HomeLatest Newsಮುಂಬೈ ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ: ಯುವತಿಯ ಕಾಲು ಹಿಡಿದು ಪ್ಲಾಟ್‌ಫಾರ್ಮ್ ಮೇಲೆಯೇ ಮಲಗಿದ ಯುವಕ ವಿಡಿಯೋ...

ಮುಂಬೈ ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ: ಯುವತಿಯ ಕಾಲು ಹಿಡಿದು ಪ್ಲಾಟ್‌ಫಾರ್ಮ್ ಮೇಲೆಯೇ ಮಲಗಿದ ಯುವಕ ವಿಡಿಯೋ ಭಾರಿ ವೈರಲ್

ಮುಂಬೈ: ಪ್ರೀತಿ ಮನುಷ್ಯನನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗುತ್ತದೆ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಯುವಕ ಮುಂಬೈನ ಜನನಿಬಿಡ ರೈಲ್ವೆ ನಿಲ್ದಾಣದಲ್ಲೇ ಯುವತಿಯೊಬ್ಬಳ ಕಾಲು ಹಿಡಿದು ಪ್ಲಾಟ್‌ಫಾರ್ಮ್ ಮೇಲೆಯೇ ಮಲಗಿ ಹೈಡ್ರಾಮಾ ಮಾಡಿರುವ ವಿಲಕ್ಷಣ ಘಟನೆ ನಡೆದಿದೆ. ಮುಂಬೈನ ಬೊರಿವಲಿ (Borivali) ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಲೈಟ್ ಬ್ಲೂ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುವ ಯುವಕನೊಬ್ಬ ಪ್ಲಾಟ್‌ಫಾರ್ಮ್ ನೆಲದ ಮೇಲೆ ಅಡ್ಡಲಾಗಿ ಮಲಗಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲಿ ನಿಂತಿರುವ ಯುವತಿಯೊಬ್ಬಳ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಹಸಿರು ಮತ್ತು ಬಿಳಿ ಬಣ್ಣದ ಡ್ರೆಸ್ ಧರಿಸಿ, ಮುಖಕ್ಕೆ ಶಾಲು ಮುಚ್ಚಿಕೊಂಡಿರುವ ಆ ಯುವತಿ, ತನ್ನ ಕಾಲನ್ನು ಆತನ ಹಿಡಿತದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಯುವಕ ಮಾತ್ರ ಕಾಲನ್ನು ಬಿಡದೆ ಹಠ ಹಿಡಿದು ಕೂತಿದ್ದಾನೆ. ಈ ವಿಡಿಯೋದ ಮೇಲೆ ಟ್ರೂ ಲವ್ (True Love) ಮತ್ತು ಬೊರಿವಲಿ ರೈಲ್ವೆ ಸ್ಟೇಷನ್ ಎಂದು ಬರೆಯಲಾಗಿದೆ. ಆದರೆ ಈ ಘಟನೆಗೆ ನಿಖರವಾದ ಕಾರಣ ಏನೆಂಬುದು ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

View this post on Instagram

A post shared by Sakil mallik (@mallik_vai____vlogs)

ರೈಲ್ವೆ ಪೊಲೀಸರ ಎಂಟ್ರಿ, ಸ್ಥಳದಲ್ಲಿ ಸೇರಿದ ಜನಸ್ತೋಮ

ಪ್ಲಾಟ್‌ಫಾರ್ಮ್ ಮೇಲೆಯೇ ಈ ಜೋಡಿಯ ಹೈಡ್ರಾಮಾ ನಡೆಯುತ್ತಿರುವುದನ್ನು ಕಂಡು ಸ್ಥಳದಲ್ಲಿ ಪ್ರಯಾಣಿಕರು ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಇಬ್ಬರ ನಡುವೆ ಮಧ್ಯಪ್ರವೇಶಿಸಿದ್ದಾರೆ. ಅಲ್ಲದೆ ಅಲ್ಲಿ ನೆರೆದಿದ್ದ ಕುತೂಹಲಿ ಜನರನ್ನು ಜಾಗ ಖಾಲಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ವಿಡಿಯೋದ ಮುಂದಿನ ಭಾಗದಲ್ಲಿ ಪೊಲೀಸರು ಆ ಯುವಕನನ್ನು ನೆಲದ ಮೇಲೆ ಕೂರಿಸಿ ತೀವ್ರ ವಿಚಾರಣೆ ನಡೆಸುತ್ತಿರುವುದು ಕೂಡ ಕಂಡುಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳ ಸುರಿಮಳೆ

ಈ ವಿಡಿಯೋ ಸದ್ಯ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರೋಬ್ಬರಿ 60 ಲಕ್ಷಕ್ಕೂ (6 Million) ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನ ನಿಜವಾದ ಪ್ರೀತಿ ಎಂದು ಕರೆಯುತ್ತಿದ್ದರೆ, ಇನ್ನೂ ಕೆಲವರು ಸಾರ್ವಜನಿಕವಾಗಿ ಇಂತಹ ಹೈಡ್ರಾಮಾ ಮಾಡುವ ಅಗತ್ಯವಿರಲಿಲ್ಲ ಎಂದು ಯುವಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋಗೆ ಕಮೆಂಟ್ ಮಾಡಿರುವ ಬಳಕೆದಾರರೊಬ್ಬರು, ಪ್ರೀತಿ ಅನ್ನೋದು ತುಂಬಾ ಕೆಟ್ಟ ಜಗತ್ತು ಎಂದು ಬರೆದರೆ, ಮತ್ತೊಬ್ಬರು ಈ ಕಾಲದಲ್ಲಿ ಈ ತರ ಪ್ರೀತಿಸೋರು ಎಲ್ಲಿ ಸಿಗ್ತಾರೆ ಭಾಯ್ ಎಂದಿದ್ದಾರೆ.

ಇನ್ನು ಕೆಲವರು ಯುವಕನ ಕಾಲೆಳೆದಿದ್ದು, ಇಷ್ಟೊಂದು ಡ್ರಾಮಾ ಮಾಡೋ ಬದಲು, ನಿನ್ನ ಹೆತ್ತ ತಂದೆ-ತಾಯಿಯ ಕಾಲು ಮುಟ್ಟಿ ಆಶೀರ್ವಾದ ತಗೋ, ಜೀವನದಲ್ಲಿ ಮುಂದೆ ಬರ್ತೀಯಾ ಎಂದು ತರಾಟೆಗೆ ತಗೆದುಕೊಂಡಿದ್ದಾರೆ. ಪ್ರಸ್ತುತ ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯಾಗಲಿ ಅಥವಾ ಮುಂಬೈ ಪೊಲೀಸರಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular