HomeKarnatakaಕಾಕ್ರೋಚ್‌ ಜನತಾ ಪಾರ್ಟಿ ದೇಶದ್ರೋಹಿ ಸಂಘಟನೆ; ಅಭಿಜಿತ್‌ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜೊತೆಗೆ ಸಂಪರ್ಕ ಹೊಂದಿದ್ದಾನೆ:...

ಕಾಕ್ರೋಚ್‌ ಜನತಾ ಪಾರ್ಟಿ ದೇಶದ್ರೋಹಿ ಸಂಘಟನೆ; ಅಭಿಜಿತ್‌ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜೊತೆಗೆ ಸಂಪರ್ಕ ಹೊಂದಿದ್ದಾನೆ: ಆರ್.ಅಶೋಕ್ ಆರೋಪ

ಬೆಂಗಳೂರು: ಕಾಕ್ರೋಚ್‌ ಜನತಾ ಪಾರ್ಟಿ (CJP) ದೇಶದ್ರೋಹಿ ಸಂಘಟನೆ, ಅದರ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜೊತೆಗೆ ಸಂಪರ್ಕ ಹೊಂದಿದ್ದಾನೆ. ಅಂತವರ ಜೊತೆಗೆ ಈಗ ರಾಹುಲ್‌ ಗಾಂಧಿ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, ಮನೆ ಬಾಗಿಲಿಗೆ ಆತ್ಮಹತ್ಯೆ ತಂದ ಸರ್ಕಾರ ಇದು. ರಾಹುಲ್ ಗಾಂಧಿ ಜಿರಳೆ ಪ್ರತಿಭಟನೆ ಅಂತಾರೆ. ʻಸಿಜೆಪಿʼ ಅದೊಂದು ದೇಶ ದ್ರೋಹ ಸಂಘಟನೆ, ರಾಹುಲ್ ಗಾಂಧಿ ಅಂತಹ ಪಕ್ಷದ ಜೊತೆ ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ರಾಜ್ಯದ ಸಮಸ್ಯೆ ಬಗ್ಗೆ ಕೇಳಲಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಕೃಷಿ ಸಚಿವರು ಇಲ್ಲ, ತೋಟಗಾರಿಕೆ ಸಚಿವರು ಇಲ್ಲ. ಸಮೀಕ್ಷೆ ಮಾಡೋರು ಯಾರು? ಅಧಿಕಾರಿಗಳನ್ನ ನಂಬೋಕೆ ಆಗುತ್ತಾ? ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕು ಅಂತಾರೆ. ಯಾವ ಮನೆಹಾಳ ಈ ಐಡಿಯಾ ಕೊಟ್ಟ ಗೊತ್ತಿಲ್ಲ. ರಾಜ್ಯ ಸರ್ಕಾರವೇ ಇನ್ನು ವಿಪತ್ತು ಅಂತ ಘೋಷಣೆ ಮಾಡಿಲ್ಲ. ಕೇಂದ್ರ ಹೇಗೆ ಮಾಡುತ್ತದೆ? ರೋಮ್ ಹೊತ್ತಿ ಉರಿದರೆ ಯಾರೋ ಪಿಟೀಲು ಬಾರಿಸುತ್ತಿದ್ದನಂತೆ, ಅದೇ ರೀತಿ ಸಿಎಂ ದೆಹಲಿಯಲ್ಲಿ ಕೂತಿದ್ದಾರೆ. ಎಲ್ಲರಿಗೂ ಈಗ ದೆಹಲಿ ಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಿಯಾಂಕ್ ಖರ್ಗೆ ಮಾತೆತ್ತಿದರೆ ಆರ್‌ಎಸ್‌ಎಸ್‌ ಲೆಕ್ಕ ಕೊಡಿ ಅಂತಾರೆ, ಕಲಬುರಗಿಯಿಂದ ಗುಳೆ ಹೋಗ್ತಾ ಇದ್ದಾರೆ. ಅದರ ಲೆಕ್ಕ ಕೊಡಪ್ಪ ನೀನು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಜನರು ಗುಳೆ ಹೋಗ್ತಾ ಇದ್ದಾರೆ. ತಾಂಡಾಗಳು ಖಾಲಿ ಆಗ್ತಾ ಇವೆ, ಅದರ ಲೆಕ್ಕ ಮೊದಲು ಕೊಡಿ ಎಂದು ಆಗ್ರಹಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular