HomeLatest Newsಬುಕಿಂಗ್ ಮಾಡಿದ 10 ನಿಮಿಷದಲ್ಲೇ ಗ್ಯಾಸ್ ಸಿಲಿಂಡರ್ ಡೆಲಿವರಿ..! LPG ಕನೆಕ್ಷನ್ ಇಲ್ಲದವರಿಗೂ ಹೊಸ ಸೌಲಭ್ಯ

ಬುಕಿಂಗ್ ಮಾಡಿದ 10 ನಿಮಿಷದಲ್ಲೇ ಗ್ಯಾಸ್ ಸಿಲಿಂಡರ್ ಡೆಲಿವರಿ..! LPG ಕನೆಕ್ಷನ್ ಇಲ್ಲದವರಿಗೂ ಹೊಸ ಸೌಲಭ್ಯ

ಇನ್ನು ಮುಂದೆ ಗ್ಯಾಸ್ ಸಿಲಿಂಡರ್ ಡೆಲಿವರಿಗಾಗಿ ಮೂರು ದಿನ ಕಾಯಬೇಕಾದ ಅಗತ್ಯವಿಲ್ಲ. ಕೇವಲ 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಸಿಲಿಂಡರ್ ತಲುಪಲಿದೆ. ಕ್ವಿಕ್ ಕಾಮರ್ಸ್ ಆ್ಯಪ್ ಮೂಲಕ ಯಾವಾಗ ಬೇಕಾದರೂ ಬುಕ್ ಮಾಡಿದರೆ ತಕ್ಷಣವೇ ಡೋರ್ ಡೆಲಿವರಿ ಸಿಗಲಿದೆ.

ಪ್ರತಿ ಮನೆಯಲ್ಲೂ ಅತ್ಯಂತ ಅಗತ್ಯವಾಗಿರುವ ವಸ್ತುಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪ್ರಮುಖವಾಗಿದೆ. ಗ್ಯಾಸ್ ಖಾಲಿಯಾದರೆ ಅಡುಗೆ ಕೆಲಸಗಳಿಗೆ ತೊಂದರೆ ಉಂಟಾಗುತ್ತದೆ. ಅದರಲ್ಲೂ ದೊಡ್ಡ ಕುಟುಂಬಗಳಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಪ್ರಸ್ತುತ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಬಳಿಕ ಮನೆಗೆ ತಲುಪಲು ಎರಡು-ಮೂರು ದಿನಗಳ ಕಾಲ ಕಾಯಬೇಕಾಗುತ್ತದೆ. ಆದರೆ ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ. ಬುಕ್ ಮಾಡಿದ ಕೇವಲ 10 ನಿಮಿಷಗಳಲ್ಲೇ ಸಿಲಿಂಡರ್ ಮನೆಗೆ ತಲುಪಲಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಎಲ್‌ಪಿಜಿ ಸಂಪರ್ಕ ಪಡೆಯುವ ಅಗತ್ಯವೂ ಇರುವುದಿಲ್ಲ. ಸಿಲಿಂಡರ್ ಬಂದ ಬಳಿಕ ಗುರುತಿನ ಚೀಟಿ ಅಥವಾ ಒಟಿಪಿ ನೀಡಿದರೆ ಸಾಕು.

10 ನಿಮಿಷಗಳಲ್ಲಿ ಗ್ಯಾಸ್ ಸಿಲಿಂಡರ್ ಡೆಲಿವರಿ

ಪ್ರಸ್ತುತ ಮೆಟ್ರೋ ನಗರಗಳಲ್ಲಿ ಕ್ವಿಕ್ ಕಾಮರ್ಸ್ ಆ್ಯಪ್‌ಗಳ ಬಳಕೆ ಹೆಚ್ಚಾಗಿದೆ. ಕೇವಲ 10 ನಿಮಿಷಗಳಲ್ಲಿ ವಿವಿಧ ವಸ್ತುಗಳನ್ನು ಮನೆಗೆ ತಲುಪಿಸುತ್ತಿವೆ. ಇದೇ ರೀತಿಯಲ್ಲಿ ಇದೀಗ ಗ್ಯಾಸ್ ಸಿಲಿಂಡರ್‌ಗಳನ್ನೂ ಬುಕ್ ಮಾಡುವ ಅವಕಾಶ ದೊರೆಯಲಿದೆ.ಈ ಸೇವೆಗಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಸಹಭಾಗಿತ್ವ ಮಾಡಿಕೊಂಡಿವೆ. ಇದರ ಭಾಗವಾಗಿ HP ನವ್ಯ ಸಿಲಿಂಡರ್ ಅನ್ನು ಇನ್‌ಸ್ಟಾಮಾರ್ಟ್ ಮೂಲಕ ಡೆಲಿವರಿ ಮಾಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಪ್ಯಾಕ್ಟ್ ಮತ್ತು ಆಧುನಿಕ ವಿನ್ಯಾಸ ಹೊಂದಿರುವ ಈ ಸಿಲಿಂಡರ್ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿರಲಿದೆ. ಇನ್‌ಸ್ಟಾಮಾರ್ಟ್‌ನಲ್ಲಿ ಆರ್ಡರ್ ಮಾಡಿದ ತಕ್ಷಣ ಮನೆಗೆ ಡೆಲಿವರಿ ಸಿಗಲಿದೆ.ಗ್ರಾಹಕರು 5 ಕೆಜಿ ಅಥವಾ 10 ಕೆಜಿ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಸಣ್ಣ ಕುಟುಂಬಗಳು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ವಲಸೆ ಕಾರ್ಮಿಕರಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ.ಸದ್ಯ ಈ ಸೇವೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಶೀಘ್ರದಲ್ಲೇ ದೇಶದಾದ್ಯಂತ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು HPCL ಮೂಲಕ ವಿಸ್ತರಿಸುವ ಯೋಜನೆ ಇದೆ. ಈ ಸಿಲಿಂಡರ್ ಪಡೆಯಲು ಯಾವುದೇ ಎಲ್‌ಪಿಜಿ ಸಂಪರ್ಕದ ಅವಶ್ಯಕತೆ ಇರುವುದಿಲ್ಲ.

ಸಿಲಿಂಡರ್ ಅನ್ನು ಹೇಗೆ ಬುಕ್ ಮಾಡುವುದು?

  • ಮೊದಲು ಇನ್‌ಸ್ಟಾಮಾರ್ಟ್ ಆ್ಯಪ್ ತೆರೆಯಬೇಕು.
  • 10 ಕೆಜಿ ಕಾಂಪೋಸಿಟ್ ಎಲ್‌ಪಿಜಿ ಸಿಲಿಂಡರ್ ಅಥವಾ 5 ಕೆಜಿ ಮೆಟಲ್ ಸಿಲಿಂಡರ್ ಆಯ್ಕೆ ಮಾಡಬೇಕು.
  • ಕಾರ್ಟ್‌ಗೆ ಸೇರಿಸಿ ಪಾವತಿ ಮಾಡಬೇಕು.
  • ಕ್ಯಾಶ್ ಆನ್ ಡೆಲಿವರಿ ಸೌಲಭ್ಯವೂ ಲಭ್ಯವಿದೆ.

ಸಿಲಿಂಡರ್ ಮನೆಗೆ ಬಂದ ನಂತರ ಡೆಲಿವರಿ ದೃಢೀಕರಣ ದಾಖಲೆಗಳ ಜೊತೆಗೆ ಗುರುತಿನ ಚೀಟಿಯನ್ನು ನೀಡಬೇಕು. ಒಮ್ಮೆ ದಾಖಲೆ ಸಲ್ಲಿಸಿದ ಬಳಿಕ ಮುಂದಿನ ರೀಫಿಲ್‌ಗಳಿಗೆ ಮತ್ತೆ ಅಗತ್ಯವಿರುವುದಿಲ್ಲ. ಡೆಲಿವರಿ ದೃಢೀಕರಣಕ್ಕಾಗಿ ಒಟಿಪಿ ನೀಡಿದರೆ ಸಾಕು. ಪ್ರಸ್ತುತ ದೇಶೀಯ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಡೆಲಿವರಿಗೂ ಒಟಿಪಿ ವ್ಯವಸ್ಥೆ ಇದ್ದು, ಇದೇ ವಿಧಾನವನ್ನು ಈ ಸಿಲಿಂಡರ್‌ಗಳಿಗೂ ಅನುಸರಿಸಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular