ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗ್ರಾಮದ ಬಳಿ ತಂದೆಯನ್ನೇ ಪಾಪಿ ಪುತ್ರ ಕೊಲೆ ಮಾಡಿದ್ದಾನೆ. 65 ವರ್ಷದ ಚಂದ್ರಣ್ಣ ಕೊಲೆಯಾದವರು. ಪುತ್ರ ಪ್ರಸನ್ನ ತಂದೆಯನ್ನೇ ಕೊಲೆಗೈದ ಆರೋಪಿಯಾಗಿದ್ದಾನೆ.
ಕೆಲವು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪ್ರಸನ್ನ ಮದುವೆಯಾದ ನಂತರ ಮನೆಯನ್ನು ತೊರೆದಿದ್ದ. ಅಪ್ಪನ ಹೆಸರಲ್ಲಿದ್ದ 5 ಎಕರೆ ಜಮೀನಿಗಾಗಿ ಗಲಾಟೆ ಮಾಡುತ್ತಿದ್ದ. ಚಿಕ್ಕಪ್ಪ ಅಜ್ಜಪ್ಪನ ಮಾತು ಕೇಳಿ ತಂದೆಯ ಜೊತೆಗೆ ಆಸ್ತಿಗಾಗಿ ಗಲಾಟೆ ಮಾಡಿದ್ದ.
ಗಲಾಟೆಯ ವೇಳೆ ಕೋಲಿನಿಂದ ಹೊಡೆದು ತಂದೆಯನ್ನು ಹತ್ಯೆ ಮಾಡಿದ್ದಾನೆ. ಕೊಲೆಗೆ ಚಂದ್ರಣ್ಣನ ಸಹೋದರ ಅಜ್ಜಪ್ಪ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದೆ. ಚಂದ್ರಣ್ಣನ ಪತ್ನಿ ಮತ್ತು ಕುಟುಂಬಸ್ಥರು ಹೀಗೆಂದು ಆರೋಪ ಮಾಡಿದ್ದಾರೆ. ಜಮೀನು ಕಬಳಿಸಿಕೊಳ್ಳಲು ಕುತಂತ್ರ ನಡೆಸಿದ ಆರೋಪ ಕೇಳಿ ಬಂದಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

