ಕೋಲಾರ: ಕೋಲಾರದಲ್ಲಿ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ 4.3 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಉತ್ತರಪ್ರದೇಶ ಮೂಲದ ಬೋಲನಾಥ್ ಪಾಲ್(43) ಎಂಬುವನನ್ನು ಬಂಧಿಸಲಾಗಿದೆ.
ಕೋಲಾರದ ಎಪಿಎಂಸಿ ಬಳಿ ಆರೋಪಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೋಲಾರ ನಗರ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ. ನರಸಾಪುರ ಬಳಿ ಹೋಟೆಲ್ ವೊಂದರಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಜೊತೆಗೆ ಗಾಂಜಾ ಕೂಡ ಮಾರಾಟ ಮಾಡುತ್ತಿದ್ದ. ಆರೋಪಿ ಬೋಲನಾಥ್ ಪಾಲ್ ನನ್ನು ಬಂಧಿಸಲಾಗಿದೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

