೇವಲ ಎರಡು ಸೆಕೆಂಡ್‌ಗಳ ಕೆಲಸ. ಶುಕ್ರವಾರದ ವೇಳೆ ಮಸೀದಿಗೆ ಒಂದು ಪತ್ರ ಬರೆದು ಮನವಿ ಮಾಡಿದರೆ ಸಾಕು ಕಾಂಗ್ರೆಸ್ಸನ್ನು ಸೋಲಿಸಬಹುದು. ಆದರೆ ತಾನು ದೈವ ಭಕ್ತನಾಗಿರುವುದರಿಂದ ಮೋಸ ಮಾಡಲು ಇಚ್ಛಿಸುವುದಿಲ್ಲ ಎಂದಿದ್ದಾರೆ.

ತಾವು ಜೆಡಿಎಸ್ ಅಥವಾ ಬಿಜೆಪಿ ಸೇರುವ ವದಂತಿಗಳು ಹರಡುತ್ತಿದ್ದು, ಇದು ಗಾಳಿಸುದ್ದಿ ಎಂದು ಅವರು ಹೇಳಿದರು. ತಾವು ಈಗಲೂ ಕಾಂಗ್ರೆಸ್‌ನಲ್ಲಿಯೇ ಇದ್ದು, ಸತ್ಯಾಸತ್ಯತೆಯನ್ನು ಜನರು ತಿಳಿದುಕೊಳ್ಳಬೇಕು ಎಂದು ಅನ್ಸಾರಿ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular