HomeLatest Newsರೈಲಿನಲ್ಲಿ 'ಲೈಂಗಿಕ ಕಿರುಕುಳ' ನೀಡಿದ ಯುವಕನಿಗೆ ಲಿಪ್‌ಸ್ಟಿಕ್ ಹಚ್ಚಿ, ಬಳೆ ತೊಡಿಸಿದ ಯುವತಿ ; ವೀಡಿಯೋ...

ರೈಲಿನಲ್ಲಿ ‘ಲೈಂಗಿಕ ಕಿರುಕುಳ’ ನೀಡಿದ ಯುವಕನಿಗೆ ಲಿಪ್‌ಸ್ಟಿಕ್ ಹಚ್ಚಿ, ಬಳೆ ತೊಡಿಸಿದ ಯುವತಿ ; ವೀಡಿಯೋ ವೈರಲ್ | WATCH VIDEO

ರೈಲಿನಲ್ಲಿ ಲೈಂಗಿಕ ಕಿರುಕುಳ’ ಕಿರುಕುಳ ನೀಡಿದ ಯುವಕನಿಗೆ ಯುವತಿಯೊಬ್ಬರು ವಿಭಿನ್ನ ರೀತಿಯಲ್ಲಿ ಪಾಠ ಕಲಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆತನ ಮುಖಕ್ಕೆ ಲಿಪ್‌ಸ್ಟಿಕ್ ಹಾಗೂ ಮೇಕಪ್ ಹಚ್ಚಿ, ಕೈಗಳಿಗೆ ಗಾಜು ಬಳೆಗಳನ್ನು ತೊಡಿಸಿ ಸಾರ್ವಜನಿಕರ ಎದುರೇ ಅವಮಾನಪಡಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬದ್ನೇರಾ–ಅಕೋಲಾ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಸಾಮಾನ್ಯವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಕಿರುಕುಳಕ್ಕೆ ಒಳಗಾದ ಅನೇಕ ಮಹಿಳೆಯರು ಮೌನವಾಗಿರುವ ಸಂದರ್ಭಗಳು ಕಂಡುಬರುತ್ತವೆ. ಆದರೆ ಈ ಯುವತಿ ಮಾತ್ರ ಧೈರ್ಯದಿಂದ ಎದುರಿಸಿ, ತನ್ನನ್ನು ಕಿರುಕುಳ ನೀಡಿದ ವ್ಯಕ್ತಿಗೆ ಸಾಯುವವರೆಗೂ ಮರೆಯಲಾಗದ ಪಾಠ ಕಲಿಸಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲಿ ಮಹಿಳೆ ಆತನ ಮುಖಕ್ಕೆ ಲಿಪ್‌ಸ್ಟಿಕ್ ಹಾಗೂ ಇತರೆ ಮೇಕಪ್ ಸಾಮಗ್ರಿಗಳನ್ನು ಹಚ್ಚುತ್ತಿರುವುದು, ಕೈಗಳಿಗೆ ಗಾಜು ಬಳೆಗಳನ್ನು ತೊಡಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಸುತ್ತಮುತ್ತ ಇದ್ದ ಪ್ರಯಾಣಿಕರೆಲ್ಲರೂ ಈ ದೃಶ್ಯವನ್ನು ನೋಡುತ್ತಿದ್ದರಿಂದ ಯುವಕ ತೀವ್ರ ಮುಜುಗರಕ್ಕೊಳಗಾದನು. ಮಹಿಳೆಯ ಈ ಪ್ರತಿಭಟನೆಯನ್ನು ತಡೆಯಲು ಆತ ಯಾವುದೇ ಪ್ರಯತ್ನವೂ ಮಾಡಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಹಾಗೂ ಮಹಿಳೆಯರನ್ನು ಗೌರವಿಸದವರಿಗೆ ಗಟ್ಟಿಯಾದ ಸಂದೇಶ ನೀಡುವ ಉದ್ದೇಶದಿಂದಲೇ ಮಹಿಳೆ ಈ ಅಹಿಂಸಾತ್ಮಕ ಪ್ರತಿಭಟನೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ನಡೆಯುವ ವೇಳೆ ಬೋಗಿಯಲ್ಲಿದ್ದ ಸಹಪ್ರಯಾಣಿಕರು ಮಹಿಳೆಯ ಧೈರ್ಯವನ್ನು ಶ್ಲಾಘಿಸಿ ಚಪ್ಪಾಳೆ ತಟ್ಟಿದರು. ಕಿರುಕುಳ ನೀಡಿದ ವ್ಯಕ್ತಿಗೆ ತಕ್ಕ ಪಾಠ ಕಲಿಸಿದ್ದಕ್ಕಾಗಿ ಆಕೆಯನ್ನು ಪ್ರಶಂಸಿಸಿದರು.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯ ಮತ್ತು ಸಹಪ್ರಯಾಣಿಕರ ಬೆಂಬಲವನ್ನು ನೆಟ್ಟಿಗರು ಮೆಚ್ಚಿದ್ದಾರೆ. ಜೊತೆಗೆ ಸಾರ್ವಜನಿಕ ಸಾರಿಗೆ ಮತ್ತು ರೈಲುಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

View this post on Instagram

https://twitter.com/nextminutenews7/status/2078066131387224091/video/1

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular