HomeKarnatakaಚಿಲ್ಲರೆ ಇಲ್ಲದಕ್ಕೆ ಸಾರಿಗೆ ಸಚಿವರನ್ನೇ ಬಸ್ ನಿಂದ ಕೆಳಗಿಳಿಸಿದ ಕಂಡಕ್ಟರ್: ಮಾಸ್ಕ್ ಧರಿಸಿ ಸಚಿವ ಬೈರತಿ...

ಚಿಲ್ಲರೆ ಇಲ್ಲದಕ್ಕೆ ಸಾರಿಗೆ ಸಚಿವರನ್ನೇ ಬಸ್ ನಿಂದ ಕೆಳಗಿಳಿಸಿದ ಕಂಡಕ್ಟರ್: ಮಾಸ್ಕ್ ಧರಿಸಿ ಸಚಿವ ಬೈರತಿ ಸುರೇಶ್ ಬಸ್ ಪ್ರಯಾಣದ ವೇಳೆ ಘಟನೆ

ಬೆಂಗಳೂರು: ಬಿಎಂಟಿಸಿ ಬಸ್ ಗಳ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಲು ಸಾರಿಗೆ ಸಚಿವ ಬೈರತಿ ಸುರೇಶ್ ಮಾಸ್ಕ್ ಧರಿಸಿ ಪ್ರಯಾಣಿಸಿದ್ದಾರೆ. ಈ ವೇಳೆ ಚಾಲಕರು, ನಿರ್ವಾಹಕರ ನಿರ್ಲಕ್ಷ್ಯ ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದ್ದಾರೆ.

ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 9.10ರವರೆಗೆ ಸಚಿವ ಬೈರತಿ ಸುರೇಶ್ ಅವರು ಅಧಿಕಾರಿಗಳಿಗೂ ಮಾಹಿತಿ ನೀಡದೆ ಮಾಸ್ಕ್ ಧರಿಸಿ ಗುರುತು ಸಿಗದಂತೆ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ, ಬೆಂಗಳೂರಿನ ಜಯಮಹಲ್ ಹೆಣ್ಣೂರು ಡಿಪೋ ವ್ಯಾಪ್ತಿಯ ಬಸ್ ಗಳಲ್ಲಿ ಪ್ರಯಾಣಿಸಿದ್ದುಮ ಸಾಮಾನ್ಯ ಪ್ರಯಾಣಿಕರಂತೆ ರಶ್ ನಲ್ಲಿಯೇ ನಿಂತುಕೊಂಡು ಸಚಿವರು ಪ್ರಯಾಣಿಸಿದ್ದಾರೆ.

ಈ ವೇಳೆ ಚಾಲಕರು, ನಿರ್ವಾಹಕರು ಪ್ರಯಾಣಿಕರೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸುತ್ತಿರುವುದು ಸಚಿವರ ಗಮನಕ್ಕೆ ಬಂದಿದೆ. ಭೂಪಸಂದ್ರದಿಂದ ಹೆಬ್ಬಾಳಕ್ಕೆ ಬಸ್ ನಲ್ಲಿ ಸಂಚರಿಸುವಾಗ ಸಚಿವರು ಎರಡು ಟಿಕೆಟ್ ನೀಡುವಂತೆ ನಿರ್ವಾಹಕರಿಗೆ 100 ರೂ. ನೀಡಿದ್ದಾರೆ. ನಿರ್ವಾಹಕ 12 ರೂ. ಚಿಲ್ಲರೆ ಕೊಡುವಂತೆ ಸೂಚಿಸಿದ್ದು, ಮಾಸ್ಕ್ ಧರಿಸಿದ್ದ ಸಚಿವರ ಗುರುತು ನಿರ್ವಾಹಕರಿಗೆ ಸಿಗಲಿಲ್ಲ. ಚಿಲ್ಲರೆ ಇಲ್ಲವೆಂದು ಸಚಿವರು ತಿಳಿಸುತ್ತಿದ್ದಂತೆ ಹಾಗಾದರೆ ಬಸ್ ನಿಂದ ಕೆಳಗಿಳಿಯಿರಿ ಎಂದು ನಿರ್ವಾಹಕರು ತಾಕೀತು ಮಾಡಿದ್ದಾರೆ. ಆಗ ಸಚಿವರು ಬಸ್ ನಿಂದ ಕೆಳಗೆ ಇಳಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಯಾಣಿಕರಿಗೆ ಕೂಡ ಚಿಲ್ಲರೆ ವಿಚಾರಕ್ಕೆ ಬಸ್ ನಿಂದ ಕೆಳಗಿಳಿಸಲಾಗುತ್ತಿದೆ ಎಂಬುದನ್ನು ಅರಿತ ಸಚಿವ ಬೈರತಿ ಸುರೇಶ್ ನಿರ್ವಾಹಕರ ವಿರುದ್ಧ ಕ್ರಮ ಸೂಚನೆ ನೀಡಿದ್ದಾರೆ. ಉಳಿದಂತೆ ನಿಗದಿತ ಸ್ಥಳ ಬದಲಿಗೆ ಬೇರೆ ಕಡೆ ಬಸ್ ನಿಲ್ಲಿಸುವುದು, ವೇಗದ ಚಾಲನೆ, ಪ್ರಯಾಣಿಕರೊಂದಿಗೆ ನಿರ್ಲಕ್ಷ್ಯದಿಂದ ವರ್ತನೆ, ಚಿಲ್ಲರೆ ನೀಡದೆ ಇರುವುದು, ಅನೇಕ ಸಮಸ್ಯೆಗಳನ್ನು ಸಚಿವರು ಖುದ್ದಾಗಿ ತಿಳಿದು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular