HomeLatest Newsಜಲಪಾತದ ತುತ್ತ ತುದಿಯಲ್ಲಿ ಸಿಲುಕಿದ್ದ ಯುವಕನ ಜೀವ ಉಳಿಸಿದ ಸ್ನೇಹಿತರು ; ರೋಚಕ ರಕ್ಷಣಾ ಕಾರ್ಯದ...

ಜಲಪಾತದ ತುತ್ತ ತುದಿಯಲ್ಲಿ ಸಿಲುಕಿದ್ದ ಯುವಕನ ಜೀವ ಉಳಿಸಿದ ಸ್ನೇಹಿತರು ; ರೋಚಕ ರಕ್ಷಣಾ ಕಾರ್ಯದ ವಿಡಿಯೋ ವೈರಲ್ |WATCH VIDEO

ಮುಂಬೈ/ಮಾಲ್ಶೇಜ್ ಘಾಟ್: ಮಳೆಗಾಲ ಆರಂಭವಾಗುತ್ತಿದ್ದಂತೆ ಜಲಪಾತಗಳು ಮತ್ತು ಪ್ರವಾಸಿ ತಾಣಗಳಿಗೆ ಜನಸಂದಣಿ ಹೆಚ್ಚಾಗುತ್ತಿದೆ. ಆದರೆ ಸಾಹಸದ ಹೆಸರಿನಲ್ಲಿ ಅಪಾಯಕಾರಿ ಸ್ಥಳಗಳಿಗೆ ತೆರಳುವುದು ಎಷ್ಟು ಅಪಾಯಕಾರಿಯಾಗಿದೆ ಎಂಬುದಕ್ಕೆ ಮಹಾರಾಷ್ಟ್ರದ ಮಾಲ್ಶೇಜ್ ಘಾಟ್‌ನಲ್ಲಿ ನಡೆದ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಬಾರಿಸಿದೆ.

ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕರ ತಂಡದಲ್ಲಿದ್ದ ಒಬ್ಬ ಯುವಕ, ಭಾರೀ ನೀರಿನ ಹರಿವಿನ ಮಧ್ಯೆ ಜಲಪಾತದ ತುತ್ತ ತುದಿಯಲ್ಲಿ ಸಿಲುಕಿಕೊಂಡು ಜೀವಾಪಾಯಕ್ಕೆ ಸಿಲುಕಿದ್ದಾನೆ. ಎರಡು ಬಂಡೆಗಳ ನಡುವಿನ ಕಿರಿದಾದ ಜಾಗದಲ್ಲಿ ನಿಂತು ನೀರಿನ ರಭಸವನ್ನು ಎದುರಿಸುತ್ತಿದ್ದ ಆತನ ಸ್ಥಿತಿ ಕಂಡು ಸ್ನೇಹಿತರು ಕೂಡಲೇ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.

ಪ್ರಾಣ ಪಣಕ್ಕಿಟ್ಟು ಸ್ನೇಹಿತನ ರಕ್ಷಣೆ

ಯುವಕನನ್ನು ರಕ್ಷಿಸಲು ಸ್ನೇಹಿತರು ಹಗ್ಗ, ಬಟ್ಟೆ ಹಾಗೂ ಕೈಗೆ ಸಿಕ್ಕ ವಸ್ತುಗಳನ್ನು ಬಳಸಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಅವುಗಳನ್ನು ಸಿಲುಕಿದ್ದ ಯುವಕನ ಕಡೆಗೆ ಎಸೆದು, ಸುರಕ್ಷಿತವಾಗಿ ಬಂಡೆಯ ಮೇಲೆ ಎಳೆದು ತಂದರು. ಕೆಲ ಕ್ಷಣಗಳಲ್ಲೇ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ಸ್ನೇಹಿತರ ಧೈರ್ಯದಿಂದ ತಪ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ರೋಚಕ ರಕ್ಷಣಾ ಕಾರ್ಯದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಹೇಗೆ ಸಿಲುಕಿದ ಎಂಬುದು ಇನ್ನೂ ನಿಗೂಢ

ಯುವಕ ಜಲಪಾತದ ತುದಿಗೆ ಹೇಗೆ ತಲುಪಿದ ಎಂಬುದು ಸ್ಪಷ್ಟವಾಗಿಲ್ಲ. ನೀರಿನ ಹರಿವು ಏಕಾಏಕಿ ಹೆಚ್ಚಾಗಿ ಸಿಲುಕಿದನಾ, ಅಥವಾ ಬಂಡೆಗಳ ಮೇಲೆ ಕಾಲು ಜಾರಿ ಅಪಾಯದ ಸ್ಥಳಕ್ಕೆ ತಲುಪಿದನಾ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ನೆಟ್ಟಿಗರ ಎಚ್ಚರಿಕೆ

ವಿಡಿಯೋ ವೈರಲ್ ಆದ ಬಳಿಕ ಅನೇಕರು ಯುವಕನ ನಿರ್ಲಕ್ಷ್ಯವನ್ನು ಟೀಕಿಸಿದ್ದು, ಮಳೆಗಾಲದಲ್ಲಿ ಜಲಪಾತಗಳು ಮತ್ತು ನದಿ ತೀರಗಳಲ್ಲಿ ಸಾಹಸ ಮಾಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಸುರಕ್ಷಿತ ಅಂತರದಿಂದಲೇ ಆಸ್ವಾದಿಸಬೇಕು. ಸೆಲ್ಫಿ, ವಿಡಿಯೋ ಅಥವಾ ಸಾಹಸದ ಹುಚ್ಚಿನಲ್ಲಿ ಅಪಾಯಕಾರಿ ಪ್ರದೇಶಗಳಿಗೆ ತೆರಳಿದರೆ ಒಂದು ಕ್ಷಣದ ನಿರ್ಲಕ್ಷ್ಯ ಜೀವಕ್ಕೆ ಅಪಾಯ ತರಬಹುದು ಎಂದು ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular