HomeLatest Newsಜಾನಕಿ ಅಮ್ಮನ ಅಗಲಿಕೆ ಬೆನ್ನಲ್ಲೇ ಮೊಮ್ಮಗಳ ನೋವಿನ ಮಾತು: ಕಣ್ಣೀರು ಹಾಕದಿದ್ದಕ್ಕೆ ಪ್ರಶ್ನೆ ಮಾಡಿದವರಿಗೆ ಸಿಕ್ಕಿತು...

ಜಾನಕಿ ಅಮ್ಮನ ಅಗಲಿಕೆ ಬೆನ್ನಲ್ಲೇ ಮೊಮ್ಮಗಳ ನೋವಿನ ಮಾತು: ಕಣ್ಣೀರು ಹಾಕದಿದ್ದಕ್ಕೆ ಪ್ರಶ್ನೆ ಮಾಡಿದವರಿಗೆ ಸಿಕ್ಕಿತು ತಕ್ಕ ಉತ್ತರ

ಖ್ಯಾತ ಗಾಯಕಿ ಎಸ್. ಜಾನಕಿ ಅವರ ಅಗಲಿಕೆಯ ನೋವಿನಲ್ಲಿರುವ ಅವರ ಕುಟುಂಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕೆಗಳ ಮೂಲಕ ಬೇಸರ ಉಂಟುಮಾಡಿದ್ದಾರೆ. ಕಣ್ಣೀರು ಹಾಕುತ್ತಿಲ್ಲ ಎಂಬ ಕಾರಣಕ್ಕೆ ನೋವನ್ನು ಪ್ರಶ್ನಿಸಿದವರಿಗೆ ಜಾನಕಿ ಅಮ್ಮ ಅವರ ಮೊಮ್ಮಗಳು ಅಪ್ಸರಾ ವೈದ್ಯುಲ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಅತ್ಯಂತ ಪ್ರಬುದ್ಧ ಹಾಗೂ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಕಣ್ಣೀರಿನ ಮೂಲಕ ನನ್ನ ಪ್ರೀತಿಯನ್ನು ಅಳೆಯಲು ಹೋಗಬೇಡಿ ಎಂದು ಹೇಳಿರುವ ಅಪ್ಸರಾ, ಬದುಕು ಕೊನೆಯಾದ ತಕ್ಷಣ ಪ್ರೀತಿ ಕೊನೆಯಾಗುವುದಿಲ್ಲ ಎಂಬುದನ್ನು ನನ್ನ ಅಜ್ಜಿಯೇ ನನಗೆ ಕಲಿಸಿಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಜಾನಕಿ ಅಮ್ಮ ಹಾಗೂ ಅಕ್ಕನ ನೆನಪು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಪೋಸ್ಟ್‌ನಲ್ಲಿ ಅಕ್ಕ ವರ್ಷಾಳನ್ನು ನೆನೆದಿರುವ ಅಪ್ಸರಾ, ಜಾನಕಿ ಅಜ್ಜಿಗೆ ತಮ್ಮ ಹಿರಿಯ ಅಕ್ಕ ವರ್ಷಾ ಎಂದರೆ ಜಗತ್ತಿನಲ್ಲೇ ಅತ್ಯಂತ ಪ್ರೀತಿ. ಅವರಿಬ್ಬರ ಗುಣಗಳು ಒಂದೇ ತರಹ ಇತ್ತು. ಆದರೆ ದುರದೃಷ್ಟವಶಾತ್ ವರ್ಷಾ ೨೦೨೩ರ ಆಗಸ್ಟ್‌ನಲ್ಲಿ ನಿಧನರಾದರು. ಆ ದೊಡ್ಡ ನಷ್ಟದಿಂದ ನಮ್ಮ ಕುಟುಂಬ ಇನ್ನೂ ಚೇತರಿಸಿಕೊಂಡಿಲ್ಲ. ಅಜ್ಜಿ ನಿಧನರಾದ ಈ ಸಮಯದಲ್ಲಿ ಅವರ ಜೊತೆಯಲ್ಲಿದ್ದು ಎಲ್ಲವನ್ನೂ ವರ್ಷಾ ಮಾಡಬೇಕಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು. ಈಗ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ ಎನ್ನುವುದೇ ನನಗೆ ನೆಮ್ಮದಿ ನೀಡುತ್ತಿರುವ ಏಕೈಕ ವಿಷಯ ಎಂದು ಭಾವುಕರಾಗಿದ್ದಾರೆ.

ಟೀಕಾಕಾರರಿಗೆ ತಕ್ಕ ಉತ್ತರ

ಕಳೆದ ಕೆಲವು ದಿನಗಳಿಂದ ನಾನು ಅಳುತ್ತಿಲ್ಲ ಎಂಬ ಕಾರಣಕ್ಕೆ ನನ್ನ ದುಃಖವನ್ನು ಪ್ರಶ್ನಿಸುತ್ತಿರುವ ಜನರನ್ನು ನೋಡುತ್ತಿದ್ದೇನೆ. ದಯವಿಟ್ಟು ನನ್ನ ಕಣ್ಣೀರಿನ ಆಧಾರದ ಮೇಲೆ ಅಜ್ಜಿಯ ಮೇಲಿನ ನನ್ನ ಪ್ರೀತಿಯನ್ನು ಅಳೆಯಬೇಡಿ. ಸಾವನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದನ್ನು ಜಾನಕಿ ಅಜ್ಜಿಯೇ ನಮಗೆ ಕಲಿಸಿದ್ದಾರೆ. ನನ್ನ ಜೀವನದ ಅನುಭವಗಳು ನನ್ನನ್ನು ಬಲಿಷ್ಠವಾಗಿಸಿವೆ. ದುಃಖ ಎನ್ನುವುದು ಯಾವಾಗಲೂ ಜೋರಾಗಿ ಅತ್ತು ತೋರಿಸುವುದಷ್ಟೇ ಅಲ್ಲ, ಕೆಲವೊಮ್ಮೆ ಅದು ಒಳಗೊಳಗೇ ಮೌನವಾಗಿ ಇರುತ್ತದೆ ಎಂದು ಅಪ್ಸರಾ ಬರೆದುಕೊಂಡಿದ್ದಾರೆ.

ಅಜ್ಜಿಯ ಸರಳತೆಯ ಬಗ್ಗೆ ಹೆಮ್ಮೆ

ಸಾರ್ವಜನಿಕ ಜೀವನದಲ್ಲಿ ಇದ್ದಾಗ ನಮ್ಮ ಬಗ್ಗೆ ಅನೇಕ ವದಂತಿಗಳು, ಕಲ್ಪಿತ ಕಥೆಗಳು ಕೇಳಿಬರುವುದು ಸಹಜ. ನಮ್ಮ ಕುಟುಂಬದ ಬಗ್ಗೆ ಸರಿಯಾಗಿ ತಿಳಿಯದವರೂ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವುದು ನೋವು ತರುತ್ತದೆ. ಆದರೆ ನನ್ನ ಅಜ್ಜಿ ಅತ್ಯಂತ ಕೋಮಲ ಮನಸ್ಸಿನ, ವಿನಮ್ರ ಹಾಗೂ ಯಾರನ್ನೂ ದ್ವೇಷಿಸದ ಗುಣ ಹೊಂದಿದ್ದರು. ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುತ್ತಿದ್ದ ಅವರ ಮಗುವಿನಂತಹ ಮುಗ್ಧ ಸ್ವಭಾವ ಎಲ್ಲರನ್ನೂ ಸೆಳೆಯುತ್ತಿತ್ತು. ಈಗ ಅವರ ನೆನಪುಗಳು ಮಾತ್ರ ನಮ್ಮೊಂದಿಗಿವೆ ಎಂದು ಅಪ್ಸರಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular