ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ನಂಬಿ ನಷ್ಟ ಮಾಡಿಕೊಳ್ಳುವ ಬದಲು, ಕಡಿಮೆ ಖರ್ಚಿನಲ್ಲಿ ಗ್ಯಾರಂಟಿ ಆದಾಯ ತಂದುಕೊಡುವ ವಾಣಿಜ್ಯ ಬೆಳೆಗಳ ಕಡೆಗೆ ಇಂದಿನ ಯೂತ್ಸ್ ಮತ್ತು ರೈತರು ಮುಖ ಮಾಡುತ್ತಿದ್ದಾರೆ. ಅಂತಹವರಿಗೆ ಈಗ ಬೆಸ್ಟ್ ಆಪ್ಷನ್ ಅಂದರೆ ಅದು ಸೀಬೆಹಣ್ಣಿನ ಕೃಷಿ ಪ್ರಸ್ತುತ ಮುಂಗಾರು ಮಳೆಗಾಲ ಆರಂಭವಾಗಿರುವುದರಿಂದ ಈ ಕೃಷಿಗೆ ಸಕಾಲವಾಗಿದ್ದು, ಮಾರುಕಟ್ಟೆಯಲ್ಲಿ ಸೀಬೆಹಣ್ಣಿಗೆ ಇರುವ ಡಿಮ್ಯಾಂಡ್ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಏರುತ್ತಿದೆ,
ಸೀಬೆಹಣ್ಣು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ರೈತರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲೂ ಸೂಪರ್ ಐಡಿಯಾ. ಸ್ವಲ್ಪ ಶ್ರಮ ಮತ್ತು ಜಾಗರೂಕತೆಯಿಂದ ಈ ಕೃಷಿ ಮಾಡಿದರೆ ವರ್ಷಪೂರ್ತಿ ಹಣ ಗಳಿಸಬಹುದು. ಇದರ ಸಂಪೂರ್ಣ ಕೃಷಿ ಮಾಹಿತಿ ಇಲ್ಲಿದೆ:
ಇಳುವರಿ ಹೆಚ್ಚಿಸಲು ಯಾವ ಗೊಬ್ಬರ ನೀಡಬೇಕು?
ಸೀಬೆ ಮರ ಚೆನ್ನಾಗಿ ಬೆಳೆದು ಬಂಪರ್ ಫಸಲು ನೀಡಬೇಕಾದರೆ ಮಣ್ಣಿನಲ್ಲಿ ಪೋಷಕಾಂಶಗಳ ನಿರ್ವಹಣೆ ತುಂಬಾ ಮುಖ್ಯ. ಮರಕ್ಕೆ ಸಾರಜನಕ, ರಂಜಕ, ಪೊಟ್ಯಾಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ತಾಮ್ರದ ಅಗತ್ಯವಿರುತ್ತದೆ. ವಿಶೇಷವಾಗಿ ಪೊಟ್ಯಾಸಿಯಮ್ ಪ್ರಮಾಣ ಹೆಚ್ಚಿಸಿದರೆ ಹಣ್ಣಿನ ಕ್ವಾಲಿಟಿ ಸೂಪರ್ ಆಗಿರುತ್ತದೆ.
5 ವರ್ಷದವರೆಗಿನ ಗಿಡಗಳಿಗೆ: ಗಿಡ ನೆಟ್ಟಾಗಿನಿಂದ 5 ವರ್ಷ ತುಂಬುವವರೆಗೆ ಪ್ರತಿ ವರ್ಷ 100 ಗ್ರಾಂ ಸಾರಜನಕ, 100 ಗ್ರಾಂ ಪೊಟ್ಯಾಶ್ ಮತ್ತು 40 ಗ್ರಾಂ ರಂಜಕದ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ಕ್ರಮೇಣ ಹೆಚ್ಚಿಸುತ್ತಾ ಹೋಗಬೇಕು.
5 ವರ್ಷದ ನಂತರದ ದೊಡ್ಡ ಮರಗಳಿಗೆ: ಪ್ರತಿ ವರ್ಷ ಒಂದು ಮರಕ್ಕೆ 500 ಗ್ರಾಂ ಸಾರಜನಕ, 200 ಗ್ರಾಂ ರಂಜಕ ಮತ್ತು 500 ಗ್ರಾಂ ಪೊಟ್ಯಾಶ್ ನೀಡಬೇಕು. (ಇದರಲ್ಲಿ ಅರ್ಧದಷ್ಟು ಸಾರಜನಕವನ್ನು ಸಾವಯವ ರೂಪದಲ್ಲೇ ನೀಡಬೇಕು).
ಗೊಬ್ಬರ ನೀಡುವ ಸರಿಯಾದ ಸಮಯ: ಮುಂಗಾರು ಬೆಳೆಗೆ ಮೊದಲ ಮಾನ್ಸೂನ್ ಮಳೆಯ ನಂತರ ಹಾಗೂ ಚಳಿಗಾಲದ ಬೆಳೆಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಗೊಬ್ಬರ ಉಣಿಸಬೇಕು.
ಸಾವಯವ ಹಾಗೂ ಜೈವಿಕ ಗೊಬ್ಬರಗಳು: ಗುಣಮಟ್ಟದ ಇಳುವರಿಗಾಗಿ ಪ್ರತಿ ಮರಕ್ಕೆ 600 ಗ್ರಾಂ ಬೇವಿನ ಪುಡಿ, ಜಾನುವಾರುಗಳ ಕೊಟ್ಟಿಗೆ ಗೊಬ್ಬರ, ಜೊತೆಗೆ 100 ಗ್ರಾಂ ಅಜೋಸ್ಪಿರಿಲಮ್ ಮತ್ತು ಫಾಸ್ಫೋಬ್ಯಾಕ್ಟೀರಿಯಾದಂತಹ ಜೈವಿಕ ಗೊಬ್ಬರಗಳನ್ನು ಬಳಸುವುದು ಕಡ್ಡಾಯ.
ಕಡಿಮೆ ಖರ್ಚು, ಕನಿಷ್ಠ ರಿಸ್ಕ್
ಕಡಿಮೆ ನೀರು ಸಾಕು: ಸೀಬೆಹಣ್ಣು ಅತಿ ಕಡಿಮೆ ನೀರು ಬೇಡುವ ಬೆಳೆಯಾಗಿದ್ದು, ವರ್ಷಕ್ಕೆ ಕೇವಲ 2 ರಿಂದ 3 ಬಾರಿ ನೀರು ಹಾಯಿಸಿದರೂ ಸಾಕು. ಮಣ್ಣಿನ ಗುಣಮಟ್ಟ ಕಡಿಮೆ ಇರುವ ಒಣ ಭೂಮಿಯಲ್ಲೂ ಇದು ಸಲೀಸಾಗಿ ಬೆಳೆಯುತ್ತದೆ.ಕೀಟ ಹಾಗೂ ರೋಗ ಬಾಧೆ ತೀರಾ ಕಡಿಮೆ ಇರುವುದರಿಂದ ದುಬಾರಿ ರಾಸಾಯನಿಕಗಳ ಖರ್ಚು ಉಳಿಯುತ್ತದೆ.
ಆಧುನಿಕ ತಳಿಗಳು: ಮಾರುಕಟ್ಟೆಯಲ್ಲಿ ಸಖತ್ ಕ್ರೇಜ್ ಸೃಷ್ಟಿಸಿರುವ ತೈವಾನ್ ಪಿಂಕ್ (Taiwan Pink) ಮತ್ತು ‘ವಿಎನ್‌ಆರ್ ಬಿಹಿ’ (VNR Bihi) ನಂತಹ ತಳಿಗಳನ್ನು ಬೆಳೆಸಿದರೆ ಹಣ್ಣಿನ ಗಾತ್ರ ದೊಡ್ಡದಾಗಿರುತ್ತದೆ, ಬೀಜಗಳು ಕಮ್ಮಿ ಇರುತ್ತವೆ ಮತ್ತು ಸಿಹಿ ಹೆಚ್ಚಿರುವುದರಿಂದ ಸೂಪರ್ ರೇಟ್ ಸಿಗುತ್ತದೆ.
ಅಂತರ ಎಷ್ಟು ಇರಬೇಕು? ಆದಾಯದ ಲೆಕ್ಕಾಚಾರ ಇಲ್ಲಿದೆ:
ಗಿಡಗಳ ಅಂತರ: ದೊಡ್ಡ ಪ್ರದೇಶದಲ್ಲಿ ಕೃಷಿ ಮಾಡುವಾಗ ಗಿಡದಿಂದ ಗಿಡಕ್ಕೆ 5×5 ಮೀಟರ್ ಅಥವಾ 6×6 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಗಿಡ ನೆಟ್ಟ 3-4 ವರ್ಷಗಳಲ್ಲಿ ಕಮರ್ಷಿಯಲ್ ಆಗಿ ಫಸಲು ಕೈಗೆ ಸಿಗುತ್ತದೆ. ಪ್ರತಿ ವರ್ಷ ಸಮರ್ಪಕವಾಗಿ ಕತ್ತರಿಸುವುದು (Pruning) ಮತ್ತು ಗೊಬ್ಬರ ನೀಡುವುದು ಅಗತ್ಯ.
ಬಂಪರ್ ಕಮಾಯಿ: ಒಂದು ಎಕರೆಯಲ್ಲಿ ಸರಿಯಾದ ಮ್ಯಾನೇಜ್‌ಮೆಂಟ್ ಮಾಡಿದರೆ ಬರೋಬ್ಬರಿ 3 ರಿಂದ 4 ಟನ್ ಇಳುವರಿ ಪಡೆಯಬಹುದು. ಮಾರುಕಟ್ಟೆಯಲ್ಲಿ ಕ್ವಾಲಿಟಿ ಸೀಬೆಹಣ್ಣಿಗೆ ಪ್ರತಿ ಕೆಜಿಗೆ ₹80 ರಿಂದ ₹180 ವರೆಗೂ ಭರ್ಜರಿ ಬೆಲೆ ಸಿಗುತ್ತದೆ

