HomeLatest Newsಬೆಂಗಳೂರಿನ 100ಕ್ಕೂ ಹೆಚ್ಚು ಬಡಾವಣೆಗಳಲ್ಲಿ ವಿದ್ಯುತ್ ಕಡಿತ ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರಿನ 100ಕ್ಕೂ ಹೆಚ್ಚು ಬಡಾವಣೆಗಳಲ್ಲಿ ವಿದ್ಯುತ್ ಕಡಿತ ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಬಡಾವಣೆಗಳ ನಿವಾಸಿಗಳಿಗೆ ಬೆಸ್ಕಾಂ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಸಬ್‌ಸ್ಟೇಷನ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಾಗೂ ಪ್ರಮುಖ ದುರಸ್ತಿ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜುಲೈ 18 ಮತ್ತು 19ರಂದು (ಶನಿವಾರ ಮತ್ತು ಭಾನುವಾರ) ನಗರದ ಹಲವು ಪ್ರಮುಖ ಐಟಿ ಹಬ್‌ಗಳು, ಕಮರ್ಷಿಯಲ್ ಸ್ಟ್ರೀಟ್‌ಗಳು ಮತ್ತು ವಸತಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ವಾರಾಂತ್ಯದ ಎರಡು ದಿನಗಳೂ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಪ್ರಮುಖವಾಗಿ ಇಂದಿರಾನಗರ, ಮಾನ್ಯತಾ ಟೆಕ್ ಪಾರ್ಕ್, ಎಚ್‌ಎಎಲ್, ಪೀಣ್ಯ ಮತ್ತು ಕೆ.ಆರ್.ಪುರಂ ಭಾಗಗಳಲ್ಲಿ ಪವರ್ ಕಟ್ ಬಿಸಿ ತಟ್ಟಲಿದೆ.

ಜುಲೈ 18 (ಶನಿವಾರ): ಎಲ್ಲೆಲ್ಲಿ, ಎಷ್ಟು ಗಂಟೆಗೆ ಪವರ್ ಕಟ್?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶನಿವಾರ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಎಚ್‌ಎಎಲ್ (HAL) ಸ್ಟೇಷನ್, ಐಟಿಐ ಸ್ಟೇಷನ್ ಹಾಗೂ ಮಾನ್ಯತಾ ಟೆಕ್ ಪಾರ್ಕ್ ಸ್ಟೇಷನ್ ವ್ಯಾಪ್ತಿಯಲ್ಲಿ ತುರ್ತು ಕೆಲಸಗಳು ನಡೆಯಲಿವೆ.

ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:

ಐಟಿ ಮತ್ತು ಟೆಕ್ ಪಾರ್ಕ್ ಭಾಗಗಳು: ಮಾನ್ಯತಾ ಟೆಕ್ ಪಾರ್ಕ್, ಮಾನ್ಯತಾ ಎಂಬಸಿ ಬಿಸಿನೆಸ್ ಪಾರ್ಕ್, ಬಾಗ್ಮನೆ ಟೆಕ್ ಪಾರ್ಕ್, ಟೆಕ್ಸಾಸ್, ಐಎಎಂ, ಡಬ್ಲ್ಯೂಟಿಸಿ, ಜಿಟಿಆಇಆರ್‌, ಇಸ್ರೋ (ಮಾರುತಹಳ್ಳಿ ಮತ್ತು ಎನ್ಎಎಲ್).

ಇಂದಿರಾನಗರ ಮತ್ತು ಸುತ್ತಮುತ್ತ: ಇಂದಿರಾನಗರ 1ನೇ ಮತ್ತು 2ನೇ ಹಂತ, ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, 80 ಅಡಿ ರಸ್ತೆ, ಸಿಎಂಎಚ್ ರಸ್ತೆ, ಕೃಷ್ಣ ದೇವಾಲಯ ರಸ್ತೆ, ಎಚ್-ಕಾಲೋನಿ.

ಜೀವನ್ ಭೀಮನಗರ ಹಾಗೂ ಎಚ್‌ಎಎಲ್ ಭಾಗ: ಜೀವನ್ ಭೀಮನಗರ, ಗೀತಾಂಜಲಿ ಲೇಔಟ್, ಹುಲ್ಲೇರಿ, 12ನೇ ಮುಖ್ಯ ರಸ್ತೆ, ಬಿಡಿಎ ಲೇಔಟ್, ಎಲ್‌ಐಸಿ ಕಾಲೋನಿ, ತಿಪ್ಪಸಂದ್ರ, ರಮೇಶ್ ನಗರ, ಡಿಫೆನ್ಸ್, ಟಾಟಾ ಹೌಸಿಂಗ್, ಡೈನಾಸ್ಟಿ, ಬಿಇಎಂಎಲ್, ಏಡಿಎ, ಮಲ್ಲೇಶಪಾಳ್ಯ, ಮಾರುತಿನಗರ, ಕಲ್ಲಪ್ಪ ಲೇಔಟ್, ರಾಜಣ್ಣ ಮತ್ತು ಎಲ್.ಎನ್ ರೆಡ್ಡಿ ಕಾಲೋನಿ, ಬಸವನಗರ, ಅನ್ನಸಂದ್ರಪಾಳ್ಯ, ವಿಭೂತಿಪುರ, ಜೈನ ಹೈಟ್ಸ್, ವಿಶ್ವಜಿತ್ ಲೇಔಟ್, ಆದರ್ಶ ವಿಲ್ಲಾ, ಕುವೆಂಪು ರಸ್ತೆ, ಕೃಷ್ಣಪ್ಪ ಗಾರ್ಡನ್, ವಿಮಾನ ನಿಲ್ದಾಣ ರಸ್ತೆ, ಮಾರಾಥಹಳ್ಳಿ, ದೊಡ್ಡನೆಕುಂಡಿ, ನ್ಯಾಯಾಲಯದ ಕ್ವಾರ್ಟರ್ಸ್.

ಮಾನ್ಯತಾ ಸುತ್ತಮುತ್ತಲಿನ ಏರಿಯಾಗಳು: ಮಾರುತಿ ಲೇಔಟ್, ಭುವನೇಶ್ವರಿ ನಗರ, ಎಐಆರ್ ಲೇಔಟ್, ರಾಚೇನಹಳ್ಳಿ, ಪಿ ಅಂಡ್ ಟಿ ಲೇಔಟ್, ಶ್ರೀರಾಮಪುರ, ಮೇಸ್ತ್ರಿ ಪಾಳ್ಯ, ಚಾಮುಂಡೇಶ್ವರಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಕೆ.ಆರ್. ಪುರಂ ಮುಖ್ಯ ರಸ್ತೆ ಸುತ್ತಮುತ್ತ:

ಜೈ ಭುವನೇಶ್ವರಿ ಲೇಔಟ್, ಕೆ.ಆರ್. ಪುರಂ ಮುಖ್ಯ ರಸ್ತೆ, ದೀಪಾ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶ, ವಿನಾಯಕ ಲೇಔಟ್, ಅಜಿತ್ ಲೇಔಟ್, ಟಿ.ಸಿ. ಪಾಳ್ಯ ಸಿಗ್ನಲ್, ಭಟ್ಟರಹಳ್ಳಿ, ಚಿಕ್ಕಬಸವನಪುರ, ಎಸ್‌ಇಎ ಕಾಲೇಜು, ಆಲ್ಫಾ ಗಾರ್ಡನ್, ಸ್ವಾತಂತ್ರ್ಯ ನಗರ, ರಾಜರಾಜೇಶ್ವರಿ ಲೇಔಟ್, ಮುನೇಶ್ವರ ಲೇಔಟ್, ಆಲ್ಫಾ ಗಾರ್ಡನ್ ಲೇಔಟ್, ಕೊಕೊನಟ್ ಗಾರ್ಡನ್, ಬೆಥೆಲ್ ನಗರ, ಬೃಂದಾವನ ಲೇಔಟ್, ಕೆ.ಆರ್.ಆರ್. ಲೇಔಟ್, ಕೇಂಬ್ರಿಡ್ಜ್ ಲೇಔಟ್, ಕೇಂಬ್ರಿಡ್ಜ್ ಗಾರ್ಡನ್ ಲೇಔಟ್ ಹಾಗೂ ಸುತ್ತಮುತ್ತಲ ಜಾಗಗಳು.

ಜುಲೈ 19 (ಭಾನುವಾರ): ವಾರಾಂತ್ಯದ ರಜೆ ದಿನ ಎಲ್ಲೆಲ್ಲಿ ಕರೆಂಟ್ ಇರಲ್ಲ?

ಭಾನುವಾರ ಲೀಲಾ ವೆಂಚ್ಯೂರ್ ಸ್ಟೇಷನ್, ಪೀಣ್ಯ ಸಬ್‌ಸ್ಟೇಷನ್ ಮತ್ತು ಬಾಗ್ಮನೆ ಟೆಕ್‌ಪಾರ್ಕ್ ಸ್ಟೇಷನ್‌ಗಳಲ್ಲಿ ಕಾಮಗಾರಿ ನಡೆಯಲಿದೆ.

ಬೆಳಗ್ಗೆ 10:00 ಗಂಟೆಯಿಂದ ಸಂಜೆ 4:30 ರವರೆಗೆ (ಕೇಂದ್ರ ಭಾಗ ಹಾಗೂ ಎಚ್‌ಎಎಲ್):

ಎಂ.ಜಿ ರೋಡ್ ಕಮರ್ಷಿಯಲ್ ಹಬ್: ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಲಾವೆಲ್ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ರಿಚ್ಮಂಡ್ ರಸ್ತೆ, ಕಸ್ತೂರಬಾ ರಸ್ತೆ, ವಾಲ್ಟನ್ ರಸ್ತೆ, ಡಿಕೆನ್ಸನ್ ರಸ್ತೆ, ಅಶೋಕ್ ನಗರ, ಪ್ರಿಮ್‌ರೋಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಟ್ರಿನಿಟಿ ವೃತ್ತ, ಹಲಸೂರು ರಸ್ತೆ, ಮರ್ಫಿ ಟೌನ್, ಹಲಸೂರು.

ಎಚ್‌ಎಎಲ್ ಮತ್ತು ಕೊಡಿಹಳ್ಳಿ ಭಾಗ: ಏರ್‌ಪೋರ್ಟ್ ರಸ್ತೆ, ಕೊಡಿಹಳ್ಳಿ, 16ನೇ ಮುಖ್ಯ ರಸ್ತೆ, 19ನೇ ಮುಖ್ಯ ರಸ್ತೆ, ಎಚ್‌ಎಎಲ್ 2ನೇ ಮತ್ತು 3ನೇ ಹಂತ, ಕಾರ್ಲ್ಟನ್ ಟವರ್ಸ್, ಎನ್‌ಎಎಲ್ ಕಾಂಪೌಂಡ್, ರಾಮ ದೇವಸ್ಥಾನ ರಸ್ತೆ, ವೆಂಕಟೇಶ್ವರ ಕಾಲೋನಿ, ಭೂಮಾ ರೆಡ್ಡಿ ಕಾಲೋನಿ, 515 ಕಾಲೋನಿ, ಕೊಡಿಹಳ್ಳಿ ಗ್ರಾಮ, 17ನೇ ಮುಖ್ಯ ರಸ್ತೆ, 18ನೇ ಮುಖ್ಯ ರಸ್ತೆ, 100 ಅಡಿ ರಸ್ತೆ, ಸರ್ವಿಸ್ ರಸ್ತೆ, 13ನೇ ‘ಊ’ ಮುಖ್ಯ ರಸ್ತೆ, 12ನೇ ಮುಖ್ಯ ರಸ್ತೆ, ಡೊಂಲೂರು 2ನೇ ಹಂತ, 6ನೇ ಮುಖ್ಯ ರಸ್ತೆ, ಡಿಫೆನ್ಸ್ ಕಾಲೋನಿ, 80 ಅಡಿ ರಸ್ತೆ, 11ನೇ ಮುಖ್ಯ ರಸ್ತೆ, ಹಳೆಯ ತಿಪ್ಪಸಂದ್ರ, ಹೊಸ ತಿಪ್ಪಸಂದ್ರ, ಗೀತಾಂಜಲಿ ಲೇಔಟ್, ಹೊಸ ತಿಪ್ಪಸಂದ್ರ ಮುಖ್ಯ ರಸ್ತೆ, ಸೀತಾಪನಹಳ್ಳಿ ಕಾಲೋನಿ, ಎಡಿಇ ಕಾಂಪೌಂಡ್, ಬಿಇಎಂಎಲ್ ರಸ್ತೆ, ಗಣೇಶ ದೇವಸ್ಥಾನ, ಪ್ರಿಸ್ಟಿನ್ ಪಾರ್ಕ್, ಮೊಟ್ಟಪ್ಪನಪಾಳ್ಯ, ಅಪ್ಪಾರೆಡ್ಡಿ ಪಾಳ್ಯ, ಇಸ್ರೋ ಕ್ವಾಟ್ರಸ್‌, ಇಎಸ್‌ಐ ಆಸ್ಪತ್ರೆ, ಟೆಲಿಫೋನ್ ಎಕ್ಸ್ಚೇಂಜ್ ಪ್ರದೇಶ, ಭಾರತ್ ಸಹಕಾರ ಬ್ಯಾಂಕ್, ಪೂಜಾ ಅಪಾರ್ಟ್ಮೆಂಟ್, ಜಿ.ಜಿ. ಆಸ್ಪತ್ರೆ, 9ನೇ ಮುಖ್ಯ ರಸ್ತೆ, 4ನೇ ಮುಖ್ಯ ರಸ್ತೆ.

ಬೆಳಗ್ಗೆ 10:00 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ (ಪೀಣ್ಯ ಕೈಗಾರಿಕಾ ಪ್ರದೇಶ):

ಪೀಣ್ಯ ಗ್ರಾಮ, ಎಸ್.ಆರ್.ಎಸ್. ರಸ್ತೆ, 4ನೇ ಬ್ಲಾಕ್, 2ನೇ ಬ್ಲಾಕ್, ಎಂ.ಇ.ಐ. ಫ್ಯಾಕ್ಟರಿ, 7ನೇ ಮುಖ್ಯ ರಸ್ತೆ, ಭಾರತ್ ಕಂಡಕ್ಟರ್ ರಸ್ತೆ, ಮಾಲಿನ್ಯ ನಿಯಂತ್ರಣ ಮಂಡಳಿ ರಸ್ತೆ, ಬ್ರೆಮ್ಮೆಲ್ ರಬ್ಬರ್ ರಸ್ತೆ, ಎಸ್.ಆರ್.ಎಸ್. ಮುಖ್ಯ ರಸ್ತೆ, 3ನೇ ಹಂತ, 10ನೇ ಅಡ್ಡರಸ್ತೆ, 1ನೇ ಹಂತ, ಪಿ.ಐ.ಎ. 3ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, పೀಣ್ಯ ಅಜೆಕ್ಸ್ ರಸ್ತೆ, ಸ್ಲಮ್ ರಸ್ತೆ, ಇನ್ನುಳಿದ ಕೈಗಾರಿಕಾ ರಸ್ತೆಗಳು, ವೈಷ್ಣವಿ ಮಾಲ್ ಮತ್ತು ಕಾವೇರಿ ಮಾಲ್.

ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ (ಕಗ್ಗದಾಸಪುರ ಭಾಗ):

ಟಿಟಿಕೆ ಪ್ರೆಸ್ಟೀಜ್ ಅಪಾರ್ಟ್ಮೆಂಟ್, ಬೈರಸಂದ್ರ, ಗುಂಡಪ್ಪ ಲೇಔಟ್, ಓಂ ಶಕ್ತಿ ದೇವಸ್ಥಾನ, ಕಗ್ಗದಾಸಪುರ 1ನೇ ಕ್ರಾಸ್‌ನಿಂದ 19ನೇ ಕ್ರಾಸ್‌ವರೆಗೆ, ಭುವನೇಶ್ವರಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಸಾರ್ವಜನಿಕರಿಗೆ ಸಲಹೆ: ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ನಿವಾಸಿಗಳು ತಮ್ಮ ದೈನಂದಿನ ಗೃಹಕೃತ್ಯಗಳು ಹಾಗೂ ಇಂಟರ್ನೆಟ್/ವರ್ಕ್ ಫ್ರಮ್ ಹೋಮ್ ಕೆಲಸಗಳಿಗೆ ಮುಂಚಿತವಾಗಿಯೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಬೆಸ್ಕಾಂ ಕೋರಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular