ಶಿವಮೊಗ್ಗ: ಪತ್ರಕರ್ತ ತೀರ್ಥಹಳ್ಳಿಯ ಪ್ರಗತ್ ಕೆ.ಆರ್. ಮತ್ತು ರಂಜನಾ ದಂಪತಿಗಳ ಪುತ್ರ ಋಷ್ಯ ಪಿ.(7) ಇಂದು ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಬಾಲಕ ಋಷ್ಯ ಗುಂಡುಗದ್ದೆಯ ಮನೆಯ ಸಮೀಪ ರಸ್ತೆ ದಾಟುವಾಗ ಕ್ಯಾಂಟರ್ ವಾಹನ ಅಡ್ಡಲಾಗಿದ್ದುದ್ದರಿಂದ ಆ ಹೊತ್ತಿಗೆ ಸರಿಯಾಗಿ ಬಂದ ಕಾರ್ ಗಮನಿಸದೆ ಅದರಡಿ ಸಿಲುಕಿ ತೀವ್ರವಾಗಿ ಗಾಯಗೊಂಡು ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದ ಎನ್ನಲಾಗಿದೆ.
ಋಷ್ಯ ದಂಪತಿಗಳ ಒಬ್ಬನೇ ಮುದ್ದಿನ ಮಗನಾಗಿದ್ದು, ಕೊಣಂದೂರಿನ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಬಂಧು, ಬಳಗದವರಲ್ಲಿ ಶೋಕ ಮಡುಗಟ್ಟಿದೆ.

