HomeLatest Newsಹ್ಯಾಪಿಯೆಸ್ಟ್ ಹೆಲ್ತ್‌ ಸಂಸ್ಥೆಯಲ್ಲಿ ದೊಡ್ಡ ಬದಲಾವಣೆ: ಜ್ಞಾನ ವಿಭಾಗದ ನೂತನ ಸಿಇಒ ಆಗಿ ಹಿರಿಯ ಪತ್ರಕರ್ತ...

ಹ್ಯಾಪಿಯೆಸ್ಟ್ ಹೆಲ್ತ್‌ ಸಂಸ್ಥೆಯಲ್ಲಿ ದೊಡ್ಡ ಬದಲಾವಣೆ: ಜ್ಞಾನ ವಿಭಾಗದ ನೂತನ ಸಿಇಒ ಆಗಿ ಹಿರಿಯ ಪತ್ರಕರ್ತ ರಘು ಕೃಷ್ಣನ್ ನೇಮಕ

ಜಾಗತಿಕ ಮಟ್ಟದಲ್ಲಿ ಓದುಗರ ನೆಚ್ಚಿನ ಪತ್ರಿಕೆಯಾಗಿ ಹೊರಹೊಮ್ಮಿರುವ ಹ್ಯಾಪಿಯೆಸ್ಟ್ ಹೆಲ್ತ್‌ ಇದೀಗ ತನ್ನ ಜ್ಞಾನ (Knowledge Business) ವಿಭಾಗದ ನಾಯಕತ್ವದಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಪುಸ್ತಕ ಪ್ರಕಾಶನ ಕ್ಷೇತ್ರಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ. ಸಂಸ್ಥೆಯ ನೂತನ ಸಿಇಒ ಹಾಗೂ ಮುಖ್ಯ ಸಂಪಾದಕರಾಗಿ ಹಿರಿಯ ಪತ್ರಕರ್ತ ರಘು ಕೃಷ್ಣನ್ ಅವರನ್ನು ನೇಮಕ ಮಾಡಲಾಗಿದೆ.

ಅಂತರ್ಜಾಲದಲ್ಲಿ ಹರಡುವ ತಪ್ಪು ಮಾಹಿತಿಗಳಿಗೆ ಬ್ರೇಕ್ ಹಾಕಿ, ವೈಜ್ಞಾನಿಕ ಆಧಾರಿತ ನಿಖರ ಆರೋಗ್ಯ ಜ್ಞಾನವನ್ನು ಜನರಿಗೆ ತಲುಪಿಸಲು ಸಂಸ್ಥೆಯ ಚೇರ್ಮನ್ ಅಶೋಕ್ ಸೂಟಾ ಕೈಗೊಂಡಿರುವ ಈ ಹೊಸ ನಿರ್ಧಾರದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ

2022ರಲ್ಲಿ ಆರಂಭವಾದ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯ ಜ್ಞಾನ ವಿಭಾಗವು, ತನ್ನ ವೆಬ್‌ಸೈಟ್, ದೈನಂದಿನ ಹೆಲ್ತ್‌ಜೀನ್ ಇ-ಮೇಲ್, ಮಾಸಿಕ ಮುದ್ರಿತ ಮ್ಯಾಗಜೀನ್‌ ಮತ್ತು ಆರೋಗ್ಯ ಶೃಂಗಸಭೆಗಳ ಮೂಲಕ ಅತ್ಯುತ್ತಮ ಗುಣಮಟ್ಟದ ಹೆಲ್ತ್ ಆ್ಯಂಡ್ ವೆಲ್ನೆಸ್ ಮಾಹಿತಿಯನ್ನು ನೀಡುತ್ತಾ ಬಂದಿದೆ.ಪ್ರಸ್ತುತ ಹ್ಯಾಪಿಯೆಸ್ಟ್ ಹೆಲ್ತ್ ಮ್ಯಾಗಜೀನ್ ಓದುಗರ ನೆಚ್ಚಿನ ಪತ್ರಿಕೆಯಾಗಿ ಹೊರಹೊಮ್ಮಿದ್ದು, ದೇಶ-ವಿದೇಶಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಹತ್ವದ ಬೆಳವಣಿಗೆಯ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯ ಚೇರ್ಮನ್ ಮತ್ತು ಚೀಫ್ ಸ್ಟ್ರಾಟೆಜಿ ಆಫೀಸರ್ ಅಶೋಕ್ ಸೂಟಾ, “ಹ್ಯಾಪಿಯೆಸ್ಟ್‌ ಹೆಲ್ತ್‌ ಮ್ಯಾಗಜೀನ್ ಅನ್ನು ಅತ್ಯಂತ ವಿಶ್ವಾಸಾರ್ಹ ಮತ್ತು ಜನಪ್ರಿಯ ಪತ್ರಿಕೆಯನ್ನಾಗಿ ರೂಪಿಸುವಲ್ಲಿ ರಘು ಕೃಷ್ಣನ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಅವರ ಜವಾಬ್ದಾರಿಯನ್ನು ವಿಸ್ತರಿಸಲಾಗಿದ್ದು, ಮ್ಯಾಗಜೀನ್ ಹಾಗೂ ದೈನಂದಿನ ಇ-ಜ಼ೀನ್ ಎರಡಕ್ಕೂ ಅವರು ಮುಖ್ಯ ಸಂಪಾದಕರಾಗಿರಲಿದ್ದಾರೆ. ಇಡೀ ಡಿಜಿಟಲ್ ಮತ್ತು ಜ್ಞಾನ ವಿಭಾಗವನ್ನು ಅವರ ನಾಯಕತ್ವದ ಅಡಿಯಲ್ಲೇ ಏಕೀಕರಿಸಲಾಗಿದ್ದು, ನಾವು ಹೊಸದಾಗಿ ಕಾಲಿಡುತ್ತಿರುವ ಪುಸ್ತಕ ಪ್ರಕಾಶನ ವಿಭಾಗವನ್ನೂ ಅವರೇ ಮುನ್ನಡೆಸಲಿದ್ದಾರೆ. ರಘು ಅವರ ಈ ನೇಮಕಾತಿಯು ನಮ್ಮ ಜ್ಞಾನ ವಿಭಾಗವನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ,” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ʼವೈಜ್ಞಾನಿಕ ಆಧಾರಿತ ಆರೋಗ್ಯ ಜ್ಞಾನ ನಮ್ಮ ಗುರಿʼ

ತಮ್ಮ ನೂತನ ಜವಾಬ್ದಾರಿಯ ಕುರಿತು ಮಾತನಾಡಿದ ನಾಲೆಡ್ಜ್ ಬಿಸಿನೆಸ್‌ನ ನೂತನ ಸಿಇಒ ಮತ್ತು ಮುಖ್ಯ ಸಂಪಾದಕ ರಘು ಕೃಷ್ಣನ್, “ಜನರಿಗೆ ಯಾವುದೇ ಗೊಂದಲಗಳಿಲ್ಲದ, ಸಂಪೂರ್ಣ ವಿಶ್ವಾಸಾರ್ಹ ಹಾಗೂ ವೈಜ್ಞಾನಿಕ ಆಧಾರಿತ ಆರೋಗ್ಯ ಮಾಹಿತಿಯನ್ನು ನೀಡಿ ಅವರ ಬದುಕನ್ನು ಸಬಲೀಕರಿಸುವುದೇ ಹ್ಯಾಪಿಯೆಸ್ಟ್ ಹೆಲ್ತ್‌ನ ಮೂಲ ಉದ್ದೇಶವಾಗಿದೆ. ನಮ್ಮ ಸಂಪಾದಕೀಯ ವೇದಿಕೆಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಸಂಸ್ಥೆಯ ಮುಂದಿನ ಹಂತದ ಬೆಳವಣಿಗೆಯನ್ನು ಮುನ್ನಡೆಸಲು ನಾನು ಅತ್ಯಂತ ಉತ್ಸುಕನಾಗಿದ್ದೇನೆ,” ಎಂದಿದ್ದಾರೆ.

“ನಾವು ಇದೀಗ ಸೆಲ್ಫ್-ಪಬ್ಲಿಷಿಂಗ್ ಪ್ಲಾಟ್‌ಫಾರ್ಮ್ ಮೂಲಕ ಪುಸ್ತಕ ಪ್ರಕಾಶನದಂತಹ ಹೊಸ ಮಜಲಿಗೆ ಕಾಲಿಟ್ಟಿದ್ದು, ಈಗಾಗಲೇ ಕೆಲವು ಅತ್ಯುತ್ತಮ ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿವೆ. ಸಾಮಾನ್ಯ ಓದುಗರಿಗೆ ಮತ್ತು ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ಸಮಾನವಾಗಿ ಉಪಯುಕ್ತವಾಗುವಂತಹ ಒಂದು ಅತ್ಯುತ್ತಮ, ವಿಶ್ವಾಸಾರ್ಹ ಜ್ಞಾನದ ವ್ಯವಸ್ಥೆಯನ್ನು ಕಟ್ಟುವ ನಮ್ಮ ಪ್ರಯತ್ನ ಸತತವಾಗಿ ಮುಂದುವರಿಯಲಿದೆ,” ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ, ಆರೋಗ್ಯದ ಬಗ್ಗೆ ಅಂತರ್ಜಾಲದಲ್ಲಿ ಹರಿದಾಡುವ ತಪ್ಪು ಮಾಹಿತಿಗಳಿಗೆ ಕಡಿವಾಣ ಹಾಕಿ, ನಿಖರವಾದ ಮತ್ತು ತಜ್ಞರಿಂದ ದೃಢೀಕರಿಸಲ್ಪಟ್ಟ ಆರೋಗ್ಯ ವಿಚಾರಗಳನ್ನು ಮ್ಯಾಗಜೀನ್, ಡಿಜಿಟಲ್ ವೇದಿಕೆಗಳು ಹಾಗೂ ಇದೀಗ ಪುಸ್ತಕಗಳ ಮೂಲಕವೂ ಜನರಿಗೆ ತಲುಪಿಸಲು ‘ಹ್ಯಾಪಿಯೆಸ್ಟ್ ಹೆಲ್ತ್’ ತೀರ್ಮಾನಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular