HomeLatest Newsದಿನವಿಡೀ ಮೊಬೈಲ್ ಸ್ಕ್ರಾಲ್, ಟೈಪಿಂಗ್ ಮಾಡ್ತೀರಾ? ಬೆರಳುಗಳು ಲಾಕ್ ಆಗುವ ಟೆಕ್ಸ್ಟ್ ಕ್ಲಾ ಕಾಯಿಲೆ ಬಗ್ಗೆ...

ದಿನವಿಡೀ ಮೊಬೈಲ್ ಸ್ಕ್ರಾಲ್, ಟೈಪಿಂಗ್ ಮಾಡ್ತೀರಾ? ಬೆರಳುಗಳು ಲಾಕ್ ಆಗುವ ಟೆಕ್ಸ್ಟ್ ಕ್ಲಾ ಕಾಯಿಲೆ ಬಗ್ಗೆ ತಜ್ಞರ ಎಚ್ಚರಿಕೆ

ಬೆಂಗಳೂರು: ಇವತ್ತಿನ ದಿನದಲ್ಲಿ ಕೆಲಸ, ಬ್ಯಾಂಕಿಂಗ್, ಶಾಪಿಂಗ್, ಮನೋರಂಜನೆ, ಶಿಕ್ಷಣದಿಂದ ಹಿಡಿದು ಸೋಶಿಯಲೈಸಿಂಗ್‌ವರೆಗೆ ಪ್ರತಿಯೊಂದೂ ಡಿಜಿಟಲ್ ಆಗಿದೆ ಇದರರ್ಥ ನಮ್ಮ ಕೈಬೆರಳುಗಳಿಗೆ ಕೊಂಚವೂ ರೆಸ್ಟ್ ಸಿಗುತ್ತಿಲ್ಲ. ಬೆಳಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಮಲಗುವವರೆಗೆ ನಮ್ಮ ಬೆರಳುಗಳು ಸದಾ ಮೊಬೈಲ್ ಸ್ಕ್ರೀನ್ ಮೇಲೆ ಟ್ಯಾಪಿಂಗ್, ಸ್ಕ್ರಾಲಿಂಗ್, ಟೈಪಿಂಗ್ ಅಥವಾ ಕ್ಲಿಕ್ಕಿಂಗ್ ಮಾಡ್ತಾನೇ ಇರುತ್ತವೆ.

ಸ್ಕ್ರೀನ್ ಮೇಲೆ ಕಣ್ಣಿಟ್ಟು ನಾವು ಮಜಾ ಮಾಡ್ತಿರುವಾಗ, ನಮ್ಮ ಕೈಗಳು, ಹೆಬ್ಬೆರಳು ಹಾಗೂ ಮಣಿಕಟ್ಟುಗಳು ಮೂಕವಾಗಿ ಭಾರಿ ಒತ್ತಡವನ್ನು ಅನುಭವಿಸುತ್ತಿರುತ್ತವೆ. ದಿನನಿತ್ಯದ ಈ ಚಟುವಟಿಕೆಯಿಂದ ಬರುವ ನೋವು ಆರಂಭದಲ್ಲಿ ನಾರ್ಮಲ್ ಅನಿಸಿದರೂ, ದಿನಕಳೆದಂತೆ ಇದು ಗಂಭೀರ ಲಕ್ಷಣವಾಗಿ ಕಾಡಬಹುದು. ಈ ಸ್ಥಿತಿಯನ್ನೇ ವೈದ್ಯಕೀಯ ಲೋಕದಲ್ಲಿ ಟೆಕ್ಸ್ಟ್ ಕ್ಲಾ ಎಂದು ಕರೆಯಲಾಗುತ್ತಿದೆ

ಹೈದರಾಬಾದ್‌ನ ಯಶೋದಾ ಹಾಸ್ಪಿಟಲ್ಸ್‌ನ ರೋಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಹಾಗೂ ಹಿರಿಯ ಮೂಳೆ ಶಸ್ತ್ರಚಿಕಿತ್ಸಕ ಡಾ. ಸುನಿಲ್ ದಾಚೇಪಲ್ಲಿ ಅವರ ಪ್ರಕಾರ, ಟೆಕ್ಸ್ಟ್ ಕ್ಲಾ ಎಂಬುದು ಯಾವುದೇ ಅಧಿಕೃತ ವೈದ್ಯಕೀಯ ರೋಗನಿರ್ಣಯದ ಹೆಸರಲ್ಲ. ಬದಲಿಗೆ, ಅತಿಯಾದ ಡಿವೈಸ್ ಬಳಕೆಯಿಂದ ಕೈಬೆರಳು, ಸ್ನಾಯುಗಳು, ಕೀಲುಗಳು ಹಾಗೂ ನರಗಳಿಗೆ ಉಂಟಾಗುವ ಗಾಯ ಅಥವಾ ತೊಂದರೆಗಳ ಗುಂಪಿಗೆ ನೀಡಲಾಗಿರುವ ಹೆಸರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಟೆಗಟ್ಟಲೆ ಸ್ಕ್ರಾಲಿಂಗ್ ಮಾಡಲು ಮನುಷ್ಯನ ಕೈಗಳು ಸೃಷ್ಟಿಯಾಗಿಲ್ಲ

ನಮಗೆ ಫೋನಿನಲ್ಲಿ ಟೈಪ್ ಮಾಡುವುದು, ಸ್ವೈಪ್ ಮಾಡುವುದು ತುಂಬಾ ಈಸಿ ಹಾಗೂ ನಿರಾಳ ಅನಿಸಬಹುದು. ಪ್ರತಿ ಮೂವ್‌ಮೆಂಟ್ ಚಿಕ್ಕದಾಗಿ ಕಂಡರೂ, ದಿನವೊಂದಕ್ಕೆ ನಾವು ಇದನ್ನು ಸಾವಿರಾರು ಬಾರಿ ರಿಪೀಟ್ ಮಾಡ್ತೀವಿ ಡಾ. ದಾಚೇಪಲ್ಲಿ ಅವರ ಪ್ರಕಾರ, ಮನುಷ್ಯನ ಕೈಗಳು ಈ ರೀತಿಯ ನಿರಂತರ ಹಾಗೂ ಒಂದೇ ಸಮನಾದ ಮೂವ್‌ಮೆಂಟ್‌ಗಳನ್ನು ಮಾಡಲು ಸೃಷ್ಟಿಯಾಗಿಲ್ಲ.ನಿಮ್ಮ ಕೈಗಳಲ್ಲಿ ಸಮಸ್ಯೆ ಶುರುವಾಗ್ತಿದೆ ಅನ್ನೋದನ್ನ ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದಿದ್ದರೆ ಮುಂದೆ ಭಾರಿ ಕಾಂಪ್ಲಿಕೇಶನ್ಸ್ ಎದುರಾಗಬಹುದು.

ಟೆಕ್ಸ್ಟ್ ಕ್ಲಾ ಸಮಸ್ಯೆಯ ಆ 7 ಪ್ರಮುಖ ಲಕ್ಷಣಗಳು ಇಲ್ಲಿವೆ:

ಹೆಬ್ಬೆರಳಿನಲ್ಲಿ ತೀವ್ರ ನೋವು ಅಥವಾ ಬಿಗಿತ .

ಮಣಿಕಟ್ಟಿನಲ್ಲಿ (Wrist) ಅಸ್ವಸ್ಥತೆ ಮತ್ತು ಕಿರಿಕಿರಿ.

ಕೈಬೆರಳುಗಳು ಜುಮ್ಮೆನಿಸುವುದು ಅಥವಾ ಮರಗಟ್ಟುವುದು

ಗಂಟೆಗಟ್ಟಲೆ ಫೋನ್ ಬಳಸಿದ ನಂತರ ಕೈ ಸ್ನಾಯುಗಳು ಸೆಳೆತಕ್ಕೆ ಒಳಗಾಗುವುದು

ಕೈಗಳಲ್ಲಿ ಹಿಡಿತ ಅಥವಾ ಗ್ರಿಪ್ ಸಾಮರ್ಥ್ಯ ಕಮ್ಮಿ ಆಗುವುದು

ಬೆರಳುಗಳನ್ನು ಮಡಚುವಾಗ ಶಬ್ದ ಬರುವುದು ಅಥವಾ ಲಾಕ್ ಆಗುವುದು

ರಾತ್ರಿ ಹೊತ್ತಿನಲ್ಲಿ ಈ ನೋವು ಮತ್ತಷ್ಟು ಉಲ್ಬಣಗೊಳ್ಳುವುದು.

ಈ ಲಕ್ಷಣಗಳು ಸತತ ಹಲವು ವಾರಗಳ ಕಾಲ ಮುಂದುವರಿದು, ರೆಸ್ಟ್ ತಗೊಂಡ್ರೂ ಕಮ್ಮಿ ಆಗದಿದ್ದರೆ ತಕ್ಷಣವೇ ಮೂಳೆ ವೈದ್ಯರನ್ನು ಕಾಣುವುದು ಕಡ್ಡಾಯ

ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಏನಾಗುತ್ತೆ?

ನಮ್ಮ ಜನರಿಗೆ ನೋವು ದಿನನಿತ್ಯದ ಕೆಲಸಕ್ಕೆ ಅಡ್ಡಿಪಡಿಸುವವರೆಗೆ ವೈದ್ಯರ ಹತ್ತಿರ ಹೋಗೋ ಅಭ್ಯಾಸ ಇಲ್ಲ ಬಾಸ್! ಪೇನ್ ಕಿಲ್ಲರ್ ಬಾಮ್ ಹಚ್ಚಿಕೊಂಡು ತಾತ್ಕಾಲಿಕ ರಿಲೀಫ್ ಹುಡುಕುತ್ತಾರೆ. ಆದರೆ ಈ ತಪ್ಪು ಮಾಡಬೇಡಿ ಅಂತಾರೆ ಡಾಕ್ಟರ್. ಯಾಕಂದ್ರೆ ಆರಂಭದಲ್ಲಿ ಸಣ್ಣದಾಗಿ ಕಾಣುವ ಈ ಇನ್ಫ್ಲಮೇಷನ್ (ಊತ), ದಿನಕಳೆದಂತೆ ಟೆಂಡೈನಿಟಿಸ್, ಕಾರ್ಪಲ್ ಟನಲ್ ಸಿಂಡ್ರೋಮ್ ಕ್ಯುಬಿಟಲ್ ಟನಲ್ ಸಿಂಡ್ರೋಮ್ ಹಾಗೂ ದೀರ್ಘಕಾಲದ ನರಗಳ ಸಂಕೋಚನದ ನಂತಹ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು

ಟೆಕ್ಸ್ಟ್ ಕ್ಲಾ ಬರದಂತೆ ತಡೆಯುವುದು ಹೇಗೆ?

ಡಾ. ಸುನಿಲ್ ದಾಚೇಪಲ್ಲಿ ಅವರು ಕೈಗಳ ಸುರಕ್ಷತೆಗಾಗಿ ಈ ಕೆಳಗಿನ ಸೂಪರ್ ಟಿಪ್ಸ್‌ಗಳನ್ನು ಶೇರ್ ಮಾಡಿದ್ದಾರೆ:

ನಿಯಮಿತ ಬ್ರೇಕ್ ತಗೊಳ್ಳಿ: ಸತತವಾಗಿ ಫೋನ್ ಬಳಸಬೇಡಿ. ಪ್ರತಿ 30 ರಿಂದ 45 ನಿಮಿಷಕ್ಕೊಮ್ಮೆ ಮೊಬೈಲ್ ಪಕ್ಕಕ್ಕಿಟ್ಟು ಬೆರಳುಗಳಿಗೆ ರೆಸ್ಟ್ ಕೊಡಿ.

ಸ್ಟ್ರೆಚಿಂಗ್ ಮಾಡಿ: ಬೆರಳುಗಳು ಹಾಗೂ ಮಣಿಕಟ್ಟನ್ನು ಲಘುವಾಗಿ ಸ್ಟ್ರೆಚ್ ಮಾಡುವುದರಿಂದ ಸ್ನಾಯುಗಳ ಬಿಗಿತ ಕಮ್ಮಿ ಆಗುತ್ತದೆ.

ಫೋನ್ ಗಟ್ಟಿಯಾಗಿ ಹಿಡಿಯಬೇಡಿ: ಚಾಟಿಂಗ್ ಅಥವಾ ವಿಡಿಯೋ ನೋಡುವಾಗ ಫೋನ್ ಅನ್ನು ಅತಿಯಾಗಿ ಸ್ಕ್ವೀಜ್ (ಗಟ್ಟಿಯಾಗಿ ಪ್ರೆಸ್) ಮಾಡಬೇಡಿ.

ರಿಸ್ಟ್ ಪೋಸ್ಚರ್ ನೆಟ್ಟಗಿರಲಿ: ಲ್ಯಾಪ್‌ಟಾಪ್ ಅಥವಾ ಫೋನ್ ಬಳಸುವಾಗ ಮಣಿಕಟ್ಟನ್ನು ಅತಿಯಾಗಿ ಬಗ್ಗಿಸಬೇಡಿ (Neutral Position ನಲ್ಲಿರಲಿ).

ವಾಯ್ಸ್-ಟು-ಟೆಕ್ಸ್ಟ್ ಬಳಸಿ: ಟೈಪ್ ಮಾಡುವ ಬದಲು ಗೂಗಲ್ ವಾಯ್ಸ್ ಟೈಪಿಂಗ್ ಫೀಚರ್ ಬಳಸಿದರೆ ಹೆಬ್ಬೆರಳಿನ ಕೆಲಸ ಅರ್ಧ ಕಮ್ಮಿ ಆಗುತ್ತೆ ಬಾಸ್!

ದೊಡ್ಡ ಕೀಬೋರ್ಡ್ ಬಳಸಿ: ಸಣ್ಣ ಸ್ಕ್ರೀನ್ ಬದಲು ಕೊಂಚ ದೊಡ್ಡ ಕೀಬೋರ್ಡ್ ಬಳಸುವುದರಿಂದ ಟೈಪಿಂಗ್ ಸುಲಭವಾಗುತ್ತದೆ.

ಹ್ಯಾಂಡ್ಸ್-ಫ್ರೀ ಗ್ಯಾಜೆಟ್ಸ್ ಬಳಸಿ: ಮೊಬೈಲ್ ಹೋಲ್ಡರ್ ಸ್ಟ್ಯಾಂಡ್‌ಗಳು, ಇಯರ್‌ಫೋನ್‌ಗಳನ್ನು ಬಳಸುವ ಮೂಲಕ ಫೋನ್ ಅನ್ನು ಸದಾ ಕೈಯಲ್ಲಿ ಹಿಡಿಯುವುದನ್ನು ತಪ್ಪಿಸಿ.

ವರ್ಕ್‌ಸ್ಟೇಷನ್ ಸರಿಯಾಗಿರಲಿ: ನಿಮ್ಮ ಕಚೇರಿಯ ಕುರ್ಚಿ ಹಾಗೂ ಟೇಬಲ್ ನಿಮ್ಮ ಮುಂಗೈ ಹಾಗೂ ಮಣಿಕಟ್ಟಿಗೆ ಸರಿಯಾದ ಸಪೋರ್ಟ್ ನೀಡುವಂತಿರಲಿ.

ಆಕ್ಟಿವ್ ಆಗಿರಿ: ದಿನನಿತ್ಯ ರೆಗ್ಯುಲರ್ ಎಕ್ಸಸೈಸ್ ಮಾಡುವುದರಿಂದ ಹೆಗಲು, ತೋಳು ಹಾಗೂ ಮುಂಗೈ ಸ್ನಾಯುಗಳು ಬಲಗೊಳ್ಳುತ್ತವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular